ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬಂದಿದೆ ಬರ: ಹೋಟೆಲ್ ಮಾಲೀಕರಿಗೆ ಬರೆ

Bengaluru: ರಾಜ್ಯದಲ್ಲಿ ಹಾಲಿನ ಉತ್ಪನ್ನಗಳಿಗೆ ಬರ ಪ್ರಾರಂಭವಾಗಿದೆ. ಹಾಲಿನ ಉತ್ಪಾದನೆಯಲ್ಲಾದ ಕುಸಿತದಿಂದ ಈ (lack of nandini products) ರಾಜ್ಯದ ಕ್ಷೀರ ಅಭಾವ ಕಾಡುತ್ತಿದೆ.

ಅದ್ರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೋಟೆಲ್ (Hotel) ಉದ್ಯಮಕ್ಕೆ ಬೇಕಾದಷ್ಟು ಹಾಲು ಮತ್ತು ಹಾಲಿನ ಉತ್ಪನ್ನ ದೊರಕುತ್ತಿಲ್ಲ.

ಇದಕ್ಕೆ ಮೂಲ ಕಾರಣ ಚರ್ಮ ಗಂಟು ರೋಗ ಮತ್ತು ನೆರೆ ಪರಿಸ್ಥಿತಿಯಿಂದಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಕುಂಠಿತವಾಗಿರೋದು.

ಚರ್ಮ ಗಂಟು ರೋಗದ ಕಾರಣದಿಂದ ದಕ್ಷಿಣ ಭಾಗದಲ್ಲೂ ಹಾಲಿನ ಉತ್ಪಾದನೆ ಕಮ್ಮಿಯಾಗಿದೆ.

ಉತ್ತರ ಭಾರತದಲ್ಲಿ ಹಾಲಿನ ಉತ್ಪಾದನೆ ಕಮ್ಮಿಯಾದ್ದರಿಂದ ಅಲ್ಲಿನ ರಾಜ್ಯಗಳು ಕರ್ನಾಟಕದ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದೆ

ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ


ಕರ್ನಾಟಕದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪಾದನೆ ಕಮ್ಮಿಯಾಗಿದ್ದರಿಂದ ಹೋಟೆಲ್ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ,

ಇದನ್ನು ಓದಿ: ಬೆಂಗಳೂರು : ಮೈಸೂರು ಎಕ್ಸ್‌ಪ್ರೆಸ್‌ವೇ ಪರಿಶೀಲನೆಗೆ ಹೊರಟ ಸಿದ್ದರಾಮಯ್ಯ

ಹಾಲಿನ ಉತ್ಪನ್ನಗಳಿಗಾಗಿ ಖಾಸಗಿ ಡೈರಿಯತ್ತ (Diary) ಮುಖ ಮಾಡುತಿದ್ದು ಆರ್ಥಿಕ ಸಂಕಷ್ಟ ಎದುರಿಸುವ ಭೀತಿ ಉಂಟಾಗಿದೆ.

ಇಪ್ಪತೈದು ಸಾವಿರದಷ್ಟು ಹೋಟೆಲ್ ಗಳಿದ್ದು ಕಾಫಿ ಟೀ ಮತ್ತು ಪನೀರ್ (Paneer) ವಿಭವಗಳ ತಯಾರಿಕೆಗೆ ಸುಮಾರು ನಾಲ್ಕು ಲಕ್ಷ ಲೀಟರ್ ಹಾಲು ಮತ್ತು ಮೂರು ಲಕ್ಷ ಲೀಟರ್ ಮೊಸರು ,

ತಲಾ ಒಂದುವರೆ ಲಕ್ಷ ಕೆ.ಜಿ ಬೆಣ್ಣೆ ಮತ್ತು ತುಪ್ಪದ ಅಗತ್ಯವಿದ್ದು ಸಾಕಷ್ಟು ಪೂರೈಕೆ ಆಗುತ್ತಿಲ್ಲ ಎಂಬುದು ಹೋಟೆಲ್ (lack of nandini products) ಮಾಲೀಕರ ಅಳಲು.

ಹೊರ ರಾಜ್ಯಗಳಿಗೆ ರಫ್ತು


ಕರ್ನಾಟಕದ ಕೆಎಂಎಫ್ (KMF) ನಿಂದ ಉತ್ತರ ಭಾರತದ ರಾಜ್ಯಗಳಿಗೆ ಅಧಿಕವಾಗಿ ರಫ್ತಾಗುತ್ತಿರುವ ಕಾರಣ ಬೆಂಗಳೂರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಾದಂತ ಬೆಣ್ಣೆ ತುಪ್ಪ ಪನೀರ್ ಸಾಕಷ್ಟು ಮಾರುಕಟ್ಟೆಯಲ್ಲಿ ದೊರಕುತ್ತಿಲ್ಲ .

ಸರಕಾರ ಮತ್ತು ಕೆ ಎಂ ಎಫ್ ನೆರವಿಗೆ ಧಾವಿಸಿಬೇಕಾಗಿ ಮನವಿ


ಬೆಂಗಳೂರು ಹೋಟೆಲ್ ಗಳ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್ (Virendra N Kamat)ರವರು ಸರಕಾರ ಮತ್ತು ಕೆ ಎಂ ಎಫ್ ಹೋಟೆಲ್ ಉದ್ಯಮದ ನೆರವಿಗೆ ಬರಬೇಕು ,

ನಗರದಲ್ಲಿ ಹೋಟೆಲ್ ಉದ್ಯಮಕ್ಕೆ ತಕ್ಕಂತೆ ಹಾಲು ಮತ್ತು ಹಾಲಿನ ಉತ್ಪನ್ನ ಸಿಗುತ್ತಿಲ್ಲ ಇದರಿಂದ ವಹಿವಾಟಿಗೆ ಸಮಸ್ಯೆ ಆಗುತ್ತಿದೆ ಎಂದು ಹೊಟೇಲ್‌ ಮಾಲೀಕರ ಸಮಸ್ಯೆಯನ್ನು ವಿವರಿಸಿದ್ದಾರೆ.

Exit mobile version