ನ್ಯೂಯಾರ್ಕ್‌ನ ಪ್ರಥಮ ಮಹಿಳಾ ಗವರ್ನರ್‌ ಆಗಿ ಕ್ಯಾಥಿ ಹೋಚಲ್ ನೇಮಕ

ಅಮೆರಿಕಾ, ಆ. 24: ನ್ಯೂಯಾರ್ಕ್‌ ರಾಜ್ಯದ ನೂತನ ಮಹಿಳಾ ಗವರ್ನರ್ ಆಗಿ ಕ್ಯಾಥಿ ಹೋಚಲ್‌ ಅವರು ಆಯ್ಕೆಯಾಗಿದ್ದಾರೆ.

ಲೈಂಗಿಕ ದೌರ್ಜ್ಯನದ ಆರೋಪ ಎದುರಿಸುತ್ತಿರುವ ಅನ್‌ಡ್ರಿವ್ ಎಂ.ಕ್ಯೂಮೊ ಅವರು ಗವರ್ನರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕ್ಯಾಥಿ ಹೋಚಲ್‌ ಅವರನ್ನು ನೇಮಿಸಲಾಗಿದೆ.

ರಾಜ್ಯದ ಮುಖ್ಯ ನ್ಯಾಯಮೂರ್ತಿಯಾದ ಜಾನೆಟ್‌ ಡಿಫಿಯಾರೆ ಅವರ ಸಮ್ಮುಖದಲ್ಲಿ ಖಾಸಗಿ ಸಮಾರಂಭದಲ್ಲಿ ಡೆಮಾಕ್ರಾಟ್‌ ಕ್ಯಾಥಿ ಹೋಚಲ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು.

Exit mobile version