ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ : ಕುಂ. ವೀರಭದ್ರಪ್ಪ!

Kum veerbhadrappa

ಸದ್ಯ ದೇಶದಲ್ಲಿ ಅಘೋಷಿತ ತುರ್ತು(Emergency) ಪರಿಸ್ಥಿತಿ ನಿರ್ಮಾಣವಾಗಿದೆ. ದೇವರು, ಮೂಡನಂಬಿಕೆ ಕುರಿತು ಮಾತನಾಡಿದರೆ ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರು ‘ದೇಶದ್ರೋಹಿ’(Traitor) ಪಟ್ಟ ಕಟ್ಟುತ್ತಾರೆ.

ಕೆಲವರು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಪತ್ರಗಳನ್ನು ಕಳುಹಿಸುತ್ತಾರೆ ಎಂದು ಸಾಹಿತಿ ಕುಂ.ವೀರಭದ್ರಪ್ಪ(Kum Veerbhadrappa) ಆರೋಪಿಸಿದ್ದಾರೆ. ತುಮಕೂರಿನಲ್ಲಿ ‘ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ’ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ರಾಜಕೀಯ ಅವ್ಯವಸ್ಥೆಯ ವಿರುದ್ದ ಯಾರೂ ಧ್ವನಿ ಎತ್ತುತ್ತಿಲ್ಲ. ರಾಜಕಾರಣಿಗಳ ತಪ್ಪಿನ ವಿರುದ್ದ ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ನಾವು ಅನ್ಯಾಯಗಳ ವಿರುದ್ದ ಧ್ವನಿ ಎತ್ತದಿದ್ದರೆ, ಮುಂಬರುವ ದಿನಗಳು ಕಷ್ಟಕರವಾಗಲಿವೆ.

ಹೀಗಾಗಿ ಜನರು ಅನ್ಯಾಯದ ವಿರುದ್ದ ಧ್ವನಿ ಎತ್ತಬೇಕು. ರಾಜಕಾರಣಿಗಳ ತಪ್ಪನ್ನು ಬಹಿರಂಗವಾಗಿ ಟೀಕಿಸಬೇಕು ಎಂದು ಹೇಳಿದರು. ಸಮಾನತೆ, ಭಾವೈಕ್ಯತೆ ಮತ್ತು ಸಹಭಾಳ್ವೆಗೆ ಜೀವ ನೀಡಿದರೆ ಅದರಿಂದ ಬದುಕು ಸಾರ್ಥಕವಾಗುತ್ತದೆ. ಆದರೆ ಸತ್ಯ ಹೇಳಿದರು ಎಂಬ ಕಾರಣಕ್ಕೆ ಗೌರಿ ಲಂಕೇಶ್ ಮತ್ತು ಎಂ.ಎಂ ಕಲಬುರ್ಗಿಯವರ ಹತ್ಯೆಯಾಯಿತು. ಸಮಾಜದ ಈ ದೃಷ್ಟಿಕೋನ ಅತ್ಯಂತ ಅಪಾಯಕಾರಿ. ಇನ್ನು ಪ್ರಸ್ತುತ ಸಮಾಜದಲ್ಲಿ ಸ್ವಾಮಿಗಳು ಅತ್ಯಂತ ಭಯಾನಕರು. ಸಮಾಜದಲ್ಲಿ ಈಗ ಹೈಟೆಕ್ ಸಾಮೀಜಿಗಳ ಸಂಖ್ಯೆ ಹೆಚ್ಚಾಗಿದೆ.

ರಾಜಕಾರಣಿಗಳನ್ನು ಸ್ವಾಮೀಜಿಗಳು ಆಕ್ರಮಿಸಿಕೊಂಡಿದ್ದಾರೆ. ರಾಜಕಾರಣಿಗಳು ವೈಚಾರಿಕ ಪುಸ್ತಕಗಳಿಗಿಂತ ವಾಸ್ತುಶಾಸ್ತ್ರ, ವಾಮಾಚಾರದ ಪುಸ್ತಕಗಳನ್ನೇ ಹೆಚ್ಚಾಗಿ ಓದುತ್ತಿದ್ದಾರೆ. ಇನ್ನು ವಿರೋಧ ಪಕ್ಷದವರನ್ನು ನಿಯಂತ್ರಿಸುವುದು ಹೇಗೆ? ಚುನಾವಣೆಯನ್ನು ಗೆಲ್ಲುವುದು ಹೇಗೆ? ಎನ್ನುವುದಕ್ಕೂ ರಾಜಕಾಣಿಗಳು ಹೋಮ, ಹವನ ಮಾಡುತ್ತಾರೆ. ಹೀಗಾಗಿ ರಾಜಕೀಯದಲ್ಲಿ ವೈಜ್ಞಾನಿಕ ದೃಷ್ಟಿಕೋನವಿರುವ ನಾಯಕರ ಅವಶ್ಯಕತೆ ಇದೆ.

ಆದರೆ ಇಂದು ಶಿಕ್ಷಣವಂತರೇ ಮೂಢನಂಬಿಕೆಗಳನ್ನು ಹೆಚ್ಚಾಗಿ ನಂಬುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

Exit mobile version