‘ಎಲೋನ್‌ ಮಸ್ಕ್‌’ ಅವರೇ ನಟ ಕಿಶೋರ್‌ ಅವರ ಟ್ವಿಟರ್‌ ಖಾತೆ ರದ್ದುಗೊಳಿಸಲು ಕಾರಣ ಕೊಡಿ

Bengaluru : ಕನ್ನಡ ಚಿತ್ರರಂಗದ ಅತ್ಯುತ್ತಮ ಕಲಾವಿದರಾದ ನಟ ಕಿಶೋರ್‌(Kishore’s Twitter Account Suspended) ಅವರ ಟ್ವಿಟರ್‌ ಖಾತೆಯನ್ನು ಟ್ವಿಟರ್‌ ಸಂಸ್ಥೆ ಇತ್ತೀಚಿಗೆ ರದ್ದುಗೊಳಿಸಿದ್ದು,

ಕಿಶೋರ್‌ ಅವರ ಟ್ವಿಟರ್‌ ಖಾತೆಯನ್ನು ಆಕ್ಟೀವ್‌ ಮಾಡಿ ಎಂದು ಇದೀಗ ಅವರ ಅಭಿಮಾನಿಗಳು ಟ್ವಿಟರ್‌ನಲ್ಲಿ, ಟ್ವಿಟರ್‌ ಮಾಲೀಕ ಎಲೋನ್‌ ಮಸ್ಕ್‌(Twitter owner Elon musk) ಅವರನ್ನು ಟ್ಯಾಗ್‌ ಮಾಡಿ ಆಗ್ರಹಿಸಿದ್ದಾರೆ.

ಇತ್ತೀಚೆಗಷ್ಟೇ ನಟ ರಿಷಬ್ ಶೆಟ್ಟಿ(Rishab shetty) ಅವರ ಬ್ಲಾಕ್‌ ಬಸ್ಟರ್ ಕಾಂತಾರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಕಿಶೋರ್,

ಟ್ವಿಟರ್(Twitter) ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಅವರ ಟ್ವಿಟರ್ ಖಾತೆಯನ್ನು ಟ್ವಿಟರ್‌ ಸಂಸ್ಥೆ ಅಮಾನತುಗೊಳಿಸಿರುವುದು ಇದೀಗ ಪ್ರಮುಖ ಸುದ್ದಿಯಾಗಿದೆ!

ನಟ ಕಿಶೋರ್‌ ಅವರ ಟ್ವಿಟರ್‌ ಖಾತೆಯನ್ನು ಏಕೆ ಅಮಾನತುಗೊಳಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಅಭಿಮಾನಿಗಳು ಅದರ ಹಿಂದಿರುವ ಕಾರಣವನ್ನು ತಿಳಿಯಲು ಟ್ವಿಟರ್‌ ಅನ್ನು ಆಗ್ರಹಿಸಿದ್ದಾರೆ.

ಕೆಲವರು ನಟ ಕಿಶೋರ್ ಅವರ ಖಾತೆಯನ್ನು ಮರುಸ್ಥಾಪಿಸುವಂತೆ ಟ್ವಿಟರ್ ಸಿಇಒ(CEO) ಎಲೋನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ಕಳೆದ ವರ್ಷ, ನಟ ಕಿಶೋರ್ ಅವರು ಕಾಂತಾರ ಚಿತ್ರದೊಂದಿಗೆ,

ತಮಿಳಿನ ಸ್ಟಾರ್‌ ನಿರ್ದೇಶಕ ಮಣಿರತ್ನಂ(Manirathnam) ಅವರ ದೊಡ್ಡ ಬಜೆಟ್‌ ಸಿನಿಮಾ ಪೊನ್ನಿಯಿನ್ ಸೆಲ್ವನ್ 1(Ponniyin selvan 1 ) ರಲ್ಲಿ ನಟಿಸಿ ಮಿಂಚಿದ್ದರು.

ಈ ಚಿತ್ರದ ಎರಡನೇ ಭಾಗದಲ್ಲೂ ಕಿಶೋರ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಸದ್ಯ ನಟ ಕಿಶೋರ್‌ ಅವರ ಟ್ವಿಟರ್‌ ಖಾತೆ ಅಮಾನತುಗೊಳ್ಳಲು ಪ್ರಮುಖ ಕಾರಣವೇನು ಎಂಬುದನ್ನು ಅವರ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ!

ಕಿಶೋರ್‌ ಅವರ ಟ್ವಿಟರ್‌ ಖಾತೆಯ ಮೇಲೆ ಕ್ಷಿಕ್‌ ಮಾಡಿ ನೋಡಿದಾಗ,

‘ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸುವ ಖಾತೆಗಳನ್ನು ಟ್ವಿಟರ್ ಅಮಾನತುಗೊಳಿಸುತ್ತದೆ ಎಂದು ಟ್ವಿಟರ್‌ ಉಲ್ಲೇಖಿಸುತ್ತದೆ.

ನೆಟ್ಟಿಗರು ಎಲೋನ್ ಮಸ್ಕ್ ಅವರನ್ನು ಟ್ಯಾಗ್‌ ಮಾಡಿ, ಟ್ವೀಟ್‌ನಲ್ಲಿ, ಆತ್ಮೀಯ @(elonmusk )ಎಲೋನ್‌ ಮಸ್ಕ್‌ ಅವರೇ @(actorkishore) ನಟ ಕಿಶೋರ್‌ ಅವರ ಖಾತೆಯನ್ನು ಏಕೆ ಅಮಾನತುಗೊಳಿಸಲಾಗಿದೆ? ದಯವಿಟ್ಟು ಅದನ್ನು ಮರುಸ್ಥಾಪಿಸಿ ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ವ್ಯಕ್ತಿ, @actorkishore ನಟ ಕಿಶೋರ್‌ ಅವರ ಖಾತೆಯನ್ನು ಅಮಾನತುಗೊಳಿಸಲಾಗಿದೆಯೇ? ಟ್ವಿಟರ್‌ನ ಕಡೆಯಿಂದ ಇದು ಸಂಪೂರ್ಣ ಹೇಡಿತನವಾಗಿದೆ.

ಅವರು ಕರ್ನಾಟಕದ ರೈತರ ಧ್ವನಿಯಾಗಿದ್ದಾರೆ. ಸರ್ಕಾರವನ್ನು ಪ್ರಶ್ನಿಸುವವರನ್ನು ಅಮಾನತು ಮಾಡಲಾಗುತ್ತದೆಯೇ? ಇದು ಅವಮಾನ!

@elonmusk ಎಲೋನ್‌ ಮಸ್ಕ್ ಇದನ್ನು ಪರಿಶೀಲಿಸಬೇಕು ಎಂದು ಟ್ವೀಟ್‌(Tweet) ಮಾಡಿದ್ದಾರೆ. ಈ ನಡುವೆ ನಟ ಕಿಶೋರ್‌ ಅವರು ನೀಡಿದ ಹೇಳಿಕೆಯೊಂದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೊಲ್ಲುವ ಶಕ್ತಿಯಿರುವ ದೈವಕ್ಕೆ ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ? ಎಂದು ಹೇಳಿದ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ(Kishore’s Twitter Account Suspended) ಭಾರಿ ಚರ್ಚೆಯಾಗುತ್ತಿದೆ.

ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ?

ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ನ(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ?

https://youtu.be/73eZBk6Tmpk

ಕಾಂತಾರದ(Kanthara) ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ(Whatsap) ಹರಿದು ಬಂತು.

ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ.

ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ.

ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ. ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ.

ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ.

ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ ಎಂದಿದ್ದಾರೆ. ಇನ್ನು ನಟ ಕಿಶೋರ್‌ಅವರು ಬರೆದುಕೊಂಡಿರುವ ಪೋಸ್ಟ್‌ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್‌ಆಗುತ್ತಿದ್ದು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇಂತಹ ತಿಳಿವು ನೀಡುವ ನಿಮ್ಮಂತ ಸಹೃದಯಿ ಕಲಾವಿದರ ಅವಶ್ಯಕತೆ ಇದೆ ಎಂದು ಕೆಲವರು ಹೇಳಿದ್ದರೆ, ಮನ ಪರಿವರ್ತನೆ ಮಾಡಲು ದೈವ ಅಥವಾ ದೇವರು ಯಾವ ರೂಪದಲ್ಲಿಯಾದರು ಪ್ರಯತ್ನಿಸಬಹುದು.

ಅದು ತಂದೆ, ತಾಯಿ, ಗೆಳೆಯ ಯಾರಾದರೂ ಇರಬಹುದು… ಅದನ್ನು ಕೇಳುವ ತಾಳ್ಮೆ ಅಥವಾ ಸಹನೆ ನಮ್ಮಲ್ಲಿರಬೇಕು. ಇಲ್ಲದಿದ್ದರೆ ಅದು ಯಾವ ರೂಪದಲ್ಲಿಯಾದರು ಕೊಲ್ಲಬಹುದು ಅಥವಾ ಶಿಕ್ಷಿಸಬಹುದು ಎಂದು ಇನ್ನು ಕೆಲವರು ಹೇಳಿದ್ದಾರೆ.

Exit mobile version