ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ ಪೋಸ್ಟರ್ : ಭುಗಿಲೆದ್ದ ಅಸಮಾಧಾನ …

Mandya : ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಕಂದಾಯ ಸಚಿವ ಆರ್. ಅಶೋಕ್(R Ashok) ಅವರನ್ನು ಮಂಡ್ಯ ಜಿಲ್ಲಾ (Mandya Go Back Ashok) ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದೇ ತಡ ರಾಜಧಾನಿಯಲ್ಲಿ ‘ಗೋ ಬ್ಯಾಕ್ ಅಶೋಕ್’ ಎಂಬ ಪೋಸ್ಟರ್‌ಗಳು ಹರಿದಾಡಿದೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಹಿಂದೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಗೋಪಾಲಯ್ಯ(K Gopalaiya)

ಅವರನ್ನು ತೆಗೆದು ಕಂದಾಯ ಸಚಿವ ಆರ್. ಅಶೋಕ್ ಅವರನ್ನು ನೇಮಿಸಿದ್ದಾರೆ!

ಸದ್ಯ ಈ ಒಂದು ಸಂಗತಿ ಹಲವರಿಗೆ ಅಸಮಾಧಾನ ತಂದಿದ್ದು,

ಆರ್. ಅಶೋಕ್‌ ಅವರನ್ನು ನೂತನ ಮಂಡ್ಯ(Mandya) ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ ಬೆನ್ನಲ್ಲೇ ‘ಗೋ ಬ್ಯಾಕ್ ಅಶೋಕ್’ (Go Back Ashok)ಪೋಸ್ಟರ್‌ಗಳು ಬೆಂಗಳೂರಿನ ಹಲವೆಡೆ ಹರಿದಾಡಿತು.

ಇದನ್ನೂ ಓದಿ: ಕಾಂಗ್ರೆಸ್‌ ಈಗ ಕರ್ನಾಟಕದಲ್ಲೂ ಕೊನೆ ಉಸಿರೆಳೆಯುತ್ತಿದೆ ; ಬಿಜೆಪಿ ಲೇವಡಿ

ಗಣರಾಜ್ಯೋತ್ಸವದಂದು(Republic Day) ತ್ರಿವರ್ಣ ಧ್ವಜವನ್ನು ಹಾರಿಸಲು ಸಚಿವ ಆರ್ಶೋಕ್‌

ಅವರು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ‘ಗೋ ಬ್ಯಾಕ್ ಅಶೋಕ್’ ಎಂಬ ಪೋಸ್ಟರ್‌ಗಳನ್ನು(Poster) ಉದ್ದೇಶಪೂರ್ವಕವಾಗಿ ಹಾಕಲಾಗಿತ್ತು.

ಆ ಪೋಸ್ಟರ್‌ಗಳನ್ನು ಹಾಕಿದ್ದು ಯಾರು ಎಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ! ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಆದ್ರೆ, ಗೋಪಾಲಯ್ಯ ಅವರ ಸ್ಥಾನಕ್ಕೆ ಅಶೋಕ್ ಅವರನ್ನು ನೇಮಿಸಿದ್ದಕ್ಕೆ ಮಂಡ್ಯದಲ್ಲಿ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿರುವುದು ಸ್ಪಷ್ಟ.

ಮಂಡ್ಯ ಜಿಲ್ಲೆಯನ್ನು ಬಿಜೆಪಿ(BJP) ತನ್ನ ತೆಕ್ಕೆ ತೆಗೆದು ಭಾರೀ ಕಸರತ್ತು ಮಾಡುತ್ತಿದೆ. ಈಗಾಗಲೇ ಮೋದಿಯವರೂ(Narendra Modi) ಕೂಡ ಮಂಡ್ಯಕ್ಕೆ ಭೇಟಿ ಕೊಟ್ಟು ಮೋಡಿ ಮಾಡಲು ಯತ್ನಿಸಿದ್ರು.

ಜನರಿಗೆ ಸಾಕಷ್ಟು ಭರವಸೆಗಳನ್ನೂ ನೀಡಿದ್ರು. ಹಾಗಾಗಿ ಮಂಡ್ಯದಲ್ಲಿ ಜೆಡಿಎಸ್‌(JDS) ಪ್ರಾಬಲ್ಯ ಮುರಿದು ಕಮಲವನ್ನರಳಿಸಲು

ಈ ಬದಲಾವಣೆ ಮಾಡಿರಬೇಕು ಅನ್ನೋದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳಾಗಿವೆ.

ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ನೇಮಕ ಮಾಡಿದ್ದಾರೆ.

ಸದ್ಯ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ಆರು ಜೆಡಿಎಸ್ ಮತ್ತು ಬಿಜೆಪಿ ಒಂದನ್ನು ಪ್ರತಿನಿಧಿಸುತ್ತಿದೆ.

ಗೌಡರ ಪ್ರಾಬಲ್ಯ ಹೆಚ್ಚಿರುವ ಮಂಡ್ಯಕ್ಕೆ ಲಗ್ಗೆ ಇಡಲು ಈ ತಂತ್ರಗಾರಿಕೆ ಅನ್ನೋದು ಸ್ಪಷ್ಟ.

ಅಶೋಕ್ ಬಿಜೆಪಿಯ ಪ್ರಬಲ ಒಕ್ಕಲಿಗ(Okkaliga) ನಾಯಕನಾಗಿರೋದ್ರಿಂದ ಜೆಡಿಎಸ್‌ ನಾಯಕರಿಗೆ ಸಡ್ಡು ಹೊಡೆಯೋ ಸಲುವಾಗಿ ಆರ್‌. ಅಶೋಕ್ ಅವರಿಗೆ ಮಂಡ್ಯದ ಉಸ್ತುವಾರಿ ನೀಡಲಾಗಿದೆ ಅನ್ನೋದು ಬಿಜೆಪಿ ನಾಯಕರ ಅಭಿಪ್ರಾಯ.

Exit mobile version