ಉ.ಪ್ರದ ಗ್ಯಾಂಗ್‌ಸ್ಟರ್ ಅಹ್ಮದ್‌ ಸಹೋದರರ ಹತ್ಯೆ ಮಾಡಿದವರಲ್ಲಿ ಒಬ್ಬ 18ರ ಯುವಕ: ಇವನಿಗೇನಿತ್ತು ಅಂಥಾ ದ್ವೇಷ?

Lucknow (Uttar Pradesh): ಈ ಶೂಟೌಟ್‌ (Shootout) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು ! ಪೊಲೀಸರ ವಶದಲ್ಲಿದ್ದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿಗಳಾದ ಅತೀಕ್ ಅಹ್ಮದ್ (Atiq Ahmed) ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ಅವರನ್ನು ವೈದ್ಯಕೀಯ ತಪಾಸಣೆಗಾಗಿ  (lucknow shoot out) ಶನಿವಾರ ಪ್ರಯಾಗ್‌ರಾಜ್‌ನಲ್ಲಿ ಕರೆದೊಯ್ಯುವಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

 ಮಾಧ್ಯಮಗಳ ಜೊತೆ ಮಾಡುತ್ತಿದ್ದಾಗ ಮಾಧ್ಯಮದವರ ರೀತಿ ವೇಷ ಹಾಕಿದ ದುಷ್ಕರ್ಮಿಗಳು ಅಹ್ಮದ್ ಸೋದರರನ್ನು ಶೂಟ್ ಮಾಡಿ ಹತ್ಯೆ ಮಾಡಿದ್ರು.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಲವಲೇಶ್ ತಿವಾರಿ (Lavalesh Tiwari) (22), ಸನ್ನಿ ಸಿಂಗ್ (Sunny Singh) (23), ಅರುಣ್ ಮೌರ್ಯ (Arun Maurya) (18) ಎಂದು ಗುರುತಿಸಲಾಗಿದೆ.

ಈ ಪೈಕಿ ಅರುಣ್‌ ಮೌರ್ಯನಿಗೆ ಕೇವಲ 18 ವರ್ಷ ವಯಸ್ಸು. ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್‌ನನ್ನು ಕೊಂದ ಬಳಿಕ “ಜೈ ಶ್ರೀರಾಮ್” ಎಂದು ಘೋಷಣೆ ಕೂಗಿದ್ರು ಈ ಆರೋಪಿಗಳು.

ಇನ್ನು ಹದಿಹರೆಯದ ವಯಸ್ಸಿನ ಈ ಯುವಕರು ಅಹ್ಮದ್ ಸಹೋದರರನ್ನು ಯಾಕೆ ಕೊಲೆ ಮಾಡಿದ್ರು? ಇವರಿಗೂ ಅತೀಕ್ ಅಹ್ಮದ್ ಮತ್ತು ಅವರ ಸಹೋದರ (lucknow shoot out) ಅಶ್ರಫ್ ಅಹ್ಮದ್ ಸಹೋದರರಿಗೂ ಇರುವ ದ್ವೇಷ ಏನು?

ಎಂದು ಪೊಲೀಸರು ವಿಚಾರಣೆ ಮಾಡಿದಾಗ, ಅತೀಕ್ ಅಹ್ಮದ್‌ನನ್ನು ಕೊಂದು ತಾವು ದೊಡ್ಡ ಗ್ಯಾಂಗ್‌ಸ್ಟರ್‌ ಎನಿಸಿಕೊಳ್ಳಬೇಕು ಅನ್ನೋ ಉದ್ದೇಶವಿತ್ತು ಅಂತ ಹೇಳಿಕೊಂಡಿದ್ದಾರೆ.


ಈ ಆರೋಪಿಗಳು ರಾತ್ರಿ 10 ಗಂಟೆ ಸುಮಾರಿಗೆ ಧೂಮಂಗಂಜ್ (Dhoomanganj) ಪೊಲೀಸ್ ಠಾಣೆ ಬಳಿ ಅತಿಕ್ (Atiq) ಮತ್ತು ಆತನ ಸಹೋದರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಮಾಧ್ಯಮ ಪ್ರತಿನಿಧಿಗಳಂತೆ ನಟಿಸಿ ಬಂದ ಈ ಆರೋಪಿಗಳು ಅಹ್ಮದ್‌ ಸಹೋದರರ ಮೇಲೆ ಪೊಲೀಸ್‌ ಭದ್ರತೆಯ ನಡುವೆಯೇ ಹತ್ತಿರದಿಂದಲೇ ಗುಂಡು ಹಾರಿಸಿದರು.


ಘಟನೆಯ ಕುರಿತು ತನಿಖೆ ನಡೆಸಲು ನ್ಯಾಯಾಂಗ ಆಯೋಗ ರಚಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಆದೇಶಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಗುಂಡಿನ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ

ಅಖಿಲೇಶ್ ಯಾದವ್ (Akhilesh Yadav),ಯುಪಿಯಲ್ಲಿ ಅಪರಾಧವು ಉತ್ತುಂಗಕ್ಕೇರಿದೆ ಮತ್ತು “ಅಪರಾಧಿಗಳ ನೈತಿಕತೆ ಹೆಚ್ಚಾಗಿದೆ” ಎಂದು ಹೇಳಿದರು.


”ಪೊಲೀಸ್ ಸಿಬ್ಬಂದಿಯ ಭದ್ರತಾ ಸರಹದ್ದಿನ ನಡುವೆಯೇ ಕೆಲವರನ್ನು ಗುಂಡಿಕ್ಕಿ ಹತ್ಯೆಗೈದರೆ ಸಾರ್ವಜನಿಕರ ಸುರಕ್ಷತೆಯೇನು?.ಇದರಿಂದ ಸಾರ್ವಜನಿಕರಲ್ಲಿ ಭಯದ

ವಾತಾವರಣ ನಿರ್ಮಾಣವಾಗುತ್ತಿದ್ದು, ಕೆಲವರು ಉದ್ದೇಶಪೂರ್ವಕವಾಗಿ ಇಂತಹ ವಾತಾವರಣ ನಿರ್ಮಿಸುತ್ತಿದ್ದಾರೆ. “ಎಂದು ಯಾದವ್ (Yadav) ಹೇಳಿದರು.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ರವರು (Yogi Adityanath) ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಇಡೀ ಉತ್ತರ ಪ್ರದೇಶದ ಪೊಲೀಸ್ ಇಲಾಖೆಯು ಚುರುಕಾಗಿದೆ.

ಆರೋಪಿಗಳ ಕುಟುಂಬಸ್ಥರನ್ನೂ ಪತ್ತೆ ಹಚ್ಚಿ ಅವರಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ.

ಇದೀಗ ಪೊಲೀಸರ ವಶದಲ್ಲಿ ಇರುವ ಮೂವರು ಆರೋಪಿಗಳಾದ ಸನ್ನಿ ಸಿಂಗ್, ಲವಲೇಶ್ ತಿವಾರಿ, ಹಾಗೂ ಅರುಣ್ ಮೌರ್ಯ ತಾವು ದೊಡ್ಡ ಗ್ಯಾಂಗ್‌ಸ್ಟರ್‌ (Gangster) ಗಳಾಗಬೇಕೆಂಬ ಮಹದಾಸೆಯೊಂದಿಗೆ ಅತೀಕ್‌ನನ್ನು ಕೊಂದಿದ್ದಾಗಿ ಸ್ವತಃ ಹೇಳಿಕೊಂಡಿದ್ದಾರೆ.

ಇನ್ನು ಮೂವರೂ ಆರೋಪಿಗಳ ವಿರುದ್ಧ ಹಲವು ಅಪರಾಧ ಪ್ರಕರಣಗಳಿದ್ದು, ವರ್ಷಗಳ ಹಿಂದೆಯೇ ತಮ್ಮ ಕುಟುಂಬದಿಂದ ದೂರವಾಗಿದ್ದರು.

Exit mobile version