Kolkata : (ಆ.11): ಬಹುಶಃ ನೀವು ಇದಕ್ಕಿಂತ ಭೀಕರ ಹಾಗೂ ಇಂತಹ ಒಂದು ಹೀನ ಕೃತ್ಯ ಎಲ್ಲೂ ಕೂಡ (man raped his mother) ಕೇಳಿರಲು ಸಾಧ್ಯವೇ ಇಲ್ಲ. ನಾಲ್ಕು ವರ್ಷಗಳ ಹಿಂದೆ
ಎರಡು ಪ್ರತ್ಯೇಕ ಸಂದರ್ಭದಲ್ಲಿ ಜನ್ಮ ನೀಡಿದ ತಾಯಿಯನ್ನೇ ಅತ್ಯಾಚಾರ ಮಾಡಿದ ಪುತ್ರನಿಗೆ ಇದೀಗ ಜೀವಾವಧಿ ಶಿಕ್ಷೆಯನ್ನು ಕೋಲ್ಕತ್ತಾದ (Kolkata) ಕೋರ್ಟ್(Court) ನೀಡಿದೆ.
ಈ ಪ್ರಕರಣದಲ್ಲಿ 33 ವರ್ಷದ ಕೋಲ್ಕತ್ತಾದ ಹರಿದೇವಪುರದ (Haridevapurada) ಎಂಬ ವ್ಯಕ್ತಿ ತಪ್ಪಿತಸ್ಥ ಎಂದು ನಗರ ನ್ಯಾಯಾಲಯ ತೀರ್ಮಾನ ಮಾಡಿದೆ ಅದರಂತೆ ಆತನಿಗೆ
ಜೀವಾವಧಿಯ ಶಿಕ್ಷೆಯನ್ನು ಗುರುವಾರ (man raped his mother) ಪ್ರಕಟ ಮಾಡಿದೆ.

2019ರ ಮೊದಲು ಮಾದಕ ವ್ಯಸನ ಮುಕ್ತ ಮಾಡುವ ಪುನರ್ವಸತಿ ಕಾರ್ಯಕ್ರಮದಲ್ಲಿ ಸರಿ ಸುಮಾರು ಏಳು ಸಂದರ್ಭದಲ್ಲಿ ಭಾಗಿಯಾಗಿದ್ದರು.ಈತ ತೀವ್ರವಾಗಿ ಮಾದಕ ವ್ಯಸನಿಯಾಗಿದ್ದ
(Drug addict). ಸಂತ್ರಸ್ಥೆಯಿಂದಲೇ 2019ರ ಮೇ 5 ರಂದು ದೂರು ದಾಖಲಾಗಿತ್ತು.ಪಶ್ಚಿಮ ಬಂಗಾಳದ(West Bengal) ಕೋಲ್ಕತ್ತಾದ ಹರಿದೇವಪುರ(Haridevapura) ಪೊಲೀಸ್ ಠಾಣೆಯಲ್ಲಿ
(Police Station) 65 ವರ್ಷದ ಮಹಿಳೆ ಅತ್ಯಾಚಾರದ ಕೇಸ್ ಅನ್ನು ಸ್ವಂತ ಮಗನ ವಿರುದ್ಧವೇ ದಾಖಲು ಮಾಡಿದ್ದರು.
ಇದನ್ನೂ ಓದಿ : ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ : ಸಿಎಂ ಸಿದ್ದರಾಮಯ್ಯ
ಆತ ನಮ್ಮದೇ ಇನ್ನೊಂದು ಮನೆಯಲ್ಲಿ ತನ್ನ ಹಿರಿಯ ಮಗನ ಮದುವೆಯ ಬಳಿಕ ವಾಸ ಮಾಡಲು ಆರಂಭ ಮಾಡಿದ್ದ. ಈ ವೇಳೆ ನಾನು ಕಿರಿಯ ಮಗನೊಂದಿಗೆ ನನ್ನ ಮನೆಯಲ್ಲಿ ವಾಸವಿದ್ದೆ ಎಂದು ಮಹಿಳೆ
ದೂರಿನಲ್ಲಿ ತಿಳಿಸಿದ್ದರು. ಆಕೆ ತನ್ನ ದೂರಿನಲ್ಲಿ ತನಗೆ ಈ ಮನೆಯಲ್ಲಿ ಆದ ಭಯಾನಕ ಘಟನೆಗಳನ್ನು ವಿವರಿಸಿದ್ದಾರೆ.ಕಿರಿಯ ಮಗ ನನ್ನ ಮೇಲೆ ಅದೇ ವರ್ಷದ ಏಪ್ರಿಲ್ 14ರಂದು ಹಲ್ಲೆ ನಡೆಸಿದ್ದ. ಆದರೆ,ಈ ಬಗ್ಗೆ
ಯಾರಿಗೂ ತಿಳಿಸಿರಲಿಲ್ಲ ಏಕೆಂದರೆ ಸಾಮಾಜಿಕ ಕಳಂಕದ ಭಯ ನನ್ನನ್ನು ಆವರಿಸಿತ್ತು ಎಂದು ಹೇಳಿದ್ದಾರೆ.

ಆದರೆ, ಆತನಿಗೆ ಇನ್ನಷ್ಟು ನನ್ನ ಮೇಲೆ ಹಿಂಸೆ ಮಾಡಲು ಪ್ರೇರೇಪಿಸಿದಂತೆ ಕಾಣುತ್ತದೆ ಏಕೆಂದರೆ ನನ್ನ ಈ ಮೌನವೇ ಅದಕ್ಕೆ ಕಾರಣ. ಆತ ಇನ್ನಷ್ಟು ಹಿಂಸಾತ್ಮಕವಾಗಿ ಅದೇ ವರ್ಷದ ಮೇ 5 ರಂದು ವರ್ತನೆ
ಮಾಡಿದ್ದ.ಆತನನ್ನು ಪೊಲೀಸರು ಇದಾದ ಬಳಿಕ ಬಂಧಿಸಿದ್ದರು. ನ್ಯಾಯಾಲಯ ಶಿಕ್ಷೆ ಘೋಸಣೆ ಮಾಡುವ ಮುನ್ನ ಆರೋಪಿಯು ಜೈಲಿನಲ್ಲಿ ಏಳೂವರೆ ತಿಂಗಳ ಕಾಲ ಕಾಲ ಕಳೆದಿದ್ದರು. ಸಂತ್ರಸ್ಥೆಯಾಗಿರುವ
ಆತನ ತಾಯಿಯ ಸಾಕ್ಷ್ಯ, ಹಾಗೂ ಇನ್ನಿತರ ಏಳು ಹೆಚ್ಚುವರಿ ಸಾಕ್ಷಿಗಳು ಮತ್ತು ವೈದ್ಯಕೀಯ ಮೌಲ್ಯಮಾಪನ ನೀಡಿದ ಹೇಳಿಕೆಗಳನ್ನು ಆಧರಿಸಿ ಈ ಹಂತದಲ್ಲಿ ನಡೆದ ವಿಚಾರಣೆಯಲ್ಲಿ ಕೋರ್ಟ್ ಜೀವಾವಧಿ
ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.
ತಾಯಿಯ ಹಿರಿಯ ಮಗ ಕೂಡ ಈ ಸಂದರ್ಭದಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಅದಲ್ಲದೆ ಇಬ್ಬರು ವೈದ್ಯಕೀಯ ಶಾಸ್ತ್ರದ ವ್ಯಕ್ತಿಗಳು ಆಕೆಯ ನಿವಾಸದ ಕೆಳಗೆ ಬಾಡಿಗೆ ಮನೆ ಪಡೆದುಕೊಂಡಿದ್ದರು ಅವರು
ಕೂಡ ಸಾಕ್ಷ್ಯ ನುಡಿದಿದ್ದಾರೆ.
ರಶ್ಮಿತಾ ಅನೀಶ್