ಇನ್ಮುಂದೆ ನಿಮ್ಮ ವಾಹನ ಕಳುವಾದರೆ, ದೂರು ನೀಡಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ ; ಈ ಸರಳ ಮಾರ್ಗ ಅನುಸರಿಸಿದ್ರೆ ಸಾಕು

Bengaluru : ನಿಮ್ಮ ದ್ವಿಚಕ್ರ ವಾಹನ ಅಥವಾ ಕಾರು ಕಳುವಾದರೆ, ತಕ್ಷಣ ಪೊಲೀಸ್ ಸ್ಟೇಷನ್ ಗೆ(Police Station) ತರಾತುರಿಯಿಂದ ಓಡುವ ಅಗತ್ಯವಿಲ್ಲ. ಹೌದು, ಇನ್ನು ಮುಂದೆ ತಮ್ಮ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನಗಳು ಕಳ್ಳತನವಾದರೆ ಎಫ್‌ಐಆರ್(Know About E-FIR) ದಾಖಲಿಸಲು ಪೊಲೀಸ್ ಠಾಣೆಗೆ ಹೋಗಬೇಕಾಗಿಲ್ಲ.

ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಪೊಲೀಸರು, ಸೋಮವಾರ ತಮ್ಮ ಸಿಟಿಜನ್ ಸೆಂಟ್ರಿಕ್ ಪೋರ್ಟಲ್‌ನಲ್ಲಿ ಇ-ಎಫ್‌ಐಆರ್ ದಾಖಲಿಸಬಹುದು ಎಂದು ಘೋಷಣೆ ಮಾಡಿದ್ದಾರೆ.

ಹಾಗಾದರೆ, ಇ-ಎಫ್‌ಐಆರ್ ದಾಖಲಿಸುವುದು ಹೇಗೆ ಎಂಬ ಅನುಮಾನಗಳಿಗೆ, ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಉತ್ತರವಿದೆ.

ಇ-ಎಫ್‌ಐಆರ್(Know About E-FIR) ದಾಖಲಿಸಲು ಬಯಸುವ ವ್ಯಕ್ತಿಯು ಮೊದಲು ಪೋರ್ಟಲ್‌ಗೆ ಸೈನ್ ಅಪ್ ಆಗಬೇಕು. ಲಾಗಿನ್ ಆದ ನಂತರ, ಇ-ಎಫ್‌ಐಆರ್ ವರ್ಗದ ಅಡಿಯಲ್ಲಿ ‘ವಾಹನ ಕಳ್ಳತನ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಆಗ ಒಂದು ಹೊಸ ಪುಟವು ಪಾಪ್ ಅಪ್ ಆಗುತ್ತದೆ,

ಇಲ್ಲಿ ವಾಹನ ಕಳೆದುಕೊಂಡ ವ್ಯಕ್ತಿಯು ವಾಹನದ ಎಲ್ಲಾ ವಿವರಗಳಾದ ನೋಂದಣಿ ಸಂಖ್ಯೆ ಮತ್ತು ಕಳ್ಳತನದ ಸ್ಥಳ ಇತ್ಯಾದಿಗಳನ್ನು ಭರ್ತಿ ಮಾಡಬೇಕಾಗುತ್ತದೆ.

https://youtu.be/GXaqplAlcKM ರೈತನ ಬೆಳೆ ನಾಶ ಮಾಡಿದ ವರುಣ. ಅನ್ನದಾತನ ಗೋಳು ಕೇಳದ ಅಧಿಕಾರಿಗಳು

ಮುಂದಿನ ಹಂತದಲ್ಲಿ ದೂರು ಪತ್ರದ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ, ಈ ಹಂತದಲ್ಲಿ ಪೊಲೀಸ್ ಇಲಾಖೆಯಿಂದ ದೂರು ನೋಂದಣಿ ಸಂಖ್ಯೆಯನ್ನು ಪಡೆಯಬಹುದು.

ಈ ನೋಂದಣಿ ಸಂಖ್ಯೆಯನ್ನು ಬಳಸಿ, ಪೋರ್ಟಲ್‌ನಿಂದ ಇ-ಎಫ್‌ಐಆರ್ ಅನ್ನು ಬೇಕಾದಾಗ ಡೌನ್‌ಲೋಡ್(#Download) ಮಾಡಬಹುದು.

ಮತ್ತು ನೀವು ನೀಡಿರುವ ದೂರಿನ ಸ್ಟೇಟಸ್ ಅನ್ನು ಕೂಡ ಬೇಕಾದಾಗ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.

ಈ ಬಗ್ಗೆ, ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್(DGP Praveen Sood) ಅವರು ಸಾಮಾಜಿಕ ಜಾಲತಾಣಗಳಲ್ಲಿಯೂ ಮಾಹಿತಿ ನೀಡಿದ್ದಾರೆ.

“ನಿಮ್ಮ ವಾಹನ ಕಳುವಾಗಿದೆಯೇ? ಕಂಪ್ಲೇಂಟ್ ಲಾಡ್ಜ್ ಮಾಡಲು ಕಷ್ಟವಾಗುತ್ತಿದೆಯೇ?

ಹಾಗಾದರೆ ಇನ್ನು ಮುಂದೆ, ಆನ್‌ಲೈನ್‌ನಲ್ಲಿ ನಿಮ್ಮ ದೂರನ್ನು ನೋಂದಾಯಿಸಿ. ನಾಗರಿಕರ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಈ ಸೌಲಭ್ಯವನ್ನು ಒದಗಿಸುತ್ತಿದೆ.

ನಾಗರಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಲು ವ್ಯಹಿಸುವ ಸಮಯ ಹಾಗೂ ಗಾಬರಿಯನ್ನು ಕಡಿಮೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ.

ಆದರೆ, ನೆನಪಿರಲಿ ಸುಳ್ಳು ಮತ್ತು ಚೇಷ್ಟೆ ಮಾಡಲು ದೂರು ನೀಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ” ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.

ಟ್ವೀಟ್ ಮಾಹಿತಿ ಇಲ್ಲಿದೆ ನೋಡಿ : https://twitter.com/DgpKarnataka/status/1587088419876114433?s=20&t=cn4JFr_6yi0C_CD-4oCNpw


ಈ ಮೊದಲು ಸಹ ಪೊಲೀಸ್ ಠಾಣೆಗೆ ಭೇಟಿ ನೀಡುವ ಜನರ ತೊಂದರೆಯನ್ನು ಪರಿಗಣಿಸಿ,

ಅವರ ತೊಂದರೆಗಳನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಪ್ರವೀಣ್ ಸೂದ್ ಮಾತನಾಡಿದ್ದರು.

ಕರ್ನಾಟಕದ ಜನರಿಗೆ ಆನ್‌ಲೈನ್ ಸೇವೆಗಳನ್ನು ಪರಿಚಯಿಸುವ ಮೂಲಕ ರಾಜ್ಯಾದ್ಯಂತ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಲು ಜನರು ಪಡುವ ಕಷ್ಟವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಕರ್ನಾಟಕ ಡಿಜಿಪಿ ಈ ಹಿಂದೆ ಹೇಳಿದ್ದರು.

Exit mobile version