ಮಂಡ್ಯ ಬೈಪಾಸ್ ಸಾರ್ವಜನಿಕರ ಓಡಾಟಕ್ಕೆ ಸಿದ್ಧವಾಗಿದೆ : ಸಂಸದ ಪ್ರತಾಪ್ ಸಿಂಹ

Mysore : ಮಂಡ್ಯ ಬೈಪಾಸ್(Mandya Bypass) ತೆರೆಯುವುದರಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಪ್ರಮುಖ ನಗರಗಳ ಮೂಲಕ ಹಾದುಹೋಗುವಾಗ ವಾಹನ ದಟ್ಟಣೆಯನ್ನು ತಪ್ಪಿಸಲು (Mandya Bypass is open) ಪ್ರಯಾಣಿಕರಿಗೆ ಈ ಮಾರ್ಗ ಸಹಾಯ ಮಾಡುತ್ತದೆ.

ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಇದು ಮತ್ತಷ್ಟು ಕಡಿಮೆ ಮಾಡುತ್ತದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ(Prathap Simha) ಹೇಳಿದ್ದಾರೆ.

ಬೆಂಗಳೂರು ಮತ್ತು ಮೈಸೂರು ನಡುವೆ ದಿನನಿತ್ಯ ಪ್ರಯಾಣಿಸುವವರಿಗೆ ಇದು ಒಳ್ಳೆಯ ಸುದ್ದಿಯಾಗಿದ್ದು, ಈ ಹಿಂದೆ ಮೈಸೂರು-ಕೊಡುಗು ಸಂಸದ

ಪ್ರತಾಪ್ ಸಿಂಹ ಮೈಸೂರು-ಬೆಂಗಳೂರು(Mysore-Bangalore) ದಶಪಥ ರಸ್ತೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ(Social Media) ಖಾತೆಗಳಲ್ಲಿ ಇಂಚಿಂಚು ಮಾಹಿತಿಯನ್ನು ಕೊಡುತ್ತಿದ್ದರು.

ಸದ್ಯ ಅದೇ ರೀತಿಯಲ್ಲಿ ಇದೀಗ ಮಂಡ್ಯ ಬೈಪಾಸ್ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಎಕ್ಸ್‌ಪ್ರೆಸ್‌ವೇನಲ್ಲಿ ಮಂಡ್ಯ ಬೈಪಾಸ್ ಈಗ ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯಿಂದ ಯೋಜನೆ ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸದ ಪ್ರತಾಪ್ ಸಿಂಹ ಬುಧವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ದೃಢಪಡಿಸಿದ್ದಾರೆ.

ಮಹತ್ವಾಕಾಂಕ್ಷೆಯ ದಶಪಥ ಅಂದ್ರೆ ೧೦ ಲೇನ್ ಎಕ್ಸ್‌ಪ್ರೆಸ್‌ವೇ(Express way), ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 75 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.

ಫೆಬ್ರವರಿ ತಿಂಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಈ ದಶಪಥವನ್ನು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ತಾರಕಕ್ಕೇರುತ್ತಿದೆ ಸಿದ್ದು-ಸುಧಾಕರ್‌ ಜಟಾಪಟಿ: ನಿಮ್ಮ ಬಳಿ ಏನಾದರೂ ದಾಖಲೆ ಇದ್ರೆ ಕೊಡಿ ಎಂದು ಸುಧಾಕರ್‌ ಸವಾಲು

ಮಂಡ್ಯ ಬೈಪಾಸ್‌ ಉದ್ಘಾಟನೆಯಿಂದಾಗಿ ಪ್ರಯಾಣಿಕರು ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗಿದೆ.

ಮೈಸೂರಿಗೆ ಹೋಗುವ ಮಾರ್ಗದಲ್ಲಿ ಪ್ರಮುಖ ನಗರಗಳ ಮೂಲಕ ಹಾದುಹೋಗುವಾಗ ದಟ್ಟಣೆಯ ಪ್ರದೇಶಗಳನ್ನು ತಪ್ಪಿಸಲು ಬೈಪಾಸ್‌ಗಳು ಪ್ರಯಾಣಿಕರಿಗೆ ಹೆಚ್ಚು ಸಹಾಯ ಮಾಡುತ್ತದೆ.

ಈ ಹಿಂದೆ ರಾಮನಗರ(Ramnagar) ಮತ್ತು ಚನ್ನಪಟ್ಟಣ(Channapatna) ಬೈಪಾಸ್‌ಗಳನ್ನು ಬಳಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ನಿರ್ಮಾಣದ ಅಂತಿಮ ಹಂತವು ಪೂರ್ಣಗೊಂಡಿದ್ದು,

ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು 70 ರಿಂದ 75 ನಿಮಿಷಗಳವರೆಗೆ ನಿಗದಿಪಡಿಸಲಾಗಿದೆ. “ಗಾಯ್ಸ್, ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತವಾಗಿದೆ! ನಿಮ್ಮ ಡ್ರೈವ್ ಅನ್ನು ಆನಂದಿಸಿ.

ಆದರೆ ಸ್ಪೀಡ್ ಕಿಲ್ಸ್ ಎಂಬ ಹ್ಯಾಶ್ ಟ್ಯಾಗ್(Hash tag) ಬಳಸಿ ಸುರಕ್ಷಿತ ಚಾಲನೆ ಮಾಡಿ ಎಂದು ಪ್ರತಾಪ್ ಸಿಂಹ ಟ್ವಿಟರ್‌ನಲ್ಲಿ(Twitter) ಟ್ವೀಟ್ ಮಾಡುವ ಮುಖೇನ ತಿಳಿಸಿದ್ದಾರೆ.

117 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ 275 ಅನ್ನು ಬರೋಬ್ಬರಿ 8,350 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

Exit mobile version