ಆಸೆಪಟ್ಟು ಷಾವರ್ಮಾ ತಿಂದ ಬಾಲಕಿ ಸಾವು ; 18 ಮಂದಿ ಆಸ್ಪತ್ರೆಗೆ ದಾಖಲು, ಅಂಗಡಿ ಸೀಲ್!

kerala

ಇಲ್ಲಿನ ಉಪಾಹಾರ ಮಂದಿರದಲ್ಲಿ ಷಾವರ್ಮಾ(Shawarma) ತಿಂದ 16 ವರ್ಷದ ಬಾಲಕಿಯೊಬ್ಬಳು ಫುಡ್ ಪಾಯಿಸನ್ ನಿಂದ ಭಾನುವಾರ ಮೃತಪಟ್ಟಿದ್ದಾಳೆ. ಯುವತಿ ಮಾತ್ರವಲ್ಲದೇ, 18 ಮಂದಿ ಇದೇ ಷಾವರ್ಮಾ ತಿಂದು ಫುಡ್ ಪಾಯ್ಸನಿಂಗ್‌ನಿಂದಾಗಿ(Food Poisoning) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿ ಪ್ರಕಟವಾಗಿದೆ.

ಕೇರಳ(Kerala) ರಾಜ್ಯದ ಕರಿವಲ್ಲೋರ್ ನಿವಾಸಿಯಾದ ಯುವತಿ ಕಾಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಜ್ಯೂಸ್ ಅಂಗಡಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯ ಬಳಿಕ ಕೂಡಲೇ ಸೀಲ್ ಮಾಡಲಾಗಿದೆ. 18 ಶಾಲಾ ವಿದ್ಯಾರ್ಥಿಗಳು ಇದೇ ರೀತಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಯಾರ ಸ್ಥಿತಿಯೂ ಯುವತಿಯಂತೆ ಗಂಭೀರವಾಗಿಲ್ಲ ಎಂದು ಹೇಳಲಾಗಿದೆ.

“ನಾವು ಇದೇ ರೀತಿ ವಿಷವಾಗಿರುವ ಆಹಾರವನ್ನು ತಿಂದಿರುವ ಹೆಚ್ಚಿನ ಪ್ರಕರಣಗಳನ್ನು ನಿರೀಕ್ಷಿಸುತ್ತಿದ್ದೇವೆ ಮತ್ತು ಆ ರೀತಿ ಅಸ್ವಸ್ಥರಾಗಿರುವ ಯಾವುದೇ ವ್ಯಕ್ತಿ ಕಂಡರು ಹತ್ತಿರದ ಇತರ ವೈದ್ಯಕೀಯ ಸಂಸ್ಥೆಗಳ ವೈದ್ಯರು ಮತ್ತು ಸಿಬ್ಬಂದಿಗಳನ್ನು ಚೆರುವತ್ತೂರು ಪಿಎಚ್‌ಸಿ ಮತ್ತು ನೀಲೇಶ್ವರಂ ತಾಲೂಕು ಆಸ್ಪತ್ರೆಗಳಿಗೆ ಕೂಡಲೇ ದಾಖಲಿಸುವಂತೆ ಕೇಳಿದ್ದೇವೆ. ನಾವು ಸಮಸ್ಯೆಗಳಿರುವ ಜನರಿಗೆ ಚಿಕಿತ್ಸೆ ನೀಡಲು ಈಗಾಗಲೇ ಪೂರ್ವ ಯೋಜನೆ ರೂಪಿಸಿದ್ದೇವೆ ಮತ್ತು ಗಂಭೀರ ಸ್ಥಿತಿಯಲ್ಲಿರುವವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇದೇ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಕೇರಳ ಸಚಿವ ಎಂ.ವಿ.ಗೋವಿಂದನ್, ರಾಜ್ಯದೆಲ್ಲೆಡೆ ಇರುವ ಹೋಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ನೀಡುವಂತೆ ರಾಜ್ಯ ಸರ್ಕಾರ ಖಚಿತಪಡಿಸುತ್ತದೆ. ರೆಸ್ಟೋರೆಂಟ್‌ಗಳಲ್ಲಿ ನೀಡಲಾಗುವ ಆಹಾರವು ಉತ್ತಮ ಗುಣಮಟ್ಟದ್ದಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ರಾಜ್ಯಾದ್ಯಂತ ತಪಾಸಣೆ ನಡೆಸುತ್ತದೆ ಎಂದು ಹೇಳಿದರು.

Exit mobile version