ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಗರಿ

ಬೆಂಗಳೂರು ಆ 24 : ಬೆಂಗಳೂರಿನ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಕೊಡುವ  ಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಆ್ಯಂಡ್ ಸೆಂಟ್ರಲ್ ಏಷ್ಯಾ (ಭಾರತ ಮತ್ತು ಮಧ್ಯ ಏಷ್ಯಾದಲಿಯ್ಲೇ ಅತುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ) ಏಷ್ಯಾ ವಿಮಾನ ನಿಲ್ದಾಣಗಳಲ್ಲೇ ಅತ್ಯುತ್ತಮ ಸಿಬ್ಬಂದಿ ಸೇವೆ ಪ್ರಶಸ್ತಿಗೆ ಕೆಂಪೇಗೌಡ ವಿಮಾನ ನಿಲ್ದಾಣ ಭಾಜನವಾಗಿದೆ.

ಈ ಬಗ್ಗೆ ಪ್ರತಿಷ್ಟಿತ ಸಂಸ್ಥೆ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್‌ ವತಿಯಿಂದ ನಡೆಸಲಾದ ಸಮೀಕ್ಷೆಯಲ್ಲಿ ಗ್ರಾಹಕರು ಇತರೆ ವಿಮಾನ‌ ನಿಲ್ದಾಣಗಳಲ್ಲಿ‌ನ ಸಿಬ್ಬಂದಿ ನೀಡುವ ಸೇವೆಗಿಂತ ಕೆಐಎ ವಿಮಾನ ನಿಲ್ದಾಣದ ಸೇವೆಗೆ ಅತ್ಯತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಸಿಇಓ ಹರಿ ಮರಾರ್ ಮಾತನಾಡಿ, ಈ ಪ್ರಶಸ್ತಿ ಲಭಿಸಿದ್ದು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನಮ್ಮೆಲ್ಲರಿಗೂ ಸಂತಸ ತಂದಿದೆ. ಇಲ್ಲಿನ ಸಿಬ್ಬಂದಿ ಕಾರ್ಯಕ್ಷಮತೆಯಿಂದ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ಮತಹಾಕಿದ ಎಲ್ಲಾ ಪ್ರಯಾಣಿಕರಿಗೂ ಅಭಿನಂದನೆ ತಿಳಿಸಿದ್ದಾರೆ.

Exit mobile version