ನಮಗೆ ಚೀನಾ (China) ಮತ್ತು ಪಾಕೀಸ್ತಾನ ಹೇಗೋ ಪೆಲಿಸ್ತೀನೀಯರಿಗೆ ಇಸ್ರೇಲ್ ಹಾಗೇ. pok ಮತ್ತು (Kishore Against on Modi)ಲಡ್ಡಾಖಿನಲ್ಲಿ ನಡೆದ ಹಾಗೆ ದಿನೇ ದಿನೇ ಸ್ವಲ್ಪ ಸ್ವಲ್ಪವೇ
ಶರಣಾರ್ಥಿಗಳಾಗಿ ಬಂದು ಪೆಲಿಸ್ತೀನೀಯರ (Palestine) 90% ಜಾಗವನ್ನು ಆಕ್ರಮಿಸಿ ಅವರ ಲಕ್ಷಾಂತರ ಜನರನ್ನು ಕೊಂದು ಅವರ ಜಾಗದಲ್ಲಿ ಅವರನ್ನೇ ನಿರಾಶ್ರಿತರನಾಗಿ ಮಾಡಿರುವ ಇಸ್ರೇಲಿನ
ಪರವಾಗಿ ಪಾಶ್ಚಾತ್ಯ ದೇಶಗಳು ಇಂದು ತಮ್ಮ ತಮ್ಮ ಲಾಭಕ್ಕಾಗಿ ನಿಂತಿವೆ ಎಂದು ನಟ ಕಿಶೋರ್ (Kishore) ಅಭಿಪ್ರಾಯಪಟ್ಟಿದ್ದಾರೆ.
ಇಸ್ರೇಲ್ (Israel) ಪರವಾಗಿ ನಿಂತಿರುವ ಭಾರತ ಸರ್ಕಾರ ಕ್ರಮದ ವಿರುದ್ದ ಟೀಕಾಪ್ರಹಾರ ನಡೆಸಿರುವ ಅವರು, ಹಿಂಸೆ ಯಾರೇ ಮಾಡಿದರೂ ಖಂಡನೀಯ ನಿಜ ಹಾಗೆಂದು ಇದುವರೆಗೂ
ಇಸ್ರೇಲಿನ ಅತಿಕ್ರಮಣದ ವಿರುದ್ಧ, ಸತ್ಯ ಶಾಂತಿ ನ್ಯಾಯದ ಪರ ನಿಂತ ಭಾರತ ಒಂದು ಆಕ್ರಮಣಕಾರಿ ದೇಶದ ಪ್ರತಿಹಿಂಸೆಯ, ಯುದ್ಧದ ಪರ ನಿಲ್ಲಬೇಕೆ? ನಮಗೆ ಚೀನಾ ಮತ್ತು ಪಾಕೀಸ್ತಾನ
(Pakistan) ಹೇಗೋ ಪೆಲಿಸ್ತೀನೀಯರಿಗೆ (Kishore Against on Modi) ಇಸ್ರೇಲ್ ಹಾಗೇ.
pok ಮತ್ತು ಲಡ್ಡಾಖಿನಲ್ಲಿ (Ladakh) ನಡೆದ ಹಾಗೆ ದಿನೇ ದಿನೇ ಸ್ವಲ್ಪ ಸ್ವಲ್ಪವೇ ಶರಣಾರ್ಥಿಗಳಾಗಿ ಬಂದು ಪೆಲಿಸ್ತೀನೀಯರ 90% ಜಾಗವನ್ನು ಆಕ್ರಮಿಸಿ ಅವರ ಲಕ್ಷಾಂತರ ಜನರನ್ನು ಕೊಂದು
ಅವರ ಜಾಗದಲ್ಲಿ ಅವರನ್ನೇ ನಿರಾಶ್ರಿತರನಾಗಿ ಮಾಡಿರುವ ಇಸ್ರೇಲಿನ ಪರವಾಗಿ ಪಾಶ್ಚಾತ್ಯ ದೇಶಗಳು ಇಂದು ತಮ್ಮ ತಮ್ಮ ಲಾಭಕ್ಕಾಗಿ ನಿಂತಿವೆ.
ಆದರೆ ಮಣಿಪುರದ (Manipura) ಮಾರಣಹೋಮದ ಬಗ್ಗೆ ಕಮಕ್ ಕಿಮಕ್ ಅನ್ನದ ಈ 56 ಇಂಚಿನ ಬುಲ್ಡೊಜರ್ ರಾಜ ಮತ್ತವರ ಕಾಲುನೆಕ್ಕುವ ಮಾಧ್ಯಮಗಳು ( ಸರ್ಕಾರಿ ಹೇಳಿಕೆಗೆ ತದ್ವಿರುದ್ಧವಾಗಿ )
ಹಿಂಸೆಯ ಹೆಸರಲ್ಲಿ ಅಂಧ ಭಕ್ತರ ಪಡೆಯನ್ನೂ ಕೆಣಕಿ ಇಸ್ರೇಲಿನ ಪರ ನಿಂತದ್ದು ಇವರ ಪೆಗಸಿಸ್ (Pegasis) ಕಳ್ಳಾಟದ, ಜೊತೆಗಾರನೆಂದೇ? ಪಾಶ್ಚಾತ್ಯ ದೊರೆಗಳ ಮುಂದೆ ಮಾತನಾಡುವ
ಧೈರ್ಯವಿಲ್ಲದೆಯೇ? ಅಥವಾ ಪೆಲಿಸ್ತೀನೀಯರ ನೆಲದ ಹಕ್ಕಿನ ಹೋರಾಟವನ್ನು ಧರ್ಮದ ಹೋರಾಟವನ್ನಾಗಿಸಿ ಅದರ ಹೆಸರಲ್ಲೂ ದ್ವೇಷ ಹರಡುವ, ಓಟು ಗಿಟ್ಟಿಸುವ ಹುನ್ನಾರವೇ? ಶಾಂತಿ ಸಂಧಾನದ
ದಾರಿಯನ್ನು ಪ್ರತಿಪಾದಿಸುವುದನ್ನು ಬಿಟ್ಟು ಆಕ್ರಮಣಕಾರಿ ಇಸ್ರೇಲನ್ನು ಸಮರ್ಥಿಸುವವರು , ನಾಳೆ ಚೀನಾ ಮತ್ತು ಪಾಕೀಸ್ಥಾನಗಳ ಅಕ್ರಮ ಅತಿಕ್ರಮಣವನ್ನೂ ಸಮರ್ಥಿಸುವ ನಾಚಿಕೆಗೇಡು ಕೆಲಸ
ಮಾಡುವುದಿಲ್ಲವೇ.. ?? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಬದಲಾವಣೆ : ಆದೇಶ ಪ್ರಕಟ