ಅಂಜಲಿ ಲಿಂಬಾಳ್ಕರ್, ಪ್ರಿಯಾಂಕ ಜಾರಕಿಹೊಳಿ, ಸೌಮ್ಯಾ ರೆಡ್ಡಿ ಸೇರಿ 6 ಮಹಿಳೆಯರಿಗೆ ಕೈ ಟಿಕೆಟ್

Bengaluru: 2024ರ ಲೋಕಸಭಾ ಚುನಾವಣೆಗೆ (List of Congress Candidates) ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 17 ಅಭ್ಯರ್ಥಿಗಳು ಸೇರಿ ಒಟ್ಟು 57

ಅಭ್ಯರ್ಥಿಗಳ ಹೆಸರುಗಳನ್ನು (List of Congress Candidates) ಘೋಷಣೆ ಮಾಡಲಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಪ್ರೊ. ಎಂ.ವಿ.ರಾಜೀವ್ ಗೌಡ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ್ ಒಡೆಯರ್ ವಿರುದ್ಧ

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬಾಗಲಕೋಟೆ ಕ್ಷೇತ್ರದಲ್ಲಿ ಪಿ.ಸಿ.ಗದ್ದಿಗೌಡರ್ ವಿರುದ್ದ ಹಾಲಿ ಸಚಿವ ಶಿವಾನಂದ ಪಾಟೀಲ್ (Shivanand Patil) ಪುತ್ರಿ ಸಯುಕ್ತಾ ಪಾಟೀಲ್ ಹಾಗೂ ಬೆಂಗಳೂರು ದಕ್ಷಿಣ

ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ವಿರುದ್ದ ಸೌಮ್ಯಾ ರೆಡ್ಡಿ ಅವರನ್ನು ಕಾಂಗ್ರೆಸ್ (Congress) ಕಣಕ್ಕಿಳಿಸಿದೆ. ಈ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಒಟ್ಟು 6 ಮಹಿಳೆಯರಿಗೆ ಟಿಕೆಟ್ ನೀಡಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ :
ಮೈಸೂರು (Mysore) – ಎಂ.ಲಕ್ಷ್ಮಣ್
ಚಿಕ್ಕೋಡಿ – ಪ್ರಿಯಾಂಕ ಜಾರಕಿಹೊಳಿ
ಬೆಂಗಳೂರು ಉತ್ತರ – ರಾಜೀವ್ ಗೌಡ
ರಾಯಚೂರು – ಕುಮಾರ್ ನಾಯಕ್
ಕಲಬುರಗಿ – ರಾಧಾಕೃಷ್ಣ

ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
ಬೀದರ್ (Bidar) -ಸಾಗರ್ ಖಂಡ್ರೆ
ದಕ್ಷಿಣ ಕನ್ನಡ – ಪದ್ಮರಾಜ್
ಬೆಂಗಳೂರು ಸೆಂಟ್ರಲ್ – ಮನ್ಸೂರ್ ಅಲಿ ಖಾನ್
ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್
ಬಾಗಲಕೋಟೆ – ಸಂಯುಕ್ತ ಪಾಟೀಲ್

ಉತ್ತರ ಕನ್ನಡ – ಅಂಜಲಿ ಲಿಂಬಾಳ್ಕರ್
ದಾವಣಗೆರೆ (Davanagere) – ಪ್ರಭಾ ಮಲ್ಲಿಕಾರ್ಜುನ್
ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ
ಚಿತ್ರದುಗ – ಚಂದ್ರಪ್ಪ
ಧಾರವಾಡ – ವಿನೋದ್ ಅಸೂಟಿ
ಕೊಪ್ಪಳ – ರಾಜಶೇಖರ್ ಹಿಟ್ನಾಳ್

ಇದನ್ನು ಓದಿ: ಮಂಗಳೂರಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮರಳುಗಾರಿಕೆ ಅಕ್ರಮದ ಕುರಿತು ಹೊಸ ಬಾಂಬ್ ಸಿಡಿಸಿದ ಶಾಸಕ ವೇಧವ್ಯಾಸ ಕಾಮತ್ 

Exit mobile version