ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರವೇಶಾತಿಗೆ ಆಗಸ್ಟ್ 31 ಕೊನೆ ದಿನ ; ಇಲ್ಲಿದೆ ಮಾಹಿತಿ

Mysore: ಕರ್ನಾಟಕ (Karnataka) ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿವಿಧ ಪದವಿ, ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಕೆಗೆ ಆಗಸ್ಟ್ (August) 31 ಕೊನೆಯ ದಿನವಾಗಿದೆ. ರಾಜ್ಯ ಮುಕ್ತ ವಿವಿಯು ಕಳೆದ ತಿಂಗಳು ನೋಟಿಫಿಕೇಶನ್ (Notification) ಬಿಡುಗಡೆ ಮಾಡಿತ್ತು.

ಇನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯು ದೆಹಲಿಯ (Delhi) ಯುಜಿಸಿಯಿಂದ (UGC) ಮಾನ್ಯತೆ ಪಡೆದಿದೆ. ಯುಜಿಸಿಯ ನ್ಯಾಕ್ ನಿಂದ “ಎ ಪ್ಲಸ್” (A Plus) ಮಾನ್ಯತೆ ಪಡೆದಿದೆ. ಯುಜಿಸಿ ನಿಯಮಾವಳಿ ಪ್ರಕಾರ ಮುಕ್ತ ವಿಶ್ವವಿದ್ಯಾನಿಲಯ ನೀಡುವ ಪದವಿಗಳು ರೆಗ್ಯುಲರ್ ಮೂಲಕ ನೀಡುವ ಪದವಿಗಳು ಎರಡು ಒಂದೇ ಸಮನಾದ ಅರ್ಹತೆ ಹೊಂದಿವೆ. ಹೀಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪದವಿಗಳಿಗೆ ಮಾನ್ಯತೆ ಇದೆ.

2023-24ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅರ್ಜಿ ಆಹ್ವಾನಿಸಲಾಗಿದ್ದು, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ (BA), ಬಿ.ಕಾಂ, ಬಿ.ಬಿ.ಎ (BBA), ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ (BSc), ಬಿ.ಎಸ್ಸಿ, ಬಿ.ಎಸ್.ಡಬ್ಲ್ಯೂ., ಎಂ.ಎ (MA)., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ (MSc)., ಎಂ.ಲಿಬ್.ಐ.ಎಸ್ಸಿ,ಎಂ.ಬಿ.ಎ (MBA)., ಎಂ.ಸಿ.ಎ, ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ (Deploma)., ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗಳಿಗೆ ಅರ್ಜಿ ಸಲ್ಲಿಸಬಹುದು. ಇನ್ನು ಎಸ್ಸಿ (SC) / ಎಸ್ಟಿ (ST) / ಒಬಿಸಿ (OBC)/ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಕೂಡಾ ಪಡೆಯಬಹುದು.

ಪ್ರಥಮ ವರ್ಷದ ಪ್ರವೇಶಾತಿ ಶುಲ್ಕದ ವಿವರ
ಬಿ.ಎ-ರೂಪಾಯಿ 7,700/-.
ಬಿ.ಕಾಂ.-ರೂ.8,200/-.
ಬಿ.ಸಿ.ಎ/ಬಿ.ಎಸ್ಸಿ-ರೂ.22,500/-.
ಬಿ.ಬಿ.ಎ/ಬಿ.ಎಲ್.ಐ.ಎಸ್ಸಿ-11,500/-.
ಎಂ.ಎಸ್.ಡಬ್ಲ್ಯೂ-ರೂ.20,000/-.

ಎಂ.ಎಲ್.ಐ.ಎಸ್ಸಿ-ರೂ.17,000/-.
ಎಂ.ಎಸ್ಸಿ/ಎಂ.ಬಿ.ಎ/ಎಂ.ಸಿ.ಎ-ರೂ.28,000/-.
ಎಂ.ಕಾಂ-ರೂ.11,500/-
ಬಿ.ಎಸ್.ಡಬ್ಲ್ಯೂ-ರೂ.12,000/-.
ಎಂ.ಎ-ರೂ.9,800/-.
ಎಂ.ಸಿ.ಜೆ-ರೂ.15,100/-.

ಇತರೆ ಹೆಚ್ಚಿನ ವಿವರಗಳಿಗಾಗಿ: ವಿಳಾಸ ಮುಕ್ತಗಂಗೋತ್ರಿ, ಮೈಸೂರು (Mysore), ಕರ್ನಾಟಕ (Karnataka)570006
ಜಾಲತಾಣ
Website: www.ksoumysuru.ac.in
Facebook: www.facebook.com/ksoumysuru
Twitter: www.twitter.com/ksoumysuru

ಮಹೇಶ್

Exit mobile version