“ಮಹಾರಾಷ್ಟ್ರಕ್ಕೆ ಒಂದು ಬಲ ನಿರ್ಧಾರದೊಂದಿಗೆ ಹಿಂತಿರುಗುತ್ತೇವೆ” : ಬಂಡಾಯ ಶಾಸಕ

Maharashtra

ಮಹಾರಾಷ್ಟ್ರ(Maharashtra) ರಾಜಕೀಯ(Politics) ಬಿಕ್ಕಟ್ಟು ದಿನೇ ದಿನೇ ತೀವ್ರಗೊಳ್ಳುತ್ತಿದ್ದಂತೆ, ಶಿವಸೇನೆಯ(Shivasena) ಹಲವಾರು ಕಾರ್ಯಕರ್ತರು ಭಾನುವಾರ ಮಹಾರಾಷ್ಟ್ರ ಮತ್ತು ದೆಹಲಿಯಾದ್ಯಂತ ಪಕ್ಷದ ಬಂಡುಕೋರರ ವಿರುದ್ಧ ಬೀದಿಗಿಳಿದರು. ಶಿವಸೇನೆಯ ನಿಯಂತ್ರಣಕ್ಕಾಗಿ ಉದ್ಧವ್ ಠಾಕ್ರೆ(Uddhav Thackrey) ಮತ್ತು ಬಂಡಾಯ ನಾಯಕ ಏಕನಾಥ್ ಶಿಂಧೆ(Eknath Shinde) ನಡುವಿನ ಹೋರಾಟದ ಮಧ್ಯೆ, ಪ್ರತಿದಿನ ಹಕ್ಕು ಮತ್ತು ವಾದ-ಪ್ರತಿವಾದಗಳು ಹೊರಹೊಮ್ಮುತ್ತಲೇ ಇದ್ದವು. ಈ ಮಧ್ಯೆ ಶಿಂಧೆ ಶಿಬಿರವು ಸುಪ್ರೀಂ ಕೋರ್ಟ್‌ಗೆ(Supreme Court) ಅರ್ಜಿ ಸಲ್ಲಿಸಿದೆ.

ಉಪ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಹಾಗೂ ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ಸುಪ್ರಿಂ ಕೋರ್ಟ್ ಇಂದು ಅವರ ಅರ್ಜಿಯನ್ನು ಆಲಿಸುವ ಸಾಧ್ಯತೆಯಿದೆ. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರಿಗೆ ಪತ್ರ ಬರೆದು ಕೇಂದ್ರ ಭದ್ರತಾ ಪಡೆಗಳ ಸಮರ್ಪಕ ಭದ್ರತೆಯನ್ನು ಒದಗಿಸಬೇಕು ಮತ್ತು ಅಗತ್ಯವಿದ್ದರೆ ಸಿದ್ಧವಾಗಿರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಸಂಜಯ್ ರಾವತ್ ಸಹೋದರ ನಾನು ದೇಶದ್ರೋಹಿಗಳ ಮುಖ ನೋಡಲು ಗುವಾಹಟಿಗೆ ಹೋಗುವುದಿಲ್ಲ.
ಶಿವಸೇನೆ ಸಂಸದ ಸಂಜಯ್ ರಾವುತ್ ಅವರ ಸಹೋದರ ಮತ್ತು ಶಾಸಕ ಸುನೀಲ್ ರಾವುತ್, “ನಾನು ಗುವಾಹಟಿಗೆ ಏಕೆ ಹೋಗಬೇಕು? ನಾನು ಗೋವಾಕ್ಕೆ ಹೋಗುವುದು ನೈಸರ್ಗಿಕ ಸೌಂದರ್ಯವನ್ನು ನೋಡಲು, ನಾನು ಆ ದೇಶದ್ರೋಹಿಗಳ ಮುಖವನ್ನು ನೋಡಲು ಗುವಾಹಟಿಗೆ ಹೋಗುತ್ತೇನೆಯೇ? ನಾನು ಶಿವಸೈನಿಕ, ನನ್ನ ಕೊನೆಯ ಉಸಿರು ಇರುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ. ಗುವಾಹಟಿಯಲ್ಲಿ ಸುನೀಲ್ ರಾವುತ್ ಬಂಡಾಯ ಶಾಸಕರನ್ನು ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆ ಈ ಮಾತಿನ ಚಕಮಕಿ ಕೂಡ ಪ್ರಮುಖವಾಗಿದೆ.

ಸುಪ್ರೀಂ ಆದೇಶದ ನಂತರ ಶಿಂಧೆ ಶಿಬಿರವು ರಾಜ್ಯಪಾಲರನ್ನು ಸಂಪರ್ಕಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 16 ಶಾಸಕರ ಅನರ್ಹತೆಯ ನೋಟಿಸ್‌ಗೆ ಸಂಬಂಧಿಸಿದಂತೆ ಶಿಂಧೆ ಪಾಳಯ ಸಲ್ಲಿಸಿರುವ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ವಿಚಾರಣೆಗೆ ನಿಗದಿಪಡಿಸಲಾಗಿದೆ. ಮೂಲಗಳ ಪ್ರಕಾರ, ಸುಪ್ರಿಂ ಆದೇಶದ ನಂತರ ಶಿಂಧೆ ಶಿಬಿರವು ರಾಜ್ಯಪಾಲರನ್ನು ಸಂಪರ್ಕಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Exit mobile version