ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆಯ ಕಾರಣದಿಂದ ಮತದಾನ ಬಹಿಷ್ಕರಿಸಿದ ಕೋಲಾರದ ಗ್ರಾಮಸ್ಥರು

Kolar: ದೇಶಾದ್ಯಂತ ಇಂದು 2ನೇ ಹಂತದ ಚುನಾವಣೆ ನಡೆಯುತ್ತಿದ್ದು ರಾಜ್ಯ 14 ಸಂಸದೀಯ (Kolar Villagers Boycotted Voting) ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಯಾವುದೇ

ಗೊಂದಲಗಳಿಲ್ಲದೆ ಮತದಾನ ಆರಂಭವಾಗಿದೆ.ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಆದರೆ ಕೆಲವೆಡೆ ಮೂಲಭೂತ ಸೌಕರ್ಯ ಕೊರತೆಯಿಂದ

ಮತದಾನ ಬಹಿಷ್ಕರಿಸುವ (Kolar Villagers Boycotted Voting) ಘಟನೆಗಳು ವರದಿಯಾಗಿದೆ.

ಕೋಲಾರ ತಾಲೂಕಿನ ಕೆ.ಬಿ. ಹೊಸಹಳ್ಳಿ (K B Hosahalli) ಗ್ರಾಮದ ಜನರು ಚುನಾವಣೆ ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಗ್ರಾಮದ ಸರ್ಕಾರಿ

ಪ್ರಾಥಮಿಕ ಶಾಲೆ (Govt Primary School)ಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದ್ದು, ಬೆಳಗ್ಗೆ 9 ಗಂಟೆಯಾದರೂ ಯಾವುದೇ ಮತದಾರರು ಸುಳಿದಿಲ್ಲ. ಪರಿಣಾಮ ಚುನಾವಣಾ ಸಿಬ್ಬಂದಿ ಕೆಲಸವಿಲ್ಲದೆ

ಕೂರುವಂತಾಗಿದ್ದು, ಗ್ರಾಮದಲ್ಲಿ ಬಿಕೋ ಎನ್ನುವ ವಾತಾವರಣ ಕಂಡುಬರುತ್ತಿದೆ. ಗ್ರಾಮದಲ್ಲಿ ಸರಿಯಾದ ರಸ್ತೆ ಇಲ್ಲದೆ, ಕುಡಿಯುವ ನೀರಿನ ಪೂರೈಕೆ ಕೂಡ ಸರಿಯಿಲ್ಲದ ಕಾರಣ ಜನಪ್ರತಿನಿಧಿಗಳ

ನಿರ್ಲಕ್ಷ್ಯದಿಂದ ಹತಾಶರಾದ ಜನರು ಚುನಾವಣೆ ಬಹಿಷ್ಕರಿಸುವುದಾಗಿ ತಿಳಿದುಬಂದಿದೆ.

ಈ ವೇಳೆ ಮಾತನಾಡಿದ ಗ್ರಾಮಸ್ಥರೊಬ್ಬರು, ಈ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಉತ್ತಮ ರಸ್ತೆಯಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ, ಯಾವುದೇ ಹೊಸ ಯೋಜನೆಗಳನ್ನು

ರೂಪಿಸದೆ ಅಭಿವೃದ್ಧಿ ಕಾರ್ಯಗಳಲ್ಲಿ ಈ ಊರಿನ ಹೆಸರನ್ನು ಕೈಬಿಟ್ಟಿದ್ದಕ್ಕೆ ಮತದಾನ (Voting) ಬಹಿಷ್ಕಾರ ಮಾಡಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಮತದಾನ ಮಾಡುವುದಿಲ್ಲ. ಇಡೀ ಗ್ರಾಮಸ್ಥರು

ಮತದಾನ ಮಾಡಲ್ಲ ಎಂದು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಪೆನ್ ಡ್ರೈವ್ನಲ್ಲಿ ಇರುವ ವಿಷಯಗಳನ್ನ ಹರಡಿದ್ದು ಡಿಕೆ ಶಿವಕುಮಾರ್ ಆಗಿದ್ರೆ ಕಠಿಣ ಶಿಕ್ಷೆಯಾಗಬೇಕು: ನಟ ಚೇತನ್

Exit mobile version