ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ ತಂದೆ ಲಾಲು ಪ್ರಸಾದ್ಗೆ ಕಿಡ್ನಿ ದಾನ ಮಾಡಿದ ಪುತ್ರಿ ರೋಹಿಣಿ ಆಚಾರ್ಯ!

Bihar : ರಾಷ್ಟ್ರೀಯ ಜನತಾ ದಳ(RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu Daughter Donates Kidney) ಅವರ ಪುತ್ರಿ ರೋಹಿಣಿ ಆಚಾರ್ಯ ಇಂದು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಂದೆಗೆ ಮೂತ್ರಪಿಂಡವನ್ನು ದಾನ ಮಾಡಲು ಶಸ್ತ್ರಚಿಕಿತ್ಸೆಗೆ ಮುಂದಾದರು.

ಇಂದು ಬೆಳಗಿನ ಜಾವ 5:30ರ ಸಮಯಕ್ಕೆ ರೋಹಿಣಿ ಆಚಾರ್ಯ(Rohini Acharya) ಅವರಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಸಮಯ ನಿಗದಿಪಡಿಸಿದ್ದರು ಎನ್ನಲಾಗಿದೆ.

ಶಸ್ತ್ರಚಿಕಿತ್ಸೆಗೂ ಮುನ್ನ ರೋಹಿಣಿ ಅವರು ತಮ್ಮ ಟ್ವಿಟರ್‌(Twitter) ಖಾತೆಯಲ್ಲಿ ಆಸ್ಪತ್ರೆಯ ಹಾಸಿಗೆ ಮೇಲೆ ಕುಳಿತು, ಶಸ್ತ್ರಚಿಕಿತ್ಸೆಗೆ ತೆರಳುವ ಸಮಯ. ನನಗೆ ಶುಭವಾಗಲಿ ಎಂದು ಹರಸಿ, ರಾಕ್ ಅಂಡ್ ರೋಲ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಈ ಮೊದಲು ಶನಿವಾರ ರೋಹಿಣಿ ತಮ್ಮ ತಂದೆಗೆ ಸಣ್ಣ ಭಾವನಾತ್ಮಕ ಟಿಪ್ಪಣಿ ಬರೆದಿದ್ದರು. “ನಾವು ದೇವರನ್ನು ನೋಡಿಲ್ಲ, ಆದರೆ ದೇವರಂತೆ ನನ್ನ ತಂದೆಯನ್ನು ನೋಡಿದ್ದೇವೆ” ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/leopard-fear-in-bengaluru/

ಈ ತಿಂಗಳ ಆರಂಭದಲ್ಲಿ, ರೋಹಿಣಿ ಅವರು ತಮ್ಮ ಪೋಷಕರಿಗೆ ಸಹಾಯ ಮಾಡುತ್ತಿರುವುದು ನನ್ನ ಅದೃಷ್ಟ.

ನನ್ನ ತಾಯಿ ಮತ್ತು ತಂದೆ ನನಗೆ ದೇವರಂತೆ, ನಾನು ಅವರಿಗಾಗಿ ಏನು ಬೇಕಾದರೂ ಮಾಡಬಲ್ಲೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

ರೋಹಿಣಿ ಲಾಲು ಪ್ರಸಾದ್ ಯಾದವ್ ಅವರ ಎರಡನೇ ಪುತ್ರಿ,

ಆರ್‌ಜೆಡಿ ಮುಖ್ಯಸ್ಥರು ದೀರ್ಘಕಾಲದವರೆಗೆ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕಾರಣ ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಇತ್ತೀಚೆಗೆ ಮೂತ್ರಪಿಂಡ ಕಸಿ(Kidney Transplant) ಮಾಡಲು ಕುಟುಂಬಕ್ಕೆ ಸಲಹೆ ನೀಡಿದ್ದರು.

74 ವರ್ಷ ವಯಸ್ಸಿನವರಾದ ಲಾಲು ಪ್ರಸಾದ್ ಯಾದವ್ ಅವರು ಬಹು ಅಭಿಮಾನಿಗಳ ಸಮೂಹವನ್ನು ಹೊಂದಿದ್ದು, ಸಮಾಜವಾದಿ ನಾಯಕ ಎಂದು ಪ್ರಶಂಸಿಸಲ್ಪಟ್ಟಿದ್ದಾರೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವಾಗ ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

https://twitter.com/RohiniAcharya2/status/1599560022467301376?s=20&t=nAu2wHxTMerNvhQ9RpQWXg

ಜಾರ್ಖಂಡ್ ಹೈಕೋರ್ಟ್ ಏಪ್ರಿಲ್‌ನಲ್ಲಿ ಜಾಮೀನು ನೀಡಿದ ನಂತರ ಐದು ಹಗರಣ ಪ್ರಕರಣಗಳಲ್ಲಿ ಅವರು ಜಾಮೀನಿನ ಮೇಲೆ ಹೊರಗಿದ್ದರು.

ಅಕ್ಟೋಬರ್‌ನಲ್ಲಿ, ಮೂತ್ರಪಿಂಡ ಕಸಿಗಾಗಿ ವಿದೇಶಕ್ಕೆ ಪ್ರಯಾಣಿಸಲು ನ್ಯಾಯಾಲಯ ಅವರಿಗೆ ಅನುಮತಿ ಸೂಚಿಸಿತು ಮತ್ತು ಈ ಉದ್ದೇಶಕ್ಕಾಗಿ ನವೀಕರಿಸಲು ಅವರ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯದ ಕಸ್ಟಡಿಯಿಂದ ಬಿಡುಗಡೆ ಮಾಡಲಾಯಿತು.

Exit mobile version