ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿಗೆ ಒಂದು ತಿಂಗಳು ವಿಮಾನ ಪ್ರಯಾಣ ನಿಷೇಧ

New Delhi : ಕಳೆದ ವರ್ಷ ನವೆಂಬರ್‌ನಲ್ಲಿ ನ್ಯೂಯಾರ್ಕ್-ದೆಹಲಿ ಏರ್‌ ಇಂಡಿಯಾ ವಿಮಾನದಲ್ಲಿ(Man punished for urinating) ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಘಟನೆಗೆ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು,

ಇದೀಗ ದೆಹಲಿ ಪೊಲೀಸರು(Delhi police) ಆ ವ್ಯಕ್ತಿಗೆ ಸೂಕ್ತ ಶಿಕ್ಷೆಯನ್ನು ವಿಧಿಸಿದ್ದಾರೆ.

ಈ ಘಟನೆಯಿಂದ ತೀವ್ರ ಮನನೊಂದ ಮಹಿಳಾ ಪ್ರಯಾಣಿಕರು ಏರ್‌ ಇಂಡಿಯಾ ಸಂಸ್ಥೆಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಏರ್ ಇಂಡಿಯಾ ಬುಧವಾರ ಪ್ರಕಟಣೆಯಲ್ಲಿ ಹೇಳಿದೆ. ಈಗಾಗಲೇ ಈ ಪ್ರಕರಣದ ಬಗ್ಗೆ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು,

ಮಹಿಳಾ ಪ್ರಯಾಣಿಕರ ಮೇಲೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಮುಂದಿನ 30 ದಿನಗಳವರೆಗೆ ವಿಮಾನ ಪ್ರಯಾಣವನ್ನು ನಿಷೇಧಿಸಲಾಗಿದೆ ಎಂದು ಏರ್‌ ಇಂಡಿಯಾ ಏರ್‌ಲೈನ್ಸ್(Air India Airlines) ತಿಳಿಸಿದೆ.

ಏರ್‌ಲೈನ್‌ ಸಿಬ್ಬಂದಿಯಿಂದೇನಾದ್ರೂ ಲೋಪಗಳಾಗಿವೆಯೇ ಎಂದು ತನಿಖೆ ಮಾಡಲು ಏರ್‌ಇಂಡಿಯಾ ಈಗಾಗಲೇ ಆಂತರಿಕ ಸಮಿತಿಯನ್ನು ರಚಿಸಿದೆ.

ಅಲ್ಲದೆ ಈ ಪ್ರಕರಣಕ್ಕೆ ತ್ವರಿತ ಪರಿಹಾರ ನೀಡಿ ನ್ಯೂನತೆಗಳನ್ನು ಸರಿಪಡಿಸಲು ಏರ್ ಇಂಡಿಯಾ ಮತ್ತಷ್ಟು ಒತ್ತು ನೀಡಿದೆ ಎಂದು ಹೇಳಿದೆ.

ಮಹಿಳೆಯು ಟಾಟಾ ಗ್ರೂಪ್(Tata group) ಅಧ್ಯಕ್ಷ ಎನ್. ಚಂದ್ರಶೇಖರನ್(N Chandrashekharan) ಅವರಿಗೆ ಬರೆದ ಪತ್ರವನ್ನು ಮೊದಲು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ ನಂತರ

ಈ ಘಟನೆ ಮುನ್ನೆಲೆಗೆ ಬಂದಿದೆ. ಆ ಪತ್ರದಲ್ಲಿ ಮಹಿಳೆ ವಿಮಾನದಲ್ಲಿ ತನಗಾದ ದುಃಖದ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: https://vijayatimes.com/allegation-against-shivamurthy-swamiji/

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ತನ್ನ ಸೀಟಿನತ್ತ ನಡೆದುಕೊಂಡು ಪ್ಯಾಂಟ್ ಜಿಪ್ ತೆಗೆದು ಮೂತ್ರ ವಿಸರ್ಜನೆ ಮಾಡಿದ ಎಂದು ಮಹಿಳೆ ಆರೋಪಿಸಿದ್ದಾರೆ.

ಮೂತ್ರ ವಿಸರ್ಜನೆಯ ನಂತರ, ವ್ಯಕ್ತಿಯು ತನ್ನ ಖಾಸಗಿ ಅಂಗಗಳನ್ನು ಬಹಿರಂಗಪಡಿಸುವುದನ್ನು ಹೇಳಿಕೊಂಡಿದ್ದಾರೆ.

ಮಹಿಳೆಯ ಬಟ್ಟೆ, ಚಪ್ಪಲಿ ಮೂತ್ರದಿಂದ ನೆನದಿತ್ತು! ಕೂಡಲೇ ಏರ್‌ ಇಂಡಿಯಾ ಸಿಬ್ಬಂದಿಗಳು ಮಹಿಳೆಗೆ ಹೊಸ ಬಟ್ಟೆಗಳನ್ನು ಮತ್ತು ಚಪ್ಪಲಿಯನ್ನು ನೀಡಿದರು ಎಂಬುದನ್ನು ಮಹಿಳೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈಗಾಗಲೇ ಆ ವ್ಯಕ್ತಿ ವಿರುದ್ಧ ದೆಹಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹಾಗೂ ಏರ್ ಇಂಡಿಯಾ ಕಾನೂನು ಜಾರಿ ಸಂಸ್ಥೆಗಳು ಮತ್ತು ನಿಯಂತ್ರಕ ಅಧಿಕಾರಿಗಳಿಗೆ ಸಹಾಯ ಮಾಡಲು ಸದಾ ಬದ್ಧವಾಗಿದೆ ಎಂದು ಏರ್‌ಲೈನ್ಸ್ ಹೇಳಿದೆ.

ಮೊದಲ ಹಂತವಾಗಿ, ಏರ್ ಇಂಡಿಯಾ ಆ ವ್ಯಕ್ತಿಗೆ 30 ದಿನಗಳವರೆಗೆ ವಿಮಾನ ಪ್ರಯಾಣವನ್ನು ನಿಷೇಧಿಸಿದೆ ಮತ್ತು ಮುಂದಿನ ಕ್ರಮಕ್ಕಾಗಿ DGCAಗೆ ವಿಷಯವನ್ನು ವರದಿ ಮಾಡಿದೆ.

ಏರ್‌ ಇಂಡಿಯಾ ಸಂಸ್ಥೆಯು ತನಿಖೆ ಮತ್ತು ವರದಿ ಪ್ರಕ್ರಿಯೆಯಲ್ಲಿ ನೊಂದ ಪ್ರಯಾಣಿಕರು ಮತ್ತು ಅವರ ಕುಟುಂಬದೊಂದಿಗೆ ನಿಯಮಿತ ಸಂಪರ್ಕದಲ್ಲಿದೆ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 294, 509, ಮತ್ತು 510 ಮತ್ತು ಏರ್ ಕ್ರಾಫ್ಟ್ಸ್ ಆಕ್ಟ್(Aircraft act) 23ರ ಅಡಿಯಲ್ಲಿ ಜನವರಿ 4 ರಂದು ಏರ್ ಇಂಡಿಯಾ ಹಂಚಿಕೊಂಡ

ಮಹಿಳೆಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್ ಇಂಡಿಯಾ ಡಿಸೆಂಬರ್ 28 ರಂದು ಪೊಲೀಸರೊಂದಿಗೆ ಘಟನೆಯ ಮೂಲಭೂತ ವಿವರಗಳನ್ನು ಹಂಚಿಕೊಂಡಿದೆ.

ನಂತರ ಪೊಲೀಸರು ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ತನ್ನ ದೂರನ್ನು ಈ ಮೊದಲೇ ಏರ್ ಇಂಡಿಯಾಕ್ಕೆ ನೀಡಿದ್ದರು.

ಇದನ್ನೂ ಓದಿ: https://vijayatimes.com/dakshina-kannada-district-worried/

ಹೀಗಾಗಿ ಅವರು ಅದನ್ನು ತನ್ನ ಮೂಲ ದೂರಿನಂತೆ ಬಳಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ವಯಂ ಪ್ರೇರಿತವಾಗಿ ರಾಷ್ಟ್ರೀಯ ಮಹಿಳಾ ಆಯೋಗವು ದೆಹಲಿ ಪೊಲೀಸರಿಂದ ಐದು ದಿನಗಳೊಳಗೆ ಈ ವಿಷಯದಲ್ಲಿ ತೆಗೆದುಕೊಂಡ ಕ್ರಮದ ಬಗ್ಗೆ ವಿವರವಾದ ವರದಿಯನ್ನು ಕೇಳಿದೆ.

ಮಹಿಳಾ ಆಯೋಗವು ಚಂದ್ರಶೇಖರನ್ ಅವರಿಂದ ವಯಸ್ಸಾದ ಮಹಿಳೆಯ ವಿರುದ್ಧ ಅನುಚಿತ ನಡವಳಿಕೆಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ವೈಯಕ್ತಿಕ ಮಧ್ಯಸ್ಥಿಕೆಯನ್ನು ಕೋರಿದೆ.

ವಿಸ್ತೃತ ಕ್ರಮ ಕೈಗೊಂಡ ವರದಿಯನ್ನು 7 ದಿನಗಳಲ್ಲಿ ಆಯೋಗಕ್ಕೆ ತಿಳಿಸಬೇಕು ಎಂದು ಎನ್‌ಸಿಡಬ್ಲ್ಯೂ(NCW) ಅಧ್ಯಕ್ಷೆ ರೇಖಾ ಶರ್ಮಾ(Rekha sharma) ಹೇಳಿದ್ದಾರೆ.

Exit mobile version