LIC ಪ್ರೀಮಿಯಮ್ಗಳಿಂದ ಈ ವರ್ಷ ಗಳಿಸಿದ ಆದಾಯ ಎಷ್ಟು? ಖಾಸಗಿ ಕಂಪೆನಿಗಳ ಪಾಲೆಷ್ಟು?

New Delhi : LIC ದೇಶದ ಅತ್ಯಂತ ವಿಶ್ವಾಸನೀಯ ವಿಮಾ ಕಂಪೆನಿ ಎಂಬ ಹೆಸರು ಪಡೆದಿರುವ ಕಂಪೆನಿ. ಭಾರತ ಸರ್ಕಾರದ (Government of India) ಅಧೀನದಲ್ಲಿರುವ ಕಂಪೆನಿ ಅನ್ನೋ ಕಾರಣಕ್ಕೆ ಜನ ಈ ವಿಮಾ ಪಾಲಿಸಿಯನ್ನು ಜನ ಹೆಚ್ಚು (LIC premium collection this year) ನೆಚ್ಚಿಕೊಂಡಿದ್ದಾರೆ ಮೆಚ್ಚಿಕೊಂಡಿದ್ದಾರೆ. ಅದ್ರೆ ಅದಾನಿ ಹಗರಣ ನಡೆದ ಬಳಿಕ LIC ಬಗ್ಗೆ ಜನರಲ್ಲಿ ಸಾಕಷ್ಟು ಆತಂಕ ಮೂಡಿತ್ತು.

ಹಲವು ಅನುಮಾನಗಳೂ ಉದ್ಭವವಾಗಿತ್ತು. ಇವೆಲ್ಲಾ ಗೊಂದಲಗಳ ನಡುವೆ LIC ಈ ವರ್ಷ ಪ್ರೀಮಿಯಮ್ ಕಲೆಕ್ಷನ್‌ನಲ್ಲಿ ಒಳ್ಳೆ ಸಾಧನೆಯನ್ನೇ ಮಾಡಿದೆ.

ಭಾರತದ ಅತಿದೊಡ್ಡ ಜೀವ ವಿಮಾ ಕಂಪನಿಯಾದ ಎಲ್ಐಸಿ 2022-23ರ ಹಣಕಾಸು ವರ್ಷದಲ್ಲಿ ಒಳ್ಳೆಯ ಪ್ರೀಮಿಯಮ್ ಕಲೆಕ್ಷನ್ ಮಾಡಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಅಂದರೆ 2021-22 ರಲ್ಲಿ 1.9 ಲಕ್ಷ ಕೋಟಿ ಪ್ರೀಮಿಯಮ್ಗಳಿಂದ ಬಂದ ಆದಾಯವಾಗಿತ್ತು ಆದರೆ ಈಗ ಪ್ರಸ್ತುತ 2022-23ರ ಹಣಕಾಸು

ವರ್ಷದಲ್ಲಿ ಕೇವಲ ಪಾಲಿಸಿ ಪ್ರೀಮಿಯಮ್ಗಳಿಂದಲೇ ಎಲ್ಐಸಿ ಗಳಿಸಿದ ಆದಾಯ 2.32ಲಕ್ಷ ಕೋಟಿ ರೂ ಆಗಿದೆ. ಅಂದರೆ 2023ರ ಹಣಕಾಸು ವರ್ಷದಲ್ಲಿ ಶೇ. 17ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ : https://vijayatimes.com/clarification-on-40-commission/


ಭಾರತೀಯ ವಿಮಾ ಮಾರುಕಟ್ಟೆಯಲ್ಲಿ ಬಹಳಷ್ಟು ಇನ್ಷೂರೆನ್ಸ್ ಕಂಪನಿಗಳು ಸ್ಪರ್ಧಿಸುತ್ತಿವೆ ಆದರೆ ಭಾರತೀಯ (LIC premium collection this year) ಜೀವ ವಿಮಾ ನಿಗಮದ ಪ್ರಾಬಲ್ಯ ಕಡಿಮೆಯಾಗಿಲ್ಲ.

ಎಲ್‌ಐಸಿಯು 23 ಕೋಟಿ ಗ್ರಾಹಕರನ್ನು ಹೊಂದಿರುವ ಅತಿ ದೊಡ್ಡ ವಿಮಾ ಕಂಪನಿಯಾಗಿದೆ.

1956 ರಲ್ಲಿ ಸ್ಥಾಪಿಸಲಾದ ಈ ವಿಮಾ ಕಂಪನಿಯು 245 ಪ್ರಾವಿಡೆಂಟ್ ಸೊಸೈಟಿಗಳನ್ನು ಹೊಂದಿದೆ.

ಪ್ರೀಮಿಯಮ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಈಗ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಎಲ್ಐಸಿ ಹೊಂದಿರುವ ಪಾಲು

ಬರೋಬ್ಬರಿ ಶೇ. 62.58ರಷ್ಟುಇದೆ, ಹಲವು ಖಾಸಗಿ ಇನ್ಷೂರೆನ್ಸ್ ಕಂಪನಿಗಳು (Insurance Company) ಮಾತ್ರವಲ್ಲದೆ

ಎಲ್‌ಐಸಿ ಕೂಡ ಮಾರ್ಚ್ ತಿಂಗಳಲ್ಲಿ ಅತಿಹೆಚ್ಚು ಪ್ರೀಮಿಯಮ್ ಕಲೆಕ್ಷನ್ ಕಂಡಿವೆ.

ಇದನ್ನೂ ಓದಿ : https://vijayatimes.com/donate-to-pm-cares-fund/

ಇನ್ನು, ಪ್ರೀಮಿಯಮ್ಗಳಿಂದ ಬಂದ ಅದಾಯದಲ್ಲಿ2022-23ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಆದಾಯ ಕಂಡ ವಿಮಾ ಕಂಪನಿಗಳ ಪಟ್ಟಿಯಲ್ಲಿ ಎಚ್ಡಿಎಫ್ಸಿ ಲೈಫ್ ಸಂಸ್ಥೆ

ಶೇ. 18.83ರಷ್ಟು ಕಂಡು ಮೊದಲನೇ ಸ್ಥಾನದಲ್ಲಿದ್ದರೆ ಎಲ್ಐಸಿ ಎರಡನೇ ಸ್ಥಾನಕ್ಕೆ ಬರುತ್ತದೆ ಅಂದರೆ

ಎಲ್ಐಸಿ ಶೇ. 17, ಮೂರನೇ ಸ್ಥಾನದಲ್ಲಿಎಸ್ಬಿಐ ಲೈಫ್ ಇನ್ಷೂರೆನ್ಸ್ ಕಂಪನಿ (SBI Life Insurance Company) ಶೇ. 16.22 ಮತ್ತು ಐಸಿಐಸಿಐ ಪ್ರೂಡೆನ್ಷಿಯಲ್ ಶೇ. 12.55ರಷ್ಟು ಪ್ರೀಮಿಯಮ್ ಆದಾಯದಲ್ಲಿ ಪ್ರಗತಿ ಸಾಧಿಸಿವೆ.

ಮಾರ್ಚ್ ತಿಂಗಳಲ್ಲಿ ಅತಿಹೆಚ್ಚು ಪ್ರೀಮಿಯಮ್;
ಎಲ್ಐಸಿ: 10,000 ಕೋಟಿ ರೂ
ಎಚ್ಡಿಎಫ್ಸಿ ಲೈಫ್ (HDFC Life) : 2,989.17 ಕೋಟಿ ರೂ
ಎಸ್ಬಿಐ ಲೈಫ್: 2,318.77 ಕೋಟಿ ರೂ
ಟಾಟಾ ಎಐಎ ಲೈಫ್: 1,884.41 ಕೋಟಿ ರೂ

Exit mobile version