2,000 ರೂಪಾಯಿ ನೋಟುಗಳನ್ನು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸ್ವೀಕರಿಸುತ್ತೇವೆ : ಕೆಎಸ್‌ಆರ್‌ಟಿಸಿ ಸ್ಪಷ್ಟನೆ

Karnataka: ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದಾಗಿನಿಂದ ಸಾಕಷ್ಟು ಗೊಂದಲಗಳು ಉಂಟಾಗಿವೆ. ಈ ನೋಟುಗಳು ಚಲಾವಣೆಯಲ್ಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ಕೆಲವೆಡೆ ಅವುಗಳನ್ನು ಸ್ವೀಕರಿಸುತ್ತಿಲ್ಲ. ಅದೇ ರೀತಿ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್‌ಗಳಲ್ಲಿ 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂಬ ಸುದ್ದಿ ಹಿನ್ನೆಲೆಯಲ್ಲಿ (ksrtc clarification about notes) ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೆಎಸ್‌ಆರ್‌ಟಿಸಿ ಸಂಪರ್ಕಾಧಿಕಾರಿ ಲತಾ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಈ ನೋಟುಗಳನ್ನು ಸ್ವೀಕರಿಸುವುದಾಗಿ ತಿಳಿಸಿದ್ದಾರೆ.

ಹೊಸಕೋಟೆ (Hosakote) ಬಿಎಂಟಿಸಿ ಘಟಕದಿಂದ 2000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂಬ ಆದೇಶವನ್ನು ತಪ್ಪಾಗಿ ಹೊರಡಿಸಲಾಗಿದೆ.

ಇದು ಸುಳ್ಳು ಸುದ್ದಿಯಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ

2000 ರೂಪಾಯಿ ನೋಟನ್ನು ಸ್ವೀಕರಿಸುವುದಾಗಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ. ಮೌಲ್ಯದ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ನೋಟುಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಿನಿಮಯ (ksrtc clarification about notes) ಮಾಡಿಕೊಳ್ಳಲು ಆದೇಶಿಸಲಾಗಿದೆ.

ಮೇ 23 ರಿಂದ ಸೆಪ್ಟೆಂಬರ್ 30 ರ ನಡುವೆ ಬ್ಯಾಂಕ್‌ಗಳಿಗೆ ನೋಟುಗಳನ್ನು ಹಿಂತಿರುಗಿಸುವಂತೆ ಆರ್‌ಬಿಐ (RBI) ಆದೇಶಿಸಿದೆ.ಹೀಗಾಗಿ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ ಬಸ್‌ಗಳು ಈ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು.

ಟಿಕೆಟ್ ಇಲ್ಲದ ಪ್ರಯಾಣಿಕರಿಗೆ ದಂಡ:
ಕೆಎಸ್‌ಆರ್‌ಟಿಸಿ (KSRTC) ತನಿಖಾ ತಂಡವು ಏಪ್ರಿಲ್ 2023 ರಲ್ಲಿ ತಪಾಸಣೆ ನಡೆಸಿತು ಮತ್ತು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ

ಒಟ್ಟು 3,415 ಪ್ರಯಾಣಿಕರಿಂದ 5,54,832 ರೂ ದಂಡ ವಸೂಲು ಮಾಡಲಾಯಿತು.

ನಿಗಮದಲ್ಲಿ ಆದಾಯ ಕಳೆದುಕೊಳ್ಳುತ್ತಿರುವ ಬಗ್ಗೆ ಅನೇಕ ದೂರುಗಳಿತ್ತು ಈ ಹಿನ್ನೆಲೆಯಲ್ಲಿ ತನಿಖಾ ತಂಡ ತಪಾಸಣೆಯನ್ನು ಚುರುಕುಗೊಳಿಸಿದ್ದು,

ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ ಒಟ್ಟು 44,540 ವಾಹನಗಳನ್ನು ತಪಾಸಣೆ ನಡೆಸಿದೆ. ಇದರಲ್ಲಿ ಒಟ್ಟು 3070 ಪ್ರಕರಣಗಳು ಪತ್ತೆಯಾಗಿದೆ.

ಅವರಲ್ಲಿ 3415 ಪ್ರಯಾಣಿಕರು ಪ್ರಯಾಣಿಸಲು ಟಿಕೆಟ್ (Ticket) ಖರೀದಿಸಿಲ್ಲ. ಇವರಿಂದ ಒಟ್ಟು 5,54,832 ರೂ. ದಂಡ ವಸೂಲಿ ಮಾಡಲಾಗಿದೆ.

ಈ ಮೂಲಕವಾಗಿ ಒಟ್ಟು 2,38,803 ರೂ. ಆದಾಯ ಸೋರಿಕೆ ಪತ್ತೆಯಾಗಿದೆ.ಕೆಎಸ್‌ಆರ್‌ಟಿಸಿ(KSRTC) ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

2000 ರೂಪಾಯಿ ನೋಟುಗಳನ್ನು ಬ್ಯಾಂಕ್ ಗಳ (Bank) ಮೂಲಕ ಹಿಂಪಡೆಯುತ್ತಿರುವುದರಿಂದ ಸಾರ್ವಜನಿಕ ಬದುಕಿನಲ್ಲಿ ಇದೀಗ ಬಹಳ ಸಮಸ್ಯೆಯಾಗುತ್ತಿದೆ.ಎಲ್ಲಿ ಬೇಕಾದರೂ 2000 ರೂಪಾಯಿ ನೋಟನ್ನು ಚಲಾವಣೆ ಮಾಡಬಹುದು ಎಂದು ತಿಳಿಸಿದ್ದರೂ ಜನ ಹಿಂಜರಿಯುತ್ತಿದ್ದಾರೆ.

ಪೆಟ್ರೋಲ್‌ (Petrol) ಬಂಕ್‌ಗಳಲ್ಲಿ 2000 ರೂ. ನೋಟುಗಳನ್ನು ಹೆಚ್ಚಾಗಿ ವಾಹನ ಚಾಲಕರು ನೀಡುತ್ತಿದ್ದರು.ಆದರೆ ಇತ್ತೀಚೆಗೆ ಪೆಟ್ರೋಲ್‌ ಬಂಕ್‌ಗಳಲ್ಲೂ 2000 ರೂ. ಗಳನ್ನು ಸ್ವೀಕರಿಸುವುದಿಲ್ಲ,

ಅದನ್ನು ಬ್ಯಾಂಕ್ನಲ್ಲಿ ನೀಡಿ ಎಂಬ ಸೂಚನ ಫಲಕಗಳು ಕಾಣಿಸಿಕೊಳ್ಳುತ್ತಿವೆ.ನಾವು 2000 ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತೇವೆ ಎಂದು ಇಂತಹ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಪ್ರಕಟಣೆ ಹೊರಡಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ರಶ್ಮಿತಾ ಅನೀಶ್

Exit mobile version