• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಬ್ಯಾನರ್ಜಿ ಎಡವಟ್ಟು: ಚಂದ್ರಯಾನ-3 ಯಶಸ್ವಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಮಮತಾ ಬ್ಯಾನರ್ಜಿ ಎಡವಟ್ಟು

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜಕೀಯ, ವಿಜಯ ಟೈಮ್ಸ್‌
ಬ್ಯಾನರ್ಜಿ ಎಡವಟ್ಟು: ಚಂದ್ರಯಾನ-3 ಯಶಸ್ವಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಮಮತಾ ಬ್ಯಾನರ್ಜಿ ಎಡವಟ್ಟು
0
SHARES
1.9k
VIEWS
Share on FacebookShare on Twitter

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ (Mamatha Banerjee) ಅವರು ಚಂದ್ರಯಾನ ಯಶಸ್ವಿಗೂ ಮುನ್ನ ಕಾರ್ಯಕ್ರಮವೊಂದರಲ್ಲಿ ಚಂದ್ರಯಾನದ ಬಗ್ಗೆ ಗೊಂದಲದ ಮಾತುಗನ್ನಾಡಿದ್ದು, ಗಗನಯಾತ್ರಿ ರಾಕೇಶ್ ಶರ್ಮಾ ಬದಲು ಬಾಲಿವುಡ್ ನಟ-ಚಿತ್ರ ನಿರ್ಮಾಪಕ ರಾಕೇಶ್ ರೋಷನ್ ಎಂದು ಹೇಳಿದ್ದಾರೆ.

viral speech

ಬುಧವಾರದಂದು ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 (Chandrayaan-3) ಮಿಷನ್ ಲ್ಯಾಂಡಿಂಗ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಇಸ್ರೋದ ಈ ಸಾಧನೆಗೆ ದೇಶದ ಅನೇಕ ಗಣ್ಯರು ಮತ್ತು ನಟ-ನಟಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಚಂದ್ರಯಾನ ಯಶಸ್ವಿ ಆಗುವ ಮುನ್ನವೇ ಕಾರ್ಯಕ್ರಮವೊಂದರಲ್ಲಿ ಚಂದ್ರಯಾನದ ಬಗ್ಗೆ ಗೊಂದಲದ ಮಾತುಗಳನ್ನು ಹಾಡಿದ್ದಾರೆ.

ಗಗನಯಾತ್ರಿ ರಾಕೇಶ್ ಶರ್ಮಾ (Rakesh Sharma) ಬದಲು ಬಾಲಿವುಡ್ ನಟ-ಚಿತ್ರ ನಿರ್ಮಾಪಕ ರಾಕೇಶ್ ರೋಷನ್ (Rakesh Roshan) ಎಂದು ಹೇಳಿದ್ದು, ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ. ವೈರಲ್ (Viral) ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಜನರ ಪರವಾಗಿ ನಾನು ಇಸ್ರೋಗೆ ಚಂದ್ರಯಾನ ಯಶಸ್ವಿಗೂ ಮುನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ. ಈ ಸಾಧನೆಯ ಕ್ರೆಡಿಟ್ ವಿಜ್ಞಾನಿಗಳು ಮತ್ತು ದೇಶಕ್ಕೆ ಸಲ್ಲಬೇಕು.

chandrayaan-3 speech

ಇನ್ನು ರಾಕೇಶ್ ರೋಷನ್ (Rakesh Roshan) ಚಂದ್ರನ ಮೇಲೆ ಇಳಿದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜತೆಗೆ ಸಂವಾದ ನಡೆಸಿದ್ದಾರೆ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ಇಲ್ಲಿ ಮಮತಾ ಬ್ಯಾನರ್ಜಿ ಅವರು ರಾಕೇಶ್ ಶರ್ಮಾ ಎಂದು ಹೇಳುವ ಬದಲು ರಾಕೇಶ್ ರೋಷನ್ ಎಂದು ಹೇಳಿದ್ದಾರೆ. 1984ರಲ್ಲಿ ಸೋವಿಯತ್ ಒಕ್ಕೂಟದ ಸೋಯುಜ್ (Soyuz) T-11 ಭಾಗವಾಗಿ ರಾಕೇಶ್ ಶರ್ಮಾ ಅವರು ಭಾರತೀಯ ವಾಯುಪಡೆಯ ಪೈಲಟ್ (Pilot) ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯರಾಗಿದ್ದರು. ದೂರದರ್ಶನದ ನೇರ ಪ್ರಸಾರದ ಮೂಲಕ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಮಾತನಾಡಿದರು.

ಇಂದಿರಾ ಗಾಂಧಿಯವರು (Indira Gandhi) ರಾಕೇಶ್ ಶರ್ಮಾ ಅವರ ಜತೆಗೆ ಮಾತನಾಡಿದ್ದು ಹೀಗೆ “ಉಪರ್ ಸೆ ಭಾರತ್ ಕೈಸಾ ದಿಖ್ತಾ ಹೈ ಆಪ್ಕೋ?” (ಬಾಹ್ಯಾಕಾಶದಿಂದ ಭಾರತವು ಹೇಗೆ ಕಾಣುತ್ತದೆ?) ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ರಾಕೇಶ್ ಶರ್ಮಾ ಅವರು ಕವಿ ಇಕ್ಬಾಲ್ (Iqbal) ಅವರನ್ನು ಉಲ್ಲೇಖಿಸಿ, “ಸಾರೆ ಜಹಾನ್ ಸೆ ಅಚ್ಚಾ” (Saare jahan se acha) ಇಡೀ ಪ್ರಪಂಚಕ್ಕಿಂತ ಉತ್ತಮ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಿದರು. ಆದರೆ ಈ ಘಟನೆಯನ್ನು ಹೇಳುವ ಭರದಲ್ಲಿ ಮಮತಾ ಬ್ಯಾನರ್ಜಿ (Mamatha Banerjee) ಅವರು ರಾಕೇಶ್ ಶರ್ಮಾ ಹೇಳುವ ಬದಲು ರಾಕೇಶ್ ರೋಷನ್ ಎಂದು ಹೇಳಿ ಎಲ್ಲ ಕಡೆ ಟ್ರೋಲ್ ಆಗಿದ್ದಾರೆ.

ರಾಜಸ್ಥಾನದ (Rajasthan) ಸಚಿವರೊಬ್ಬರು ಕೂಡ ವೈರಲ್ ಆಗುತ್ತಿದ್ದಾರೆ. ಚಂದ್ರಯಾನ -3 (Chandrayaan-3) ಮಿಷನ್‌ನ ಪ್ರಯಾಣಿಕರಿಗೆ ಅಭಿನಂದನೆ ಎಂದು ಹೇಳಿದ್ದಾರೆ. ಆದರೆ ಈ ಚಂದ್ರಯಾನ -3 ಮಾನವರಹಿತ ಮಿಷನ್ ಆಗಿರುವ ಕಾರಣ ಮಾತಿನ ಭರದಲ್ಲಿ ಈ ಎಡವಟ್ಟು ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ.

ಭವ್ಯಶ್ರೀ ಆರ್.ಜೆ

Tags: Indiamamathabanerjeepashimabangalpoliticsspeechviral

Related News

ಸ್ವಿಗ್ಗಿ, ಜೊಮ್ಯಾಟೊಗೆ ಪೈಪೋಟಿ ನೀಡಲು ಮುಂದಾದ Flipkart: ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಲು ಪ್ಲಾನ್
ಪ್ರಮುಖ ಸುದ್ದಿ

ಸ್ವಿಗ್ಗಿ, ಜೊಮ್ಯಾಟೊಗೆ ಪೈಪೋಟಿ ನೀಡಲು ಮುಂದಾದ Flipkart: ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಲು ಪ್ಲಾನ್

February 13, 2026
ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತರ ಭರ್ಜರಿ ಕಾರ್ಯಾಚರಣೆ: ನಗದು, ಚಿನ್ನ ಮತ್ತು ದಾಖಲೆಗಳು ವಶಕ್ಕೆ
ಪ್ರಮುಖ ಸುದ್ದಿ

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತರ ಭರ್ಜರಿ ಕಾರ್ಯಾಚರಣೆ: ನಗದು, ಚಿನ್ನ ಮತ್ತು ದಾಖಲೆಗಳು ವಶಕ್ಕೆ

February 13, 2026
ಕರ್ನಾಟಕದಲ್ಲಿ ಪುಟ್ಟ ಮಕ್ಕಳಲ್ಲೂ ಹೆಚ್ಚುತ್ತಿರುವ ಕ್ಯಾನ್ಸರ್ : ಆಘಾತಕಾರಿ ಅಂಕಿಅಂಶ ಬಯಲು
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಪುಟ್ಟ ಮಕ್ಕಳಲ್ಲೂ ಹೆಚ್ಚುತ್ತಿರುವ ಕ್ಯಾನ್ಸರ್ : ಆಘಾತಕಾರಿ ಅಂಕಿಅಂಶ ಬಯಲು

February 13, 2026
ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಹಸಿರು ನಿಶಾನೆ
Sports

ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಹಸಿರು ನಿಶಾನೆ

February 13, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.