ಕಾಂಗ್ರೆಸ್ ಗೆ ವೋಟ್ ಹಾಕಲು ಬರದಿದ್ದರೂ, ನಾನು ಸತ್ತ ಮೇಲೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ: ಮಲ್ಲಿಕಾರ್ಜನ ಖರ್ಗೆ

Kalburgi: ಪ್ರತಿಯೊಬ್ಬರೂ ಮತದಾನ ಮಾಡಿ. ಅದರಲ್ಲೂ ಕಾಂಗ್ರೆಸ್ (Congress) ಪಕ್ಷಕ್ಕೆ ಮತದಾನ ಮಾಡಿ ಒಂದು ವೇಳೆ ನೀವು ಕಾಂಗ್ರೆಸ್ ಗೆ ವೋಟ್ ಹಾಕಲು ಬರದೇ ಇದ್ದರೆ ನಾನು ಸತ್ತ ಮೇಲೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ . ನನ್ನನ್ನು ಸುಟ್ಟರೆ ಮೇಣದಬತ್ತಿ ಹಚ್ಚಿ, ಹೂತ್ರೆ ಒಂದು ಹಿಡಿ ಮಣ್ಣಾಕಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ (Mallikarjun Kharge) ಅವರು ಬುಧವಾರ ತಮ್ಮ ತವರು ಜಿಲ್ಲೆ ಕಲಬುರಗಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯರ್ತರ ಕಣ್ಣಲ್ಲಿ ಕಣ್ಣೀರು ತರಿಸಿದ್ದಾರೆ.

ಕಲಬುರಗಿಯಲ್ಲಿ ಬಿಜೆಪಿಯ (BJP) ಹಾಲಿ ಸಂಸದ ಉಮೇಶ್ ಜಾಧವ್ (Umesh Jadhav) ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ (Radhakrishna Doddamani) ಅವರನ್ನು ಕಣಕ್ಕಿಳಿಸಲಾಗಿದೆ. ಅವರ ಪರವಾಗಿ ಪ್ರಚಾರ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರಿವರ ಮಾತಿಗೆ ಮರುಳಾಗಿ ನೀವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕದಿದ್ದರೆ ಕಲಬುರಗಿ ಜನರ ಮನಸಿನಲ್ಲಿ ನನಗೆ ಯಾವುದೇ ಸ್ಥಾನವಿಲ್ಲ ಎಂದು ಭಾವಿಸುತ್ತೇನೆ. ಕಳೆದ ಬಾರಿಯ ಚುನಾವಣೆಯಲ್ಲಿ ನನಗೆ ಸೋಲಾಯ್ತು. ಈ ಬಾರಿಯೂ ನಿಮ್ಮ ಮತ ತಪ್ಪಿದ್ರೆ ನಿಮ್ಮಗಳ ಹೃದಯ ಗೆಲ್ಲೋಕೆ ನನಗೆ ಸಾಧ್ಯವಾಗಿಲ್ಲ ಅಂತ ಒಪ್ಪಿಕೊಳ್ಳುತ್ತೇನೆ.

ಆದರೆ ನಾನು ಹುಟ್ಟಿದ್ದೇ ರಾಜಕಾರಣಕ್ಕಾಗಿ. ಇದು ನನಗೆ ಕೊನೆಯ ಚುನಾವಣೆ ಅಲ್ಲ ಮತ್ತೆ ನಿಮ್ಮ ಮನ ಗೆಲ್ಲುವ ವಿಶ್ವಾಸವಿದೆ .ಸಂವಿಧಾನದ ತತ್ವ ಉಳಿಸಲು ಕೊನೆ ಉಸಿರು ಇರೋವರೆಗೂ ನಾನು ಹೋರಾಟ ನಡೆಸುತ್ತೇನೆ. ನಾಳೆ ಸಿಎಂ ಸಿದ್ದರಾಮಯ್ಯ (CM Siddaramaiah) ನಿವೃತ್ತಿ ಘೋಷಿಸಬಹುದು. ಆದರೆ ನಾನು ಬಿಜೆಪಿ ಮತ್ತು ಆರೆಸ್ಸೆಸ್ (RSS) ಸಿದ್ಧಾಂತವನ್ನು ಸೋಲಿಸಲು ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಇಂದಲ್ಲ ನಾಳೆ ನಿಮ್ಮೆಲ್ಲರ ವಿಶ್ವಾಸ ಗಳಿಸುತ್ತೇನೆ ಎಂದು ಖರ್ಗೆ ಗುಡುಗಿದ್ದಾರೆ.

Exit mobile version