ಭಾರತದಲ್ಲಿ ಒಬ್ಬ ಪುರುಷನು ಏಕ ಪೋಷಕನಾಗಿ ಹೆಣ್ಣುಮಗುವನ್ನು ದತ್ತು ಪಡೆಯುವಂತಿಲ್ಲ!

man cannot adopt a girl child

ಪ್ರಪಂಚದಲ್ಲಿ ಮಕ್ಕಳಿಲ್ಲದೇ ಕೊರಗುತ್ತಿರುವವರು ಎಷ್ಟೋ ಜನ. ಮಕ್ಕಳಿಲ್ಲದ ದಂಪತಿಗಳು ತಮಗೊಂದು ಮಗು ಬೇಕೆಂದು ಆಸೆಪಟ್ಟು ಕಾನೂನು ಬದ್ಧವಾಗಿ ಮಗುವನ್ನು ದತ್ತು ಪಡೆಯುವುದನ್ನು ನೀವು ನೋಡಿರಬಹುದು.

ಹಾಗಂತ, ಮಕ್ಕಳಿಲ್ಲದವರು ಮಗು ಬೇಕೆಂದು ಯಾರದೋ ಮಗುವನ್ನು ತಂದು ಮನೆಯಲ್ಲಿ ಸಾಕಿಕೊಳ್ಳಲು ಬಯಸಿದರೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ.

ಅಧಿಕೃತ ದತ್ತು ಕೇಂದ್ರದಲ್ಲಿ ಹೆಸರು ನೋಂದಾಯಿಸಿ ನಂತರವೇ ದತ್ತು ಪಡೆಯಬೇಕಾಗುತ್ತದೆ.

ಆದರೆ, ಈಗಿನ ಕಾಲದಲ್ಲಿ ದತ್ತು ಸ್ವೀಕರಿಸುವುದು ಹಿಂದಿನಷ್ಟು ಸುಲಭವಲ್ಲ. ಸೋದರ ಸಂಬಂಧಿಗಳ ಮಗುವನ್ನು ದತ್ತು ಪಡೆಯುವುದೂ ಸಹ ಕಾನೂನು ಬದ್ಧವಾಗಿಯೇ ನಡೆಯಬೇಕು.

https://vijayatimes.com/modi-shown-humanity/

ಇಲ್ಲದೇ ಹೋದರೆ, ಮುಂದೆ ಏನಾದರೂ ಸಮಸ್ಯೆಗಳುಂಟಾದಾಗ ದತ್ತು ಕೊಟ್ಟದ್ದಕ್ಕೂ ಮತ್ತು ಸ್ವೀಕರಿಸಿದ್ದಕ್ಕೂ ಮಾನ್ಯತೆಯಿರುವುದಿಲ್ಲ.

ದತ್ತು ಹೆಸರಲ್ಲಿ ಮಕ್ಕಳ ಕಳ್ಳ ಸಾಗಣೆ ಮತ್ತು ಮಾರಾಟ ಮಾಡುವ ಜಾಲವನ್ನು ನಿಯಂತ್ರಿಸುವ ಉದ್ದೇಶದಿಂದ,

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ದತ್ತು ಸ್ವೀಕಾರಕ್ಕೆ ಕೆಲವು ಕಾನೂನು ನಿಯಮಗಳನ್ನು ರೂಪಿಸಿದೆ. ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ ಮೂಲಕ ಅದನ್ನು ನಿರ್ವಹಿಸಲಾಗುತ್ತಿದೆ,

ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡ ಸಂಸ್ಥೆ ಗಳಿಂದ ಮಾತ್ರ ದತ್ತು ಸ್ವೀಕರಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕನಿಷ್ಠ ಒಂದು ದತ್ತು ಕೇಂದ್ರ ತೆರೆಯಬೇಕು, ಇದರ ಪ್ರಕಾರ 22 ಜಿಲ್ಲೆಗಳಲ್ಲಿ ದತ್ತು ಕೇಂದ್ರಗಳಿವೆ.

ಕೆಲವು ಜಿಲ್ಲೆಗಳಲ್ಲಿ ಒಂದಕ್ಕಿಂತ ಹೆಚ್ಚಿದ್ದರೆ, ಕೇವಲ ಬೆಂಗಳೂರಲ್ಲೇ 10 ದತ್ತು ಕೇಂದ್ರಗಳಿವೆ. ಕೇಂದ್ರೀಯ ದತ್ತು ಸಂಪನ್ಮೂಲ,

ಪ್ರಾಧಿಕಾರವು ಮಕ್ಕಳ ದತ್ತು ನೀಡಿಕೆ ನಿಯಂತ್ರಣ ಮಾರ್ಗಸೂಚಿಯನ್ನು ಹೊಂದಿದ್ದು, ಅದರ ಪ್ರಕಾರವೇ ದತ್ತು ಪಡೆಯಬೇಕು.

ನವಜಾತ ಶಿಶುವಿನಿಂದ 3 ವರ್ಷದೊಳಗಿನ ಮಗುವನ್ನು ದತ್ತು ಪಡೆಯಲು ದತ್ತು ಪೋಷಕರ ಒಟ್ಟಾರೆ ವಯಸ್ಸು 90 ವರ್ಷದೊಳಗಿರಬೇಕು.

ದಂಪತಿಯಲ್ಲಿ ಯಾರೊಬ್ಬರ ವಯಸ್ಸು ಕೂಡ 25ಕ್ಕಿಂತ ಕಡಿಮೆ ಅಥವಾ 50ಕ್ಕಿಂತ ಹೆಚ್ಚು ಇರಬಾರದು.

3 ವರ್ಷ ಮೇಲ್ಪಟ್ಟ ಮಕ್ಕಳನ್ನು ದತ್ತು ಪಡೆಯಲು ದತ್ತು ಪೋಷಕರ ಒಟ್ಟಾರೆ ವಯಸ್ಸು 105 ವರ್ಷದೊಳಗಿರಬೇಕು. ದಂಪತಿಯಲ್ಲಿ ಯಾರೊಬ್ಬರ ವಯಸ್ಸು ಕೂಡ 25ಕ್ಕಿಂತ ಕಡಿಮೆ ಅಥವಾ 55ಕ್ಕಿಂತ ಹೆಚ್ಚಿರುವಂತಿಲ್ಲ.

https://vijayatimes.com/bjp-congress-sarcasm-with-each-other/

ಏಕ ಪೋಷಕರ ಪ್ರಕರಣದಲ್ಲಿ ದತ್ತು ಪೋಷಕರ ವಯಸ್ಸು 30 ವರ್ಷಕ್ಕಿಂತ ಹೆಚ್ಚು ಮತ್ತು 50 ವರ್ಷಕ್ಕಿಂತ ಕಡಿಮೆ ಇರಬೇಕು. ಆದರೆ, ಏಕ ಪೋಷಕನಾಗಿರುವ ಪುರುಷನಿಗೆ ಹೆಣ್ಣು ಮಗುವನ್ನು ದತ್ತು ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ.


ಮಗುವನ್ನು ದತ್ತು (Adoption) ಪಡೆಯಲು ನೋಂದಣಿ ಶುಲ್ಕ 1ಸಾವಿರ ರೂ., ಗೃಹ ತನಿಖೆಗೆ (Home Investigation) 5 ಸಾವಿರ ರೂ., ಕಾನೂನು ಶುಲ್ಕ ಮತ್ತು ನಿರ್ವಹಣೆ ವೆಚ್ಚವಾಗಿ 40 ಸಾವಿರ ರೂ. ಭರಿಸಬೇಕು.

ದತ್ತು ಪಡೆಯುವವರು ಭಾರತದ ಕಾಯಂ ನಿವಾಸಿಗಳಾಗಿರಬೇಕು.

ವಾಸಸ್ಥಳ ದೃಢೀಕರಣ ದಾಖಲೆ ಸಲ್ಲಿಸಬೇಕು. ಪೋಷಕರು ತಮ್ಮ ಆರೋಗ್ಯ ಪ್ರಮಾಣ ಪತ್ರ ಸಲ್ಲಿಸಬೇಕು. ಹಾಗೇ ಸಂಬಂಧಿಗಳಲ್ಲದ ಇಬ್ಬರು ಪರಿಚಯಸ್ಥರು, ಪೋಷಕರ ಬಗ್ಗೆ ಶಿಫಾರಸು ಪ್ರಮಾಣ ಪತ್ರ ಸಲ್ಲಿಸಬೇಕು. ಜೊತೆಗೆ, ಕುಟುಂಬ, ಉದ್ಯೋಗ, ಆದಾಯದ ಬಗ್ಗೆ ಖಚಿತ ದಾಖಲೆಗಳಲ್ಲಿ ಒದಗಿಸಬೇಕು.

ಪವಿತ್ರ

Exit mobile version