Kolar : ಕೋಲಾರ ಜಿಲ್ಲೆಯ ಅಪ್ರಾಪ್ತ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ (Kolar minor boy murder case) ಕೋಲಾರ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಅಮಾನತು
ಮಾಡಲಾಗಿದ್ದು, ಈ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಮೂರು ಕೊಲೆಗಳಾಗಿದ್ದು, ಅಕ್ಟೋಬರ್ 23 ಕಾಂಗ್ರೆಸ್ (Congress) ಮುಖಂಡ, ಮಾಜಿ ಸಭಾಪತಿ ರಮೇಶ್ ಕುಮಾರ್ ಅವರ ಆಪ್ತ
ಎಂ. ಶ್ರೀನಿವಾಸ್, ಅಕ್ಟೋಬರ್ 21 ಗ್ರಾಮ ಪಂಚಾಯತಿ ಸದಸ್ಯ ಅನಿಲ್ ಕುಮಾರ್ ಮತ್ತು ನವೆಂಬರ್ 03 ರಂದು ಬಾಲಕ ಕಾರ್ತಿಕ್ ಸಿಂಗ್ (Karthik Singh) ಎಂಬುವರನ್ನು ಕೊಲೆ ಮಾಡಲಾಗಿತ್ತು.
ಕರ್ತವ್ಯ ಲೋಪ ಹಾಗೂ ಮಾಹಿತಿ ಕಲೆಹಾಕುವಲ್ಲಿ ವಿಫಲ ಹಿನ್ನೆಲೆಯಲ್ಲಿ ಎಎಸ್ಐ ಮುನಿರಾಜು (ASI Muniraju) , ಕಾನ್ಸ್ಟೇಬಲ್ಗಳಾದ (Constable) ವಿಷ್ಣು, ಶಿವ ಅವರನ್ನು ಅಮಾನತು
ಮಾಡಿ ಕೋಲಾರ ಎಸ್ಪಿ ನಾರಾಯಣ್ ಆದೇಶ ಹೊರಡಿಸಿದ್ದಾರೆ.
ಬಾಲಕನ ಕೊಲೆ ಕೇಸ್:
ಕೋಲಾರದ ವೀರಾಂಜನೇಯ ನಗರದ ನಿವಾಸಿ ಅರುಣ್ ಸಿಂಗ್ ಅವರ ಪುತ್ರ ಕಾರ್ತಿಕ್ ಸಿಂಗ್ (17) ಯನ್ನು ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ನಗರದ ಟೇಕಲ್ (Tackle) ರಸ್ತೆಯ ಬಾಪೂಜಿ
ಶಾಲಾ ಆವರಣದಲ್ಲಿ ದುಷ್ಕರ್ಮಿಗಳು ಬರ್ಬರವಾಗಿ (Kolar minor boy murder case) ಕೊಚ್ಚಿ ಕೊಲೆ ಮಾಡಿದ್ದರು.
ಹತ್ಯೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಅಲಿಯಾಸ್ ಶೈನ್ (Shine) ಸೇರಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದರು. ಡಾನ್ ಆಗಬೇಕೆಂದು ಆರೋಪಿ ಹತ್ಯೆ
ಮಾಡಿದ್ದನು ಎಂದು ಪೊಲೀಸರು ಹೇಳಿದ್ದರು. ಹತ್ಯೆಗೂ ಮುನ್ನ ಬಾಲಕನಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಬಟ್ಟೆ ಬಿಚ್ಚಿಸಿ ಮೈಕೈಗೆ ಗಾಜು, ಚಾಕು, ಬ್ಲೇಡ್ನಿಂದ ಕುಯ್ದಿದ್ದಾರೆ.
ಇನ್ನು ಕಾರ್ತಿಕ್ನ ಮುಖದ ಮೇಲೆ S ಎಂದು ಬರೆದು ಆರೋಪಿಗಳು ವಿಕೃತಿ ಮೆರೆದಿದ್ದು, S ಎಂದರೆ ಶೈನ್ ಆಲಿಯಾಸ್ ದಿಲೀಪ್ (Dileep) ಎಂದರ್ಥ. ಶೈನ್ ಇಡೀ ಪ್ರಕರಣದ ಮಾಸ್ಟರ್ ಮೈಂಡ್
ಆಗಿದ್ದು, ಪ್ರಕರಣದ ಆರೋಪಿಗಳೆಲ್ಲರೂ ಅಪ್ರಾಪ್ತರಾಗಿದ್ದಾರೆ. ಪ್ರಮುಖ ಆರೋಪಿ ಡಾನ್ ಆಗಬೇಕು ಎಂದು ಈ ರೀತಿ ಕೃತ್ಯಗಳನ್ನು ಎಸಗುತ್ತಿದ್ದನು. ಆರೋಪಿಗಳು ರೌಡಿಗಳಂತೆ ಚಾಕು ಹಿಡಿದು
ಗ್ಯಾಂಗ್ ಕಟ್ಟಿಕೊಂಡು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ (Instagram) ಪೋಸ್ಟ್ ಹಾಕಿದ್ದಾರೆ.
ಅಪ್ರಾಪ್ತ ಬಾಲಕನ ಕೊಲೆ ಖಂಡಿಸಿ ಅಭಿಯಾನ
ಜೆಡಿಎಸ್ (JDS) ಶಾಸಕ ಸಮೃದ್ಧಿ ಮಂಜುನಾಥ್ (Manjunath) ಅವರು ಅಪ್ರಾಪ್ತ ಬಾಲಕನ ಕೊಲೆ ಖಂಡಿಸಿ ಅಭಿಯಾನ ಮಾಡುತ್ತಿದ್ದಾರೆ. ಅಪ್ರಾಪ್ತ ಬಾಲಕ ಕಾರ್ತಿಕ್ ಸಾವಿಗೆ ನ್ಯಾಯಕೊಡಿಸಿ
ಮತ್ತು ಕೋಲಾರ ರಕ್ಷಿಸಿ, ಯುವಕರನ್ನು ರಕ್ಷಿಸುವಂತೆ ಆಗ್ರಹಿಸಿ ಅಭಿಯಾನ ಮಾಡುತ್ತಿದ್ದಾರೆ.
ಇದನ್ನು ಓದಿ : ಸತೀಶ್ ಜಾರಕಿಹೊಳಿ ಜತೆ ಸೀಕ್ರೆಟ್ ಮೀಟಿಂಗ್: ಮಾತುಕತೆ ಬಳಿಕ ದೆಹಲಿಗೆ ಡಿಕೆಶಿ
- ಭವ್ಯಶ್ರೀ ಆರ್ ಜೆ