Kolar: ಕೋಲಾರದ (Kolar) ರೈತರೊಬ್ಬರು ಕೆಂಪು ಚಿನ್ನ ಬೆಳೆಯುವ ಮೂಲಕ ಹೊಸ ಸಾಧನೆ ಮಾಡಿದ್ದು, ಕೇಸರಿ ಅಂದರೆ ಎಲ್ಲರಿಗೂ ಚಿರಪರಿಚಿತ. ಇನ್ನು ಇದರ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಇದನ್ನು ಎಲ್ಲಾ ಕಡೆ ಬೆಳೆಯೋಕೆ ಆಗಲ್ಲ ಮತ್ತು ಎಲ್ಲೆಂದರಲ್ಲಿ ಸಿಗೋದಿಲ್ಲ. ಕೋಲಾರದ ಸಾವಯವ ಕೃಷಿಕ.. ಲೋಕೇಶ್ (Lokesh) ಬಯಲು ಸೀಮೆ ಕೋಲಾರದ ಮಾಲೂರಿನಲ್ಲಿ ಚಿನ್ನದ ಬೆಲೆ ಇರುವ ಕೇಸರಿ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷಿ ವಿಜ್ಞಾನಿ ಲೋಕೇಶ್, ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕಾಶ್ಮೀರದ (Kashmir) ರೀತಿಯಲ್ಲಿರುವ ಹವಾನಿಯಂತ್ರಿತ ಕೊಠಡಿ ಸೃಷ್ಟಿಮಾಡಿಕೊಂಡಿದ್ದಾರೆ. ಇದರ ಬೆಲೆ ಗಗನಕ್ಕೇರಿದ್ದು, ಇದನ್ನು ಕೆಂಪು ಚಿನ್ನ ಎಂದು ಕರೆಯಲಾಗುತ್ತೆ. ಆದರೆ ಈ ಕೇಸರಿಯನ್ನು ಕಾಶ್ಮೀರದಲ್ಲಿ ಮಾತ್ರ ಬೆಳೆಯಲಾಗುತ್ತೆ ಅಂತ ಹೇಳಲಾಗುತ್ತೆ. ಯಾಕಂದ್ರೆ ಕೇಸರಿ ಬೆಳೆಯಲು ಸೂಕ್ತ ವಾತಾವರಣ ಇರೋದು ಕಾಶ್ಮೀರ ಹಾಗೂ ಇರಾನ್ನಲ್ಲಿ (Iran) ಮಾತ್ರ ಹಾಗಾಗಿ ಮಾರುಕಟ್ಟೆಯಲ್ಲಿ ಕಾಶ್ಮೀರ ಮತ್ತು ಇರಾನ್ ಕೇಸರಿ (Saffron) ಮಾತ್ರವೇ ಲಭ್ಯವಾಗುತ್ತಿದೆ.
ಅದರಲ್ಲಿ ಕಾಶ್ಮೀರದಿಂದ ಹತ್ತು ಸಾವಿರ ರೂಪಾಯಿಗೆ ಕೇಸರಿ ಗಡ್ಡೆಗಳನ್ನು ತರಿಸಿಕೊಂಡು, ಪ್ರಾಯೋಗಿಕವಾಗಿ ಇಂಡೋರ್ ಫಾರ್ಮಿಂಗ್ (Indore Farming) ಮಾಡಿದ್ದಾರೆ. ಕೇಸರಿ ಗಡ್ಡೆಗಳು ಒಮ್ಮೆ ಬಿತ್ತನೆಮಾಡಿದ್ರೆ. ಅದು ಜೀವನ ಪರ್ಯಂತ ಹೂ ಬಿಡುತ್ತದೆ. ಮೊದಲ ಬಿತ್ತನೆಯಲ್ಲೇ ಸುಮಾರು 20 ಗ್ರಾಂ ಕೇಸರಿ ಸಿಕ್ಕಿದ್ದು, ಭರ್ಜರಿ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ. ಸದ್ಯ 1 ಗ್ರಾಂ ಕೇಸರಿಗೆ ಮಾರುಕಟ್ಟೆಯಲ್ಲಿ 100ರಿಂದ 150 ರೂಪಾಯಿ ಇದೆ.
ಅತ್ಯಂತ ದುಬಾರಿ ಬೆಲೆಯ ಬ್ರೆಜಿಲ್ (Brazil) ಆಲೂಗಡ್ಡೆ ಕೂಡಾ ಬೆಳೆದಿದ್ದು, ಬ್ರೆಜಿಲ್ ಬ್ಲೂ ಆಲೂಗಡ್ಡೆ ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 800 ರೂಪಾಯಿ ಬೆಲೆ ಇದೆ. ಅದನ್ನು ಬಿತ್ತನೆ ಬೀಜ ಮಾಡುವ ಹಂತದಲ್ಲಿದ್ದಾರೆ. ಕಾರ್ಡಿಸೆಪ್ಸ್ ಅನ್ನೋ ಮಶ್ರೂಮ್ ಅನ್ನ ಲೋಕೇಶ್ ಬೆಳೆದು ಯಶಸ್ವಿಯಾಗಿದ್ದಾರೆ. ಕಾರ್ಡಿಸೆಪ್ಸ್ ಮಶ್ರೂಮ್ (Cordyceps Mushroom) ಒಂದು ಕೆಜಿಗೆ 3.5 ಲಕ್ಷ ರೂಪಾಯಿ ಇದೆ.
ಇದನ್ನು ನ್ಯಾಚುರಲ್ ವಯಾಗ್ರ (Natural Viagra) ಎಂದು ಕರೆಯುತ್ತಾರೆ. ಹೀಗೆ ತಮ್ಮ ಪ್ರಯೋಗಾಲಯದಲ್ಲಿ ವಿವಿಧ ಲಾಭದಾಯಕ ಬೆಳೆ ಬೆಳೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಕೃಷಿಯಲ್ಲಿ ಸದಾ ಒಂದಿಲ್ಲೊಂದು ಪ್ರಯೋಗದ ಮೂಲಕ ಲೋಕೇಶ್ ಚಿನ್ನದ ಬೆಳೆ ಬೆಳುತ್ತಿದ್ದಾರೆ.. ಮುಂದೊಂದು ದಿನ ಇದು ಹೊಸ ಕ್ರಾಂತಿಕಾರಿ ಕೃಷಿಗೆ ನಾಂದಿಯಾಗೋದರಲ್ಲಿ ಅನುಮಾನವಿಲ್ಲ..
ಭವ್ಯಶ್ರೀ ಆರ್ ಜೆ