ನಟಿ ಕತ್ರಿನಾ ಮತ್ತು ಪತಿ ವಿಕ್ಕಿಗೆ ಜೀವ ಬೆದರಿಕೆ ; ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

Katrina Kaif

ಬಾಲಿವುಡ್(Bollywood) ಖ್ಯಾತ ನಟಿ(Actress) ಕತ್ರಿನಾ ಕೈಫ್(Kathrina Kaif) ಮತ್ತು ಪತಿ ವಿಕ್ಕಿ ಕೌಶಲ್‌ಗೆ(Vicky Kaushal) ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ(Social Media) ಬೆದರಿಕೆ ಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸರು(Mumbai Police) ಸೋಮವಾರ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್‌ಗೆ ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ಮುಂಬೈ ಪೊಲೀಸರು ಸೋಮವಾರ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಚುರುಕು ತನಿಖೆ ಆರಂಭಿಸಿದ್ದಾರೆ.

ವಿಕ್ಕಿ ಕೌಶಲ್ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಅಪರಿಚಿತ ವ್ಯಕ್ತಿಗಳು ಬೆದರಿಕೆ ಹಾಕುತ್ತಿದ್ದಾರೆ ಮತ್ತು ಬೆದರಿಕೆ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಕೌಶಲ್ ಹೇಳಿದ್ದಾರೆ. ಆ ವ್ಯಕ್ತಿ ಕತ್ರಿನಾ ಕೈಫ್ ಅವರನ್ನು ಹಿಂಬಾಲಿಸುತ್ತಿದ್ದಾನೆ ಮತ್ತು ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪದಲ್ಲಿ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 9 ರಂದು ರಾಜಸ್ಥಾನದ(Rajasthan) ಸವಾಯಿ ಮಾಧೋಪುರದಲ್ಲಿರುವ ಐಷಾರಾಮಿ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹವಾದರು.

ಟೈಗರ್ 3(Tiger 3) ಚಿತ್ರದಲ್ಲಿ ಅಭಿನಯಿಸಿದ್ದು, ಕತ್ರಿನಾ ಕೈಫ್ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದು ಸಲ್ಮಾನ್ ಖಾನ್ ನಟನೆಯ 3ನೇ ಭಾಗವಾಗಿ ಬಿಡುಗಡೆಯಾಗಲಿದ್ದು, ಸಿನಿಪ್ರೇಕ್ಷಕರಿಗೆ ಹೆಚ್ಚು ನಿರೀಕ್ಷೆಯನ್ನು ಮೂಡಿಸಿದೆ. ಟೈಗರ್ 3ರ ಹೊರತಾಗಿ, ಕತ್ರಿನಾ ಕೈಫ್ ಅವರ ಮುಂಬರುವ ಚಲನಚಿತ್ರಗಳಲ್ಲಿ ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಫೋನ್ ಭೂತ್, ವಿಜಯ್ ಸೇತುಪತಿಯ ಮೆರ್ರಿ ಕ್ರಿಸ್‌ಮಸ್ ಮತ್ತು ಆಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಜೀ ಲೆ ಜರಾ ಸೇರಿವೆ.

ಇದರ ಜೊತೆಗೆ ವಿಕ್ಕಿ ಕೌಶಲ್ ಅವರ ಚಿತ್ರಗಳು ಬಿಡುಗಡೆಯಾಗಲು ಸಜ್ಜಾಗಿದೆ. ಸಾರಾ ಅಲಿ ಖಾನ್ ಅವರೊಂದಿಗೆ ದಿನೇಶ್ ವಿಜನ್ ಅವರ ರೋಮ್-ಕಾಮ್, ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಅವರೊಂದಿಗೆ ಮೇಘನಾ ಗುಲ್ಜಾರ್ ಅವರ ಸ್ಯಾಮ್ ಬಹದ್ದೂರ್, ಆದಿತ್ಯ ಧರ್ ಅವರ ದಿ ಇಮ್ಮಾರ್ಟಲ್ ಅಶ್ವತ್ಥಾಮ ಮತ್ತು ಶಶಾಂಕ್ ಖೇತಾನ್ ಅವರ ಗೋವಿಂದ ನಾಮ್ ಮೇರಾ ಅವರೊಂದಿಗೆ ಭೂಮಿ ಪೆಡ್ನೇಕರ್ ಮತ್ತು ಕಿಯಾರಾ ಕಾಣಿಸಿಕೊಳ್ಳಲಿದ್ದಾರೆ.

ವಿಕ್ಕಿ ಕೌಶಲ್ ಕೊನೆಯದಾಗಿ ಶೂಜಿತ್ ಸಿರ್ಕಾರ್ ಅವರ ಸರ್ದಾರ್ ಉದಾಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ತಮ್ಮ ಮುಂದಿನ ಸಿನಿಮಾದತ್ತ ಗಮನಹರಿಸುತ್ತಿದ್ದಾರೆ.

Exit mobile version