ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: ಬಿಬಿಎಂಪಿ ಅಧಿಕಾರಿ ಮನೆ ಸೇರಿದಂತೆ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು…ಸಿಕ್ಕ ಹಣ, ಒಡವೆ ಎಷ್ಟು ಗೊತ್ತಾ?

Davangere, ಆಗಸ್ಟ್‌, 17: ರಾಜ್ಯಾದ್ಯಂತ ಲೋಕಾಯುಕ್ತ (Lokayukta trap BBMP officials) ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ಈ ವೇಳೆ ಲೋಕಾಯುಕ್ತ

ಬಲೆಗೆ ಭ್ರಷ್ಟ ಅಧಿಕಾರಿಗಳು ಬಿದ್ದಿದ್ದಾರೆ. ಹಾಗೆಯೇ ಬಿಬಿಎಂಪಿಯಲ್ಲಿ (BBMP) ಎಇಇ (AEE) ಆಗಿ ಕೆಲಸ ನಿರ್ವಹಿಸುತ್ತಿರುವ ಹೆಚ್.ಭಾರತಿ (H Bharathy) ಅವರ ದಾವಣಗೆರೆಯ ಜಯನಗರ

ನಿವಾಸದ ಮೇಲೆ ಮತ್ತು ದಾವಣಗೆರೆಯ ಜಿಲ್ಲೆಯ ಚನ್ನಗಿರಿಯ ಆರ್‌ಎಫ್‌ಒ ಸತೀಶ್ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.

ಇನ್ನು ಒಂದು ಕೆ.ಜಿ.ಬಂಗಾರ, 15 ಲಕ್ಷ ರೂಪಾಯಿಗೂ ಹೆಚ್ಚು ಹಣ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕೆ.ಮಹೇಶ್ (K Mahesh) ಹಾಗೂ ಹೆಚ್.ಭಾರತಿ ದಂಪತಿಗೆ

ಸೇರಿದ ಮನೆಯಲ್ಲಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.ದಾವಣಗೆರೆಯಲ್ಲಿಯೂ (Davanagere) ಕೂಡ ಬಿಬಿಎಂಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಚ್.ಭಾರತಿ ಅವರು

ಆಸ್ತಿ ಮಾಡಿದ್ದಾರೆ ಎಂಬ ಕುರಿತಾಗಿ ಅನೇಕ ಮಾಹಿತಿ ಇದ್ದು, ಕೆಲ ದಾಖಲಾತಿಗಳು ಸಹ ಈ ಕುರಿತಂತೆ ಸಿಕ್ಕಿವೆ ಎನ್ನಲಾಗಿದೆ. ಆದರೆ ಈ ವಿಚಾರವನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಎರಡು

ತಂಡಗಳಲ್ಲಿ ಬೆಳಗ್ಗೆ 6 ಗಂಟೆಗೆ ಬಂದ ಲೋಕಾಯುಕ್ತ ಅಧಿಕಾರಿಗಳು ಭಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪದಡಿ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ದಾಳಿಗೊಳಗಾದ ಆರ್‌ಎಫ್‌ಒ ಸತೀಶ್

ಇವರು ಕಳೆದ 6 ವರ್ಷಗಳಿಂದಲೂ ಭದ್ರಾವತಿ (Bhadravati) ಅರಣ್ಯ ಇಲಾಖೆಯ ಚನ್ನಗಿರಿಯ (Channagiri) ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಕೆಲವು

ದಿನಗಳ ಹಿಂದೆಯಷ್ಟೇ ಹೊಳಲ್ಕೆರೆಗೆ ಅವರು ವರ್ಗಾವಣೆಯಾಗಿದ್ದರು. ಅಷ್ಟೇ ಅಲ್ಲದೆ ಹೊಳಲ್ಕೆರೆಯಲ್ಲಿ (Holalkere) ಇಂದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಈ ಸಂದರ್ಭದಲ್ಲಿ

ಲೋಕಾಯುಕ್ತ ದಾಳಿ ನಡೆದಿದ್ದು, ಈ ವೇಳೆ ಆಸ್ತಿಗೆ ಸಂಬಂಧಿತ ಪತ್ರಗಳು ಹಾಗೂ ನಗದು ಹಾಗೂ ಬಂಗಾರ, ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆ : 350000 ಬಾಕ್ಸ್ ಕಿಂಗ್ ಫಿಷರ್ ಬಿಯರ್ ವಶಕ್ಕೆ ಪಡೆದ ಅಬಕಾರಿ ಇಲಾಖೆ..!

ಆರ್‌ಎಫ್‌ಒ(RFO) ಸತೀಶ್(Satheesh) ಅವರು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ(Madal Virupakshappa) ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಕಳೆದ

ವಿಧಾನಸಭೆ ಚುನಾವಣೆಯಲ್ಲಿ ಚನ್ನಗಿರಿಯಿಂದ ಮಾಡಾಳ್ ವಿರೂಪಾಕ್ಷಪ್ಪ ಅವರು ಸ್ಪರ್ಧೆ ಮಾಡಿರಲಿಲ್ಲ. ಬದಲಾಗಿ ಪಕ್ಷೇತರರಾಗಿ ಕಣಕ್ಕಿಳಿದು ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್

(Madhal Mallikarjun) ಸೋಲು ಕಂಡಿದ್ದರು. ಹೊಳಲ್ಕೆರೆಗೆ ವರ್ಗಾವಣೆಯನ್ನು ಈ ಹಿನ್ನೆಲೆಯಲ್ಲಿ ಅವರೇ ತೆಗೆದುಕೊಂಡು ಹೋಗುತ್ತಿದ್ದರೋ ಅಥವಾ ಇಲಾಖೆಯೇ ವರ್ಗಾವಣೆ ಮಾಡಿದೆಯೇ

ಎಂಬುದಾಗಿ (Lokayukta trap BBMP officials) ಇನ್ನೂ ಸ್ಪಷ್ಟವಾಗಿಲ್ಲ.

ಧಾರವಾಡದಲ್ಲಿ ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತರ ನಿವಾಸದ ಮೇಲೆ ಲೋಕಾಯುಕ್ತ ದಾಳಿ

ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದೆ. ಲೋಕಾಯುಕ್ತ ಅಧಿಕಾರಿಗಳು ಚಿತ್ರದುರ್ಗ, ದಾವಣಗೆರೆ ಸೇರಿ ಹಲವೆಡೆ ಬೇಟೆಯಾಡಿದ್ದಾರೆ.

ಬೀದರ್(Beedar) ಕಾನ್ಸ್ಟೇಬಲ್(Constable) ವಿಜಯಕುಮಾರ್(Vijay kumar), ಹೊಳಲ್ಕೆರೆಯಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ , ದಾವಣಗೆರೆಯ ಜಯನಗರ ಮಹೇಶ್ ಗೌಡ

(Jayanagara Mahesh gowda), ಅವರ ಮನೆಗಳ ಮೇಲೂ ದಾಳಿ ನಡೆದಿದೆ. ಮಡಿಕೇರಿ(Madikeri) ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ(Nanjunde Gowda) ಅವರ ಮನೆ ಮೇಲೂ

ಶೋಧ ನಡೆದಿದೆ. ರಾಜ್ಯದ ಹಲವೆಡೆ ಏಕಕಾಲಕ್ಕೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಆದಾಯಕ್ಕಿಂತ ಸಂಪತ್ತು ಹೆಚ್ಚಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ದಾವಣಗೆರೆಯ ಜಯನಗರದಲ್ಲಿರುವ ಮಹೇಶ್ ಅವರ​​ ಮನೆ ಬಾಗಿಲನ್ನು ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆಯೇ ತಟ್ಟಿದ್ದು, ಮನೆಯಲ್ಲಿದ್ದವರು ಅಧಿಕಾರಿಗಳನ್ನು ನೋಡಿ ಶಾಕ್ ಆಗಿದ್ದಾರೆ.ಹೊಳಲ್ಕೆರೆ

ಸಣ್ಣ ನೀರಾವರಿ‌ ಇಲಾಖೆ ಇಂಜಿನಿಯರ್ ಕೆ.ಮಹೇಶ್ ಹಾಗೂ ಕೆ.ಮಹೇಶ್ ಪತ್ನಿ ಬಿಬಿಎಂಪಿ ಎಇಇ ಹೆಚ್.ಭಾರತಿ ಮನೆ ಮೇಲೆ ದಾಳಿ ನಡೆದಿದೆ.

ಇದನ್ನೂ ಓದಿ : ಡಾಕ್ಟರ್‌ ಎಡವಟ್ಟು: ಆಪರೇಷನ್‌ ನಂತರ ಗರ್ಭಿಣಿ ಹೊಟ್ಟೆಯಲ್ಲಿಯೇ ಕತ್ತರಿ ಬಿಟ್ಟು ಹೊಲಿಗೆ ಹಾಕಿದ ವೈದ್ಯರು !

ಬೆಂಗಳೂರಿನ ಬಿಬಿಎಂಪಿ ಕಚೇರಿ ಮತ್ತು ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಣ್ಣ ನೀರಾವರಿ ಇಲಾಖೆ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ. ಲೋಕಾಯುಕ್ತ

ಎಸ್‌ಪಿ ವಾಸುದೇವರಾಮ್ (SP Vasudevaram), ಡಿವೈಎಸ್‌ಪಿ (DYSP) ಮೃತ್ಯುಂಜಯ (Mruthyunjaya) ನೇತೃತ್ವದಲ್ಲಿ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ದೂರು ಬಂದ

ಹಿನ್ನೆಲೆ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ರಶ್ಮಿತಾ ಅನೀಶ್

Exit mobile version