ಗೃಹಬಳಕೆ LPG ಗ್ಯಾಸ್ ಬೆಲೆಯಲ್ಲಿ 50 ರೂ. ಏರಿಕೆ ; ಎಲ್ಲೆಲ್ಲಿ ಎಷ್ಟು ಏರಿಕೆ ಇಲ್ಲಿದೆ ಮಾಹಿತಿ!

gas cylinder

ದೇಶದಲ್ಲಿ ಡೀಸೆಲ್(Diesel) ಬೆಲೆಯಲ್ಲಿ ಲೀಟರ್‍(Liter)ಗೆ 25 ರೂಪಾಯಿ ಹೆಚ್ಚಳ ಮಾಡಿ ಖರೀದಾರರನ್ನು ಕಂಗಾಲು ಮಾಡಿದೆ! ಸದ್ಯ ಇದೇ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಹೊಡೆತ ಸರ್ಕಾರ ನೀಡಿದೆ. ಹೌದು, ದೇಶಿಯ ಎಲ್ಪಿಜಿ(LPG) ಗ್ಯಾಸ್(Gas) ಸಿಲಿಂಡರ್(Cylinder) ಬೆಲೆಯಲ್ಲಿ ಏರಿಕೆ ಮಾಡಿದ್ದು, ಜನರ ಕೆಂಗಣ್ಣಿಗೆ ನೇರ ಗುರಿಯಾಗಿದ್ದಾರೆ. ಮಂಗಳವಾರದಿಂದ ಮುಂಬೈ, ನವದೆಹಲಿ ಮತ್ತು ಇತರ ನಗರಗಳಲ್ಲಿ ಪ್ರತಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಈ ಸಂಗತಿ ಗ್ರಾಹಕರಿಗೆ ಸಂಕಷ್ಟ ತಂದೊಡ್ಡಿದೆ ಎನ್ನಬಹುದು. ಅಕ್ಟೋಬರ್ 06, 2021ರ ಅವಧಿಯ ನಂತರ ಗ್ಯಾಸ್ ಬೆಲೆಯಲ್ಲಿ ಈಗ ಏರಿಕೆ ಮಾಡಲಾಗಿದೆ. ಸದ್ಯ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಗೃಹಬಳಕೆ ಸಿಲಿಂಡರ್ ದರವನ್ನು ಗಮನಿಸುವುದಾದರೆ 946.50 ರೂ. ಪಾವತಿಸಬೇಕಾಗುತ್ತದೆ. ಕೋಲ್ಕಾತ್ತದಲ್ಲಿ 976 ರೂ. ಪಾವತಿಸಬೇಕಾಗುತ್ತದೆ. ಇನ್ನು ಬೇರೆ ರಾಜ್ಯಗಳಲ್ಲಿ ಬೆಲೆ ಏರಿಕೆಯಾದ ಬಳಿಕ ದರಪಟ್ಟಿ ಎಷ್ಟಿದೆ ಎಂದು ತಿಳಿಯುವುದಾದರೆ, ಪಾಟ್ನಾದಲ್ಲಿ ಗ್ರಾಹಕರು 987.50 ರೂ, ಚೆನೈನಲ್ಲಿ 965.50 ರೂಪಾಯಿ ಹೆಚ್ಚಳವಾಗಿದೆ.

ಆದರೆ, ಇನ್ಮುಂದೆ ಇದೇ ಎಲ್.ಪಿ.ಜಿ ಸಿಲಿಂಡರ್ ಬೆಲೆಯನ್ನು ಈಗ 1039.50 ರೂ.ಗೆ ಮಾರಾಟ ಮಾಡಲಾಗುವುದು ಎಂಬ ಮಾಹಿತಿ ಹೊರಬಂದಿದೆ. ಇಷ್ಟು ದಿನ ಇಲ್ಲದ ಇಂಧನ ಬೆಲೆ ಏರಿಕೆ ಮೊನ್ನೆ ದಿಢೀರ್ ಏರಿಕೆ ಕಂಡಿತು. ಇದರ ಹೊಡೆತದಿಂದ ಇನ್ನು ಚೇತರಿಸಿಕೊಳ್ಳದ ಜನಸಾಮಾನ್ಯರ ಅಳಲು, ಈಗ ಗೃಹಬಳಕೆ ಗ್ಯಾಸ್ ಸಿಲಿಂಡರ್ ದರ ಏರಿಕೆಯಿಂದ ಮತ್ತೆ ಮುಂದುವರೆದಿದೆ.

Exit mobile version