ಸರ್ಕಾರ ತಾಯಿ ಹೃದಯ ತೋರಲಿ, ಹಿಜಾಬ್‍ಗೆ ಅವಕಾಶ ನೀಡಲಿ!

kumarswamy

ಹಿಜಾಬ್(Hijab) ವಿಷಯಕ್ಕಿಂತ ನಮಗೆ ಹೆಣ್ಣು(Girls) ಮಕ್ಕಳ(Students) ಶಿಕ್ಷಣ(Education) ಮುಖ್ಯ. ಹೀಗಾಗಿ ರಾಜಕೀಯ ಕಾರಣಗಳಿಗೋಸ್ಕರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುವುದು ಬೇಡ.

ರಾಜ್ಯ ಬಿಜೆಪಿ ಸರ್ಕಾರ ತಾಯಿ ಹೃದಯ ತೋರಲಿ, ಹಿಜಾಬ್‍ಗೆ ಅವಕಾಶ ನೀಡಿ, ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumarswamy) ಆಗ್ರಹಿಸಿದ್ದಾರೆ.

ಸರ್ಕಾರ ಮಕ್ಕಳ ಶಿಕ್ಷಣದ ಬಗ್ಗೆ ಉದಾತ್ತ ನಿಲುವು ಹೊಂದಬೇಕು. ಮಕ್ಕಳ ಮನಸ್ಸಿನಲ್ಲಿ ದ್ವೇಷದ ದಳ್ಳುರಿಯನ್ನು ಭಿತ್ತಬಾರದು. ಮಕ್ಕಳ ಹಾಲಿನಂತ ಮನಸ್ಸಿನ್ನು ಯಾರೂ ಒಡೆಯಬಾರದು. ಮುಸ್ಲಿಂ ಹೆಣ್ಣು ಮಕ್ಕಳಿಗೆ ಸೆರಗಿನಂತ ದುಪ್ಪಟ್ಟಾವನ್ನು, ಧರಿಸಲು ಅವಕಾಶ ನೀಡಬೇಕು. ಸರ್ಕಾರ ಈ ಕ್ರಮವನ್ನು ಕೈಗೊಂಡರೆ, ಸಮಸ್ಯೆ ಬಗೆಹರಿಯುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಮಾದ್ಯಮಗಳಿಗೆ ಹೇಳಿದರು.

ಇನ್ನು ಹಿಜಾಬ್ ವಿಚಾರದಲ್ಲಿ ಹೈಕೋರ್ಟ್‍ನ ತ್ರಿಸದಸ್ಯರ ನೇತೃತ್ವದ ಸಾಂವಿಧಾನಿಕ ಪೀಠ ನೀಡಿರುವ ತೀರ್ಪನ್ನು ನಾವು ಗೌರವಿಸಬೇಕು. ಆದರೆ ಒಂದು ಹೆಣ್ಣುಮಗು ಕಲಿತರೆ, ಒಂದು ಶಾಲೆಯೇ ತೆರೆದಂತೆ ಎಂಬ ಮಾತಿದೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಹಿಜಾಬ್ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕಿದೆ. ರಾಜಕೀಯ ಕಾರಣಕ್ಕಾಗಿ ಈ ವಿಷಯಗಳು ಇಂದು ಹೆಚ್ಚು ಚರ್ಚೆಯಾಗುತ್ತಿವೆ. ಆದರೆ ಈ ವಿಚಾರಗಳಿಂದ ಮುಗ್ದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ಈ ವಿವಾದವನ್ನು ಆದಷ್ಟು ಬೇಗ ಪರಿಹರಿಸಬೇಕಿದೆ.

ಇನ್ನು ಈ ವಿವಾದದಿಂದ ಲಾಭ ಪಡೆಯಲು ಕೆಲವು ಕಾಣದ ಕೈಗಳು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿವೆ. ಈ ವಿವಾದವನ್ನು ಇನ್ನಷ್ಟು ದಿನಗಳ ಕಾಲ ಜೀವಂತವಾಗಿಡುವ ಪ್ರಯತ್ನವೂ ನಡೆದಿದೆ. ಹೀಗಾಗಿ ಸರ್ಕಾರ ಸೂಕ್ತ ತನಿಖೆ ನಡೆಸಿ ಅಂತವರ ವಿರುದ್ದ ಕ್ರಮ ಕೈಗೊಳ್ಳಬೇಕು. ಅಂತಹ ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕಬೇಕೆಂದು ಸರ್ಕಾರವನ್ನು ಮಾಜಿ ಸಿಎಂ ಕುಮಾರಸ್ವಾಮಿಯವರು ಆಗ್ರಹಿಸಿದರು.

ಇನ್ನು ಹಿಜಾಬ್ ಕುರಿತು ನಿನ್ನೆ ರಾಜ್ಯ ವಿಧಾನಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಹೈಕೋರ್ಟ್ ನೀಡಿರುವ ತೀರ್ಪನ್ನು ಪಾಲನೆ ಮಾಡುವ ದೃಷ್ಟಿಯಿಂದ ನಾವು ಕೆಲವು ಕ್ರಮಗಳನ್ನು ಕೈಗೊಳ್ಳುತ್ತೇವೆ. ತೀರ್ಪು ಉಲ್ಲಂಘನೆ ಮಾಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಸಿದ್ದವಿದೆ ಎಂದು ಸಿಎಂ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದ್ದಾರೆ.
Exit mobile version