Bengaluru: ಬೆಂಗಳೂರಿನ ವೈಟ್ ಫೀಲ್ಡ್ (Kerala FIR bengaluru police) ಸೈಬರ್ ಪೊಲೀಸರಿಗೆ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಆ ಸೈಬರ್ ಕ್ರೈಮ್ (Cyber Crime) ಪ್ರಕರಣವನ್ನು ಭೇದಿಸಲು
ಕೇರಳಕ್ಕೆ (Kerala) ಹೋಗಿರುವ ಸಿಇಎನ್ ಇನ್ಸ್‌ಪೆಕ್ಟರ್ ಶಿವ ಪ್ರಕಾಶ್ (Shiva Prakash) ಸೇರಿದಂತೆ ನಾಲ್ವರು ಪೋಲೀಸರ ವಿರುದ್ಧ ಕೇರಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಘಟನೆಯ ವಿವರ: ಸಾಫ್ಟ್ವೇರ್ ಇಂಜಿನಿಯರ್ (Software Engineer) ಒಬ್ಬರ ಬಳಿ ಉದ್ಯೋಗ ಕೊಡಿಸುವುದಾಗಿ ಹೇಳಿ ದುಷ್ಕರ್ಮಿಗಳು ಆನ್ಲೈನ್ (Online) ಮೂಲಕ ಬರೊಬ್ಬರಿ 26 ಲಕ್ಷ ರೂ.
ಹಣವನ್ನ ಪಡೆದು ವಂಚನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವೈಟ್ ಫೀಲ್ಡ್ ಸೈಬರ್ ಪೊಲೀಸರಿಗೆ (Cyber Police) ಚಂದಕ್ ಶ್ರೀಕಾಂತ್ (Chandak Srikanth)ಎಂಬುವವರು ದೂರು ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಇಎನ್ ಪೊಲೀಸರು ಸಿಕ್ಕಿರುವ ಸುಳಿವಿನ ಅವರು ಮೇರೆಗೆ (Kerala FIR bengaluru police) ಕೇರಳಕ್ಕೆ ತೆರಳಿದ್ದರು.

ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರೇ ಬಂಧನ !
ಮೊದಲನೆಯದಾಗಿ, ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಐಸಾಕ್ (Isaq) ಎಂಬಾತನ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಆತ ಮಡಿಕೇರಿಯಲ್ಲಿದ್ದು (Madikeri), ಆತನ ಅಕೌಂಟ್ಗೆ 2 ಕೋಟಿ ಹಣ ವರ್ಗಾವಣೆ
ಆಗಿರುವುದು ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಪತ್ತೆಯಾಗಿದೆ. ಇಲ್ಲಿ ಸಿಕ್ಕಿರುವ ಸಾಕ್ಷಿಗಳ ಆಧಾರದ ಮೇರೆಗೆ ಇದರ ತನಿಖೆ ಮುಂದುವರಿಸಿಕೊಂಡು ಹೋದಂತೆ ವೈಟ್ ಫೀಲ್ಡ್ ಸಿಇಎನ್ (CEN) ಇನ್ಸ್ ಪೆಕ್ಟರ್
ಶಿವಪ್ರಕಾಶ್ ಮತ್ತು ಅವರ ತಂಡ ಕೇರಳ ರಾಜ್ಯದ ಕೊಚ್ಚಿ (Kochi) ಜಿಲ್ಲೆಯ ಕಲ್ಲಂಚೇರಿಗೆ (Kallancheri) ಪ್ರಯಾಣ ಬೆಳೆಸಿತು. ಅಲ್ಲಿ ಇವರಿಗೆ ನೌಶಾದ್ (Naushad) ಎಂಬಾತ ಇಂಟರ್‌ನೆಟ್ (Internet)
ವಂಚನೆ ಮಾಡಿರುವ ಬಗ್ಗೆ ಅನೇಕ ಸಾಕ್ಷ್ಯಗಳು ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಪೊಲೀಸರು ತೆರಳಿದ್ದರು.
ಇದನ್ನೂ ಓದಿ : ಪಿಜಿ, ಪೇಯಿಂಗ್ ಹಾಸ್ಟೆಲ್ ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್‌ಟಿ ಅನ್ವಯ, ಇನ್ನಷ್ಟು ಏರಿಕೆಯಾಗಲಿದೆ ತಿಂಗಳ ಬಾಡಿಗೆ
ಇನ್ಸ್‌ಪೆಕ್ಟರ್ ಶಿವಪ್ರಕಾಶ್‌ರಿಂದ 3 ಲಕ್ಷ ರೂ.ಗೆ ಲಂಚದ ಬೇಡಿಕೆ !
ಇನ್ನು ಕರ್ನಾಟಕದಿಂದ ಈ ಪ್ರಕಾರಣದ ಜಾಡು ಹಿಡಿದು ಕೇರಳಕ್ಕೆ ಹೊರಟಿದ್ದ ಪೊಲೀಸರಿಗೆ ಆರೋಪಿ ನೌಶಾದ್ ಸಿಕ್ಕಿದ್ದ. ಈ ವೇಳೆ ಈ ಕೃತ್ಯವನ್ನು ಮುಚ್ಚಿ ಹಾಕಲು ಇನ್ಸ್‌ಪೆಕ್ಟರ್ ಶಿವಪ್ರಕಾಶ್ (Shiva Prakash)
ಹಾಗೂ ಅವರ ತಂಡ ಆರೋಪಿ ನೌಶಾದ್ ಬಳಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಆರೋಪಿ ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಆ ಬಳಿಕ ಬೆಂಗಳೂರು (Bengaluru) ಪೊಲೀಸರು
ಆರೋಪಿ ನೌಶಾದ್‌ನಿಂದ 3.95 ಲಕ್ಚ ಲಂಚದ ಹಣವನ್ನ ಮುಂಗಡವಾಗಿ ತೆಗೆದುಕೊಳ್ಳುವಾಗ ಕೇರಳ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಆ ಸಂದರ್ಭದಲ್ಲಿ ನಾವು ಪ್ರಕರಣವೊಂದರ ತನಿಖೆಗೆ ಬಂದಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದರೂ ಸಹ ಹೀಗಿದ್ದರೂ ಶಿವಪ್ರಕಾಶ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು,ಕಲ್ಲಂಚೇರಿ ಪೊಲೀಸರು
ಇನ್ಸ್ಪೆಕ್ಟರ್ ನಿನ್ನೆಯೇ ಎಫ್ಐಆರ್ (FIR) ದಾಖಲು ಮಾಡಿದರು. ಸದ್ಯಕ್ಕೆ ಇನ್ಸ್ಪೆಕ್ಟರ್ ಶಿವಪ್ರಕಾಶ್ ಹಾಗೂ ಇಬ್ಬರು ಸಿಬ್ಬಂದಿಗಳು ಕಲ್ಲಂಚೇರಿ ಪೊಲೀಸರ ವಶದಲ್ಲಿ ಇದ್ದಾರೆ
ರಶ್ಮಿತಾ ಅನೀಶ್