ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸ ಧ್ವಂಸ ಮಾಡಿದ 8 ಮಂದಿ ಬಂಧನ ; ಎಸ್‌ಐಟಿ ತನಿಖೆಗೆ ಆಗ್ರಹ!

cm

ದೆಹಲಿ(Delhi) ಮುಖ್ಯಮಂತ್ರಿಗಳಾದ(ChiefMinister) ಅರವಿಂದ್ ಕೇಜ್ರಿವಾಲ್(Aravind Kejrival) ಅವರ ನಿವಾಸದ ಮೇಲೆ ನಡೆದ ದಾಳಿಯ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಜನರನ್ನು ಗುರುವಾರ ಬಂಧಿಸಿದ್ದಾರೆ. ಇನ್ನೂ ಕೆಲವರ ಪತ್ತೆಗೆ ಬಲೆ ಬೀಸಿದ್ದು, ಆರು ಪೊಲೀಸರ ತಂಡಗಳು ದಾಳಿ ನಡೆಸಲು ಸಜ್ಜಾಗಿದೆ.

ಆಮ್ ಆದ್ಮಿ ಪಕ್ಷದ (AAP) ಶಾಸಕ ಸೌರಭ್ ಭಾರದ್ವಾಜ್ ಅವರು ಮಾರ್ಚ್ 30 ರಂದು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಮೇಲೆ ದಾಳಿ ನಡೆಸಿ ಸಂಪೂರ್ಣ ಧ್ವಂಸ ಮಾಡಿದ್ದಾರೆ. ಈ ಆರೋಪದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಎಎಪಿ ಅರ್ಜಿ ಸಲ್ಲಿಸಿದೆ. ದಾಳಿ ಮತ್ತು ದುಷ್ಕರ್ಮಿಗಳಿಗೆ ಸಂಬಂಧಿಸಿದಂತೆ ಸ್ವತಂತ್ರ, ನ್ಯಾಯಸಮ್ಮತ ಮತ್ತು ಕಾಲಮಿತಿಯ ಅಪರಾಧ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು(SIT) ರಚಿಸುವಂತೆ ಸೌರಭ್ ಭಾರದ್ವಾಜ್ ಮನವಿ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಸೌರಭ್ ಭಾರದ್ವಾಜ್ ತಮ್ಮ ಮನವಿಯಲ್ಲಿ ಪ್ರತ್ಯೇಕವಾಗಿ ಆರೋಪಿಸಿದ್ದಾರೆ.

ಇದು “ದೆಹಲಿ ಪೋಲೀಸರ ನಿಗೂಢ ಸಹಭಾಗಿತ್ವದಿಂದ ನಡೆಸಲಾಗಿದೆ” ಎಂದು ಮನವಿಯಲ್ಲಿ ಕಟುವಾಗಿ ಹೇಳಿದ್ದಾರೆ. ಸದ್ಯ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸಿಎಂ ಮನೆ ಸುತ್ತ ಮುತ್ತಲಿನ ಸಿಸಿಟಿವಿ ಕ್ಯಾಮೆರಾ ಒಡೆದಿದ್ದು, ಸಿಎಂ ಮನೆ ಸುತ್ತಲಿನ ಭದ್ರತಾ ತಡೆಗೋಡೆ ಒಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ದಿಲ್ಲಿ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದಲ್ಲಿ, ಕೇಜ್ರಿವಾಲ್ ಅವರು ಕಾಶ್ಮೀರ ಫೈಲ್ಸ್ ಪ್ರಚಾರಕ್ಕಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

AAP ಕೇಜ್ರಿವಾಲ್ ಅವರಿಗೆ ಜೀವ ಬೇದರಿಕೆ ಹಾಕಲಾಗಿದೆ ಎಂಬುದು ತಿಳಿದುಬಂದಿದೆ. ಸಿಎಂ ನಿವಾಸದ ಮೇಲಿನ ದಾಳಿಯ ನಂತರ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು “ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲಲು ಬಿಜೆಪಿ ಪಿತೂರಿ ನಡೆಸುತ್ತಿದೆ” ಎಂದು ಟ್ವೀಟ್ ಮಾಡಿ ಆರೋಪಿಸಿದ್ದಾರೆ.

Exit mobile version