ಯಾರಾಗ್ತಾರೆ ಕೋಟ್ಯಾಧಿಪತಿ ಮೋಸ!

kbc cheating

 ಎಚ್ಚರ ಕೋಟಿ ಕೋಟಿ ಆಸೆ ತೋರಿಸಿ ವಂಚಿಸ್ತಾರೆ ಕೆಬಿಸಿ ಲಾಟರಿಹೆಸರಲ್ಲಿ ಭರ್ಜರಿ ಮೋಸ. ವಂಚನಾ ಜಾಲಕ್ಕೆ ನೀವೂ ಬಲಿಯಾಗಬಹುದು ಎಚ್ಚರ! ಕೌನ್‌ ಬನೇಗಾ ಕರೋಡ್‌ಪತಿ ಹೆಸ್ರಲ್ಲಿ ಭಾರೀ ಮೋಸ, ಕೋಟಿ ಕೋಟಿ ಆಸೆ ತೋರಿಸಿ ಲಕ್ಷ ಲಕ್ಷ ಲೂಟಿ, ಆನ್‌ಲೈನ್‌ನಲ್ಲಿ ಹಣ ಕಳುಹಿಸಲು ಹೇಳಿ ವಂಚನೆ, ವಿಡಿಯೋ ತೋರಿಸಿ ಮೂರು ನಾಮ ಹಾಕ್ತಾರೆ ಜೋಕೆ

ನೀವು ಅದೃಷ್ಟವಂತರು. ನಿಮ್ಮ ನಂಬರ್‌ಗೆ 25 ಲಕ್ಷ ರೂಪಾಯಿ ಲಾಟರಿ ಬಂದಿದೆ. ಈಗಲೇ ನಿಮ್ಮ ಹಣ ಪಡೆದುಕೊಳ್ಳಿ. ಈ ರೀತಿ ಹೇಳಿ ನಿಮ್ಮ ಮೊಬೈಲ್‌ಗೆ ಮೇಸೇಜ್‌, ವಿಡಿಯೋ ಅಥವಾ ವಾಟ್ಸ್ಆಪ್‌ ಸಂದೇಶ ಬಂದಿದೆಯಾ? ಹಾಗಾದ್ರೆ ಎಚ್ಚರ. ಇಪ್ಪತ್ತೈದು ಲಕ್ಷದ ಆಸೆ ತೋರಿಸಿ ನಿಮ್ಮ ಮನೆ, ಮಠ ಲೂಟಿ ಮಾಡ್ತಾರೆ ಜೋಕೆ. ಯಸ್‌. ಕೆಬಿಸಿ ಲಾಟರಿ ಅನ್ನೋ ದೊಡ್ಡ ವಂಚನಾ ಜಾಲ ಸಾವಿರಾರು ಮಂದಿಗೆ ಮೋಸ ಮಾಡ್ತಿದೆ. ಈ ಖದೀಮರ ತಂಡ ವಿಚಿತ್ರವಾಗಿ ಜನರನ್ನು ನಂಬಿಸಿ ವಂಚಿಸ್ತಿದೆ. ಇದು ಮೊದಲಿಗೆ ನಿಮ್ಮ ಮೊಬೈಲ್‌ಗೆ ಕರೆ ಮಾಡಿ ನೀವು ಕೆಬಿಸಿ ಲಾಟರಿಯಲ್ಲಿ 25 ಲಕ್ಷ ಗೆದ್ದಿದ್ದೀರಿ ಅಂತ ಹೇಳಿ ಕರೆ ಮಾಡ್ತಾರೆ. 

ಆಮೇಲೆ ನಿಮಗೆ ಹೇಗೆ ಮೋಸ ಮಾಡ್ತಾರೆ ಅಂದರೆ, ನೀವು ಬಹುಮಾನ ಗೆದ್ದಿರುವ ಹಣ ಪಡೆಯೋಕೆ ನೀವು ತೆರಿಗೆ ಕಟ್ಟಬೇಕು ಅಂತ ಹೇಳಿ ಪುಸಲಾಯಿಸಿ ನಿಮ್ಮಿಂದ ಹಣ ವಸೂಲಿ ಮಾಡಲು ಪ್ರಾರಂಭಿಸ್ತಾರೆ. ಒಂದು ವೇಳೆ ನೀವು ಅನುಮಾನ ವ್ಯಕ್ತಪಡಿಸಿದ್ರೆ ನಿಮಗೆ ನಾನಾ ವಿಡಿಯೋ ಕಳುಹಿಸಿ ನಂಬಿಸ್ತಾರೆ. ನಿಮ್ಮಲ್ಲಿ ವಿಶ್ವಾಸ ಮೂಡಿಸಲು ಖದೀಮರ ತಮ್ಮ ನಕಲಿ ಕಚೇರಿಯ ವಿಡಿಯೋ ಕಳುಹಿಸ್ತಾರೆ. ನಿಮ್ಮ ಚೆಕ್‌ ರೆಡಿಯಾಗ್ತಿದೆ. ನಿಮಗೆ ಈ ಕಳುಹಿಸ್ತಿದ್ದೀವಿ ಅಂತ ವಿಡಿಯೋ ಮಾಡಿ ಕಳುಹಿಸಿ ಆ ಮೂಲಕ ನಿಮ್ಮ ನಂಬಿಕೆ ಗಳಿಸ್ತಾರೆ.

ಅಷ್ಟು ಮಾತ್ರ ಅಲ್ಲ ನಿಮ್ಮ ನಂಬಿಕೆ ಬಲವಾಗಲು ಕೆಬಿಸಿ ಲಾಟರಿಯಲ್ಲಿ ಹಣ ಗೆದ್ದಿದ್ದೀವಿ ಅಂತ ಹೇಳಿ ವಿಡಿಯೋ ಮಾಡಿರುವ ಸಾಮಾನ್ಯ ಜನರ ನಕಲಿ ವಿಡಿಯೋಗಳನ್ನು ಕಳುಹಿಸ್ತಾರೆ. ಈ ವಿಡಿಯೋಗಳಲ್ಲಿ ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಗೃಹಿಣಿಯರು ಅಂತ ಹೇಳಿಕೊಳ್ಳುವ ವಿಡಿಯೋಗಳನ್ನು ಕಳುಹಿಸಿ ನಿಮ್ಮನ್ನು ಬಕ್ರಾ ಮಾಡ್ತಾರೆ. ಈ ವಂಚಕರು ಅಮೀತಾಬ್ ಬಚ್ಚನ್‌ ಅವರ ಫೋಟೋ,  ರಾಣಾ ಪ್ರತಾಪ್ ಸಿಂಗ್ ಅನ್ನುವವರ ಐಡಿ ಕಾರ್ಡ್‌ ತೋರಿಸಿ ವಂಚಿಸ್ತಾರೆ. ಅಸಲಿಗೆ ಈ ಐಡಿ ಕಾರ್ಡೇ ನಕಲಿ ಅಲ್ಲದೆ ಇವರು ನಿಮಗೆ ಮೋಸ ಮಾಡಿದ ಮೇಲೆ ನಂಬರ್‌ ಸ್ವಿಚ್‌ ಆಫ್‌ ಮಾಡ್ತಾರೆ. ಆದ್ರೆ ವಾಟ್ಸಪ್‌ ಗ್ರೂಪ್‌ಗಳಲ್ಲಿ ಮಾತ್ರ ಆಕ್ಟೀವ್ ಆಗಿರ್ತಾರೆ.

ಈ ರೀತಿ ಕೆಬಿಸಿ ಲಾಟರಿ ಅನ್ನೋ ವಂಚನಾ ಜಾಲ ಅತ್ಯಂತ ಸಕ್ರೀಯವಾಗಿದೆ. ಯಾರಾಗ್ತಾರೆ ಕೋಟ್ಯಾಧಿಪತಿ ಹೆಸರಲ್ಲಿ ಇವರು ಈಗಾಗಲೇ ಸಾಕಷ್ಟು ಮಂದಿಯಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡಿಯಾಗಿದೆ. ಒಂದು ವೇಳೆ ನಿಮಗೆ ಇಂಥಾ ಕಾಲ್‌ ಅಥವಾ ಮೆಸೇಜ್ ಬಂದ್ರೆ ಎಚ್ಚರ. ಇಂಥಾ ವಂಚನಾ ಜಾಲಕ್ಕೆ ಬಿದ್ದು ನಿಮ್ಮ ಹಣ, ಮನೆ, ಮಠ ಕಳೆದುಕೊಳ್ಳಬೇಡಿ.

Exit mobile version