ಲಾಕಪ್ ಆತ್ಮಹತ್ಯೆ ಸಂಭವಿಸಲು ಬಟ್ಟೆಯೇ ಕಾರಣ? ; ಉತ್ತರ ಕೊಟ್ಟ ಮಧ್ಯಪ್ರದೇಶ ಪೊಲೀಸ್!

madhypradesh

ಮಧ್ಯಪ್ರದೇಶದ(Madhyapradesh) ಪೊಲೀಸ್(Police) ಠಾಣೆಯಲ್ಲಿ ಪತ್ರಕರ್ತ(Journalist) ಮತ್ತು ಕೆಲವು ಕಾರ್ಯಕರ್ತರನ್ನು ಪೊಲೀಸರು ಕಸ್ಟಡಿಯೊಳಗೆ ನೂಕಿ ಅವರ ಬಟ್ಟೆ ತೆಗೆಸಿ ಒಳಉಡುಪುಗಳಲ್ಲಿ ನಿಲ್ಲಿಸಿದ್ದರು.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್(Viral) ಆದ ಬಳಿಕ ಈ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿಗಳ ಬಟ್ಟೆ ಕಳಚಿ ಕಂಬಿ ಹಿಂದೆ ಕೂರಿಸುವುದು “ಆರೋಪಿಗಳ ಸುರಕ್ಷತೆಗೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲಾಕ್ ಅಪ್ ಆರೋಪಿಗಳು ಸೆಲ್ ನಲ್ಲಿ ಕುಳಿತಿರುವ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶಗಳು ಹೆಚ್ಚಿರುತ್ತದೆ. ಹೀಗಾಗಿಯೇ ಅವರ ಬಟ್ಟೆಗಳನ್ನು ಬಿಚ್ಚಿಡಲಾಗಿದೆ ಎಂದು ಹೇಳಿದರು.

“ನಾವು ಅವರನ್ನು ಈ ರೀತಿಯಲ್ಲಿ ಜೈಲಿನಲ್ಲಿ ಇರಿಸಿದ್ದೇವೆ ಅಂದ್ರೆ ಅವರು ತಮ್ಮ ಬಟ್ಟೆಗಳನ್ನು ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಾರದು” ಎಂದು ಎಸ್‌ಎಚ್‌ಒ ಮನೋಜ್ ಸೋನಿ ಸ್ಥಳೀಯ ಸುದ್ದಿಪತ್ರಿಕೆಗೆ ತಿಳಿಸಿದ್ದಾರೆ. ಪತ್ರಕರ್ತ ಮತ್ತು ಇತರ ಏಳು ಮಂದಿಯನ್ನು ಒಳಉಡುಪಿನಲ್ಲಿ ಲಾಕ್ ಅಪ್ ನೊಳಗೆ ಕುಳಿಸಿರುವ ಫೋಟೋಗಳು ಇದೀಗ ವೈರಲ್ ಆಗಿವೆ. ವೈರಲ್ ಆದ ಬಳಿಕ ಕೊತ್ವಾಲಿ ಸಿಧಿಯ ಪೊಲೀಸ್ ಠಾಣೆಯ ಉಸ್ತುವಾರಿ ಮತ್ತು ಸಬ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಪೊಲೀಸ್ ಲೈನ್‌ಗಳಿಗೆ ಇಬ್ಬರ ಕುರಿತು ಮಾಹಿತಿಗಳನ್ನು ಲಗತ್ತಿಸಲಾಗಿದೆ ಎಂದು ವರದಿ ಹೇಳಿದೆ.

ಏಪ್ರಿಲ್ 2 ರಂದು ಇಂದ್ರಾವತಿ ನಾಟಕ ಶಾಲೆಯ ನಿರ್ದೇಶಕ ನೀರಜ್ ಕುಂದರ್ ಬಂಧನದ ವಿರುದ್ಧ “ಅನಧಿಕೃತ ಪ್ರತಿಭಟನೆ” ನಡೆಸಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು. ಸ್ಥಳೀಯ ಬಿಜೆಪಿ ಶಾಸಕ ಮತ್ತು ಅವರ ಮಗನ ವಿರುದ್ಧ ನಕಲಿ ಗುರುತನ್ನು ಬಳಸಿ ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಕುಂದರ್ ಅವರನ್ನು ಬಂಧಿಸಲಾಯಿತು. ಸೋನಿ ಹೇಳಿಕೆ ಅನುಸಾರ, ಪ್ರತಿಭಟನಾಕಾರರನ್ನು ಏಪ್ರಿಲ್ 3 ರಂದು ಬಿಡುಗಡೆ ಮಾಡಲಾಯಿತು ಎಂದು ಹೇಳಲಾಗಿದೆ.

Exit mobile version