ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ; ಕೆಎಂಎಫ್ ಅಧ್ಯಕ್ಷರು ಸೇರಿ ಮೂವರಿಗೆ ನೋಟಿಸ್!

KMF

ನ್ಯೂಸ್ ನಾಪ್ ಡಿಜಿಟಲ್ ಸುದ್ದಿ ಪ್ರಕಟಿಸಿರುವ ವರದಿ ಅನುಸಾರ, ಕೆಎಂಎಫ್(KMF) ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಕೆಎಂಎಫ್ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಹಿನ್ನಲೆ, ಕೆಎಂಎಫ್ ಅಧ್ಯಕ್ಷರು ಸೇರಿದಂತೆ ಮೂವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೆಎಂಎಫ್ ಅದ್ಯಕ್ಷರು, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕೃತವಾಗಿ ನೋಟಿಸ್ ಜಾರಿ ಮಾಡಿದೆ. ಅಷ್ಟಕ್ಕೂ ಯಾವ ರೀತಿಯಲ್ಲಿ ಅಕ್ರಮ ಮಾಡಲಾಗಿದೆ ಎಂದು ತಿಳಿಯುವುದಾದರೆ, ತುಪ್ಪ ಮಾರಾಟದಲ್ಲಿ ನಕಲಿ ತುಪ್ಪ ಮಾರಾಟ ತಡೆಗೆ ಕ್ರಮವಹಿಸಲು ತಂತ್ರಜ್ಞಾನ ವಿನಿಯೋಗಕ್ಕೆ ಟೆಂಡರ್ ಕೂಗಲಾಗಿತ್ತು.

ನೈಲಾನ್ ಬ್ಯಾರಿಯರ್ ಫಿಲ್ಮ್ ಅಳವಡಿಕೆಗೆ ಟೆಂಡರ್ ಪ್ರಕ್ರಿಯೇ ವೇಳೆ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪ ಪ್ರಮುಖವಾಗಿದೆ. ನಿಯಮ ಉಲ್ಲಂಘನೆಗೆ ಒಂದೇ ಕಂಪನಿಯ ಎರಡು ಸಂಸ್ಥೆಗಳು ಒಟ್ಟಿಗೆ ಟೆಂಡರ್‍ನಲ್ಲಿ ಭಾಗವಹಿಸಿರುವುದು ಆರೋಪದ ಪ್ರಮುಖ ಅಂಶವಾಗಿದೆ. ಈ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವರಿಗೂ ದೂರು ಸಲ್ಲಿಸಲಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಮಾಹಿತಿ : ನ್ಯೂಸ್ ನಾಪ್

Exit mobile version