Belgavi: ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣಾರ್ಭಟ ಮುಂದುವರಿದಿದ್ದು, ಪ್ರಮುಖ ಪ್ರವಾಸಿ ತಾಣವಾದ ದೂಧಸಾಗರದ ಬಳಿ ಭಾರೀ (landslide near Dudhsagar Falls) ಭೂಕುಸಿತ ಉಂಟಾಗಿರುವ
ಈ ಹಿನ್ನೆಲೆ ರೈಲು ಹಳಿ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದು, ರೈಲು ಸಂಚಾರದಲ್ಲಿ ತೊಂದರೆ ಉಂಟಾಗಿದೆ. ನೈರುತ್ಯ ರೈಲ್ವೇ ಇಲಾಖೆ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

ಗೋವಾ (Goa) ರೈಲ್ವೇ ಮಾರ್ಗವಾದ ದೂಧಸಾಗರದ ಬಳಿ ಭಾರೀ ಭೂಕುಸಿತ ಉಂಟಾಗಿದೆ. ಪಶ್ಚಿಮ ಘಟ್ಟದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಹೀಗಾಗಿ ನೈರುತ್ಯ ರೈಲ್ವೇ ಇಲಾಖೆ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.
ಬೆಳಗಾವಿ ಸೇರಿದಂತೆ ಹಲವೆಡೆ ಸುರಿಯುತ್ತಿರುವ ಭಾರಿ ಮಳೆಗೆ ದೂಧಸಾಗರ (Dudhsagar) ಜಲಪಾತದ ಹತ್ತಿರದ ಸುರಂಗ ಮಾರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು ಗೋವಾಕ್ಕೆ ಹೋಗುವ
ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ಗುಡ್ಡ ಕುಸಿತದಿಂದ ರೈಲು ಹಳಿಯ (landslide near Dudhsagar Falls) ಮೇಲೆ ಮಣ್ಣು ಬಿದ್ದಿದೆ.
ಇದನ್ನು ಓದಿ: ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಹಣ ಕೇಳುವ ಸೈಬರ್ ಸೆಂಟರ್‌ಗಳ ಪರವಾನಗಿ ರದ್ದು: ಸರ್ಕಾರದ ಎಚ್ಚರಿಕೆ
ಗೋವಾದಿಂದ ಬೆಳಗಾವಿ ಮೂಲಕ ದಿಲ್ಲಿಗೆ ತೆರಳುತ್ತಿದ್ದ ನಿಜಾಮುದ್ದಿನ್ ಎಕ್ಸಪ್ರೆಸ್ (Nijamuddin Express) ರೈಲು ಮಂಗಳವಾರ ರಾತ್ರಿ ಮಾರ್ಗವನ್ನು ಬದಲಾಯಿಸಿಕೊಂಡು ಮುಂಬೈ ಮೂಲಕ ಕಳುಹಿಸಲಾಗಿದೆ.
ಹಜರತ್ ನಿಜಾಮುದ್ದಿನ್ ಎಕ್ಸ್‌ಪ್ರೆಸ್ ರೈಲು ದಿಲ್ಲಿಯಿಂದ (Delhi) ಮೀರಜ್ ಮೂಲಕ ಗೋವಾಕ್ಕೆ ತೆರಳುತ್ತಿದ್ದಾಗ ಬೆಳಗಾವಿವರೆಗೆ ಮಾತ್ರ ಬಂದಿದ್ದು, ಬುಧವಾರ ಬೆಳಗ್ಗೆ ಬಸ್‌ಗಳಲ್ಲಿ ಇಲ್ಲಿಂದ ಪ್ರಯಾಣಿಕರನ್ನು
ಗೋವಾಕ್ಕೆ ಕಳುಹಿಸಲಾಯಿತು. ಇದರಿಂದ ಕ್ಯಾಸಲ್ ರಾಕ್‌ವರೆಗೆ ಮಾತ್ರ ರೈಲುಗಳು ತೆರಳುತ್ತಿವೆ.

ಹಠಾತ್ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ:
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (Nitesh Patil) ಹವಾಮಾನ ಇಲಾಖೆಯು ಉತ್ತರ ಕನ್ನಡ, ಉಡುಪಿ, ರತ್ನಾಗಿರಿ, ಮಹಾರಾಷ್ಟ್ರದ ಸಿಂಧುದುರ್ಗ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ
(ಫ್ಲ್ಯಾಷ್ ಫ್ಲಡ್) (Flash Flood) ಆಗುವ ಮುನ್ಸೂಚನೆ ನೀಡಿರುವುದರಿಂದ ಖಾನಾಪುರ ಸೇರಿ ಜಿಲ್ಲೆಯ ಸಾರ್ವಜನಿಕರು ಕೂಡ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಅಲ್ಲದೆ ಖಾನಾಪುರ (Khanapura) ತಾಲೂಕು ಸೇರಿ ಮೇಲ್ಕಂಡ ಜಿಲ್ಲೆಗಳ ಸಾರ್ವಜನಿಕರು ಜಲಪಾತ ನೋಡುವುದಕ್ಕೆ ಅಥವಾ ಚಾರಣ ಕೈಗೊಳ್ಳದಿರುವುದು ಒಳ್ಳೆಯದು ಎಂದು ಅವರು ಸಲಹೆ ಕೊಟ್ಟಿದ್ದಾರೆ.
ಇಂತಹ ಸಮಯದಲ್ಲಿ ಗುಡ್ಡ ಕುಸಿಯುವ ಚಾನ್ಸಸ್ (Chances) ಇರುತ್ತದೆ. ಆದ್ದರಿಂದ ಪ್ರವಾಸಿಗರು, ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಹಠಾತ್ ಪ್ರವಾಹ ಮುನ್ಸೂಚನೆ ಇರುವುದರಿಂದ
ನೆರೆಯ ರಾಜ್ಯದ ಗಡಿ ಜಿಲ್ಲೆಗಳ ಅಧಿಕಾರಿಗಳು ಖಾನಾಪುರ ಸೇರಿ ಗಡಿಭಾಗದ ತಾಲ್ಲೂಕುಗಳಲ್ಲಿ ನಿರಂತರ ಗಮನವಹಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದ (Maharashtra) ಹಲವು ಜಲಾಶಯಗಳಿಂದ ಪಂಚಗಂಗಾ ನದಿಯ ರಾಜಾಪುರ ಬ್ಯಾರೇಜ್ (Rajapur Barrage) ಮೂಲಕ 98,500 ಕ್ಯೂಸೆಕ್ ಮತ್ತು ದೂಧಗಂಗಾ ನದಿಯಿಂದ 28,160
ಕ್ಯೂಸೆಕ್ ಸೇರಿ ಕೃಷ್ಣಾ ನದಿಗೆ ಒಟ್ಟು 1.26 ಲಕ್ಷ ಕ್ಯೂಸೆಕ್ (cusec) ನೀರು ಹರಿದು ಬರುತ್ತಿದೆ. ಸೋಮವಾರದಂದು ನದಿಯಲ್ಲಿ 1.14 ಲಕ್ಷ ಕ್ಯೂಸೆಕ್ ನೀರಿನ ಹರಿವು ಇತ್ತು. ಬಾರವಾಡ ಗ್ರಾಮದ ಹೊರವಲಯಲ್ಲಿರುವ
ವೇದಗಂಗಾ ನದಿ ನೀರು ಮನೆಗಳಿಗೆ ನುಗ್ಗುತ್ತಿದೆ. ಹಾಗಾಗಿ ಅಲ್ಲಿನ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಉಪವಿಭಾಗಾಧಿಕಾರಿಯಾದ ಮಾಧವ ಗಿತ್ತೆ (Madhava Gitte)
ಅವರು ಬಾರವಾಡ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದರು.
ಭವ್ಯಶ್ರೀ ಆರ್.ಜೆ