ಉಡುಪಿಯ ಕಾಲೇಜಿನ ಶೌಚಾಲಯಗಳಲ್ಲಿ ಹಿಡನ್ ಕ್ಯಾಮೆರಾ ಇಡಲು ಸಾಧ್ಯವೇ ಇಲ್ಲ, ಇದೆಲ್ಲ ಕೇವಲ ವದಂತಿ : ಖುಷ್ಟೂ ಸುಂದರ್

Udupi , ಜು.27: ಉಡುಪಿಯ ನೇತ್ರಜ್ಯೋತಿ (Netra Jyothi) ಪ್ಯಾರಾ ಮೆಡಿಕಲ್ (KushtooSundar about hidden camera) ಕಾಲೇಜಿನ ಶೌಚಾಲಯಗಳಲ್ಲಿ ಹಿಡನ್ ಕ್ಯಾಮೆರಾ (Hidden Camera)

ಪ್ರಕಾರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಮಂಡಳಿ ಸದಸ್ಯೆ ಖುಷ್ಟೂ ಸುಂದರ್ (Kushboo Sundar) ಗುರುವಾರ ಕಾಲೇಜಿನಲ್ಲಿ ವಿಚಾರಣೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ

ಮಾತನಾಡಿ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಡಲು ಸಾಧ್ಯವೇ ಇಲ್ಲ. ಅದೆಲ್ಲ ಕೇವಲ ವದಂತಿಗಳಷ್ಟೇ.

ಈ ನಿಟ್ಟಿನಲ್ಲಿ ಹರಿದಾಡುತ್ತಿರುವ ನಕಲಿ ವಿಡಿಯೋಗಳನ್ನು(Fake Video) ನಂಬಬೇಡಿ. ಇದೊಂದು ಶೈಕ್ಷಣಿಕ ಕೇಂದ್ರವಾಗಿದ್ದು, ಇಲ್ಲಿ ಹಿಡನ್ ಕ್ಯಾಮೆರಾಗಳು ಇರುವ ಸಾಧ್ಯತೆಗಲಿಲ್ಲ. ಪೊಲೀಸರ

(Police) ಜೊತೆಗೆ ನಾವು ಕೂಡ ಅನೇಕ ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ನಮ್ಮತನಿಖೆಯು ಆದಷ್ಟು ಬೇಗ ಪೊಲೀಸರ ಸಹಕಾರದೊಂದಿಗೆ ಮುಂದುವರಿಯಲಿದೆ ಎಂದು ಹೇಳಿಕೆ ನೀಡಿದ್ದಾರೆ .

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಹಣ ಕೇಳುವ ಸೈಬರ್ ಸೆಂಟರ್‌ಗಳ ಪರವಾನಗಿ ರದ್ದು: ಸರ್ಕಾರದ ಎಚ್ಚರಿಕೆ

ನಾವು ಈಗಷ್ಟೇ ತನಿಖೆ ಆರಂಭಿಸಿದ್ದೇವೆ. ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಾಗುತ್ತಿಲ್ಲ. ಮಾಹಿತಿಯನ್ನು ಸಂಗ್ರಹಿಸಲು ನಮಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಒಳಗಡೆ ಆಂತರಿಕವಾಗಿ

ಚರ್ಚಿಸಿದ ವಿಷಯವನ್ನು ನಾವು ಬಹಿರಂಗಪಡಿಸಲು ಸಾಧ್ಯವಾಗದ ಕಾರಣ ಇನ್ನೂ ಈ ಕುರಿತು ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಅಷ್ಟೇ ಅಲ್ಲದೆ ಈ ವಿಚಾರದಲ್ಲಿ ಯಾರು

ಕೂಡ ಯಾವುದೇ ಅಂತಿಮ ತೀರ್ಮಾನಕ್ಕೆ (KushtooSundar about hidden camera) ಬರಬೇಡಿ ಎಂದರು.

ಸಾಕ್ಷ್ಯಾಧಾರಗಳು ಸಿಕ್ಕಿವೆಯೇ ಎಂಬುದರ ಬಗ್ಗೆಯೂ ಏನೂ ಹೇಳಲು ಸಾಧ್ಯವಿಲ್ಲ, ಪೊಲೀಸರು ಕೊಡುವ ಹೇಳಿಕೆಯನ್ನು ಬಿಟ್ಟು ಬೇರೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಹೇಳಿದರು.

ಪ್ರತಿಯೊಬ್ಬರೂ ಜವಾಬ್ದಾರಿಯುತ ನಾಗರಿಕರಾಗಿರಲು ನಾನು ಪ್ರಾಮಾಣಿಕವಾಗಿ ವಿನಂತಿ ಮಾಡುತ್ತೇನೆ . ಯಾವುದೇ ವದಂತಿಗಳು, ವಾಟ್ಸಾಪ್ ಸಂದೇಶಗಳನ್ನು(Whatsap Message) ಅನುಸರಿಸಬೇಡಿ

ಎಂದು ಅವರು ಕೇಳಿಕೊಂಡರು.

ಮಹಿಳಾ ಆಯೋಗದ ಪರವಾಗಿ ನಾನು ಈ ವಿಚಾರದಲ್ಲಿ ಭಾಗವಹಿಸಿದ್ದೆ. ಪ್ರಸ್ತುತ ನಿಮಗೆ ಯಾವುದೇ ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಆಯೋಗಕ್ಕೆ ದೂರು ಬಂದಿದ್ದರಿಂದ ನಾನು ಇಲ್ಲಿದ್ದೇನೆ.

ಆರೋಪಗಳು ಹಲವು ಆಗಿರಬಹುದು. ಅದರ ಆಧಾರದಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಖುಷ್ಟೂ ಸುಂದರ್ ಹೇಳಿದ್ದಾರೆ.

ನಿಮಗೆ “ಬ್ರೇಕಿಂಗ್ ನ್ಯೂಸ್ ನೀಡಲು ನಾನು ಇಲ್ಲಿ ಬಂದಿಲ್ಲ “

ನಾನು ನಿಮಗೆ ಯಾವುದೇ ಬ್ರೇಕಿಂಗ್ ನ್ಯೂಸ್(Breaking News) ನೀಡಲು ಬಂದಿಲ್ಲ. ನಿರೀಕ್ಷಿಸಿದಂತೆ, ಇದು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಚಾರವಾಗಿದೆ ಅದು ಬಿಟ್ಟು ಇವು ಎರಡು ನಿಮಿಷದ ನೂಡಲ್ಸ್

(Noodles) ಅಲ್ಲ ಆದ್ದರಿಂದ ಕಾಯಲೇಬೇಕಾಗುತ್ತದೆ ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಸಮಿತಿ ಸದಸ್ಯ ಕುಷ್ಟು ಪ್ರತಿಕ್ರಿಯಿಸಿದರು.

ಇದನ್ನೂ ಓದಿ : ಗ್ಯಾರಂಟಿಗಳ ಜಾರಿಯಿಂದ ಶಾಶ್ವತ ಯೋಜನೆಗಳಿಗಿಲ್ಲ ಅನುದಾನ, ಕೃಷಿ ಕ್ಷೇತ್ರ, ಜಲ ಸಂಪನ್ಮೂಲಕ್ಕಿಲ್ಲ ಸೇರಿದಂತೆ ಇನ್ನೂ ಹಲವಾರು : ಬಸವರಾಜ ಬೊಮ್ಮಾಯಿ

ನಾವು ಈ ವಿಷಯದ ಬಗ್ಗೆ ಸರಿಯಾದ ಮಾಹಿತಿಯನ್ನು ನಾವೇ ನೀಡುತ್ತೇವೆ. ಈ ವಿಚಾರಕ್ಕೆ ಒಳಗೊಂಡ ಮೊಬೈಲ್ ಫೋನ್ (Mobile Phone)ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಅದರಾಚೆಗೆ, ಯಾವುದೇ

ಕಾರಣಕ್ಕೂ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದಿಲ್ಲ.ದಯವಿಟ್ಟು ನಮಗೆ ನಮ್ಮ ಕೆಲಸ ಸರಿಯಾಗಿ ಮಾಡಲು ಬಿಡಿ. ನಾವು ಎಲ್ಲಿಗೆ ಹೋಗುತ್ತೇವೆ, ಯಾರನ್ನು ಮಾತನಾಡಿಸುತ್ತೇವೆ, ಎಂಬುದರ ಬಗ್ಗೆ ಹಿಂಬಾಲಿಸಬೇಡಿ

ಎಂದರು.

ರಶ್ಮಿತಾ ಅನೀಶ್

Exit mobile version