ಕಟುಕರಿಗೆ ಗೋವುಗಳನ್ನು ಮಾರುತ್ತಿರುವ ಇಸ್ಕಾನ್: ಬಿಜೆಪಿ ಸಂಸದೆ ಮೇನಕಾ ಗಾಂಧಿ ಗಂಬೀರ ಆರೋಪ

New Delhi: ಬಿಜೆಪಿ ಸಂಸದೆ ಮೇನಕಾ ಗಾಂಧಿ (Maneka Gandhi complaint on ISKCON) ಇಸ್ಕಾನ್ ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಗೋಶಾಲೆಗಳನ್ನು ಸ್ಥಾಪಿಸುವ ನೆಪದಲ್ಲಿ ಸರ್ಕಾರದಿಂದ ಭೂಮಿಯಂತಹ ಪ್ರಯೋಜನಗಳನ್ನು ಪಡೆದುಕೊಳ್ಳುವ ಇಸ್ಕಾನ್, ವಯಸ್ಸಾದ ಹಾಗೂ ಗೊಡ್ಡು ಹಸುಗಳನ್ನು ಕಟುಕರಿಗೆ ಮಾರಾಟ

ಮಾಡುತ್ತಿದೆ ಎಂದು (Maneka Gandhi complaint on ISKCON) ಅವರು ಆರೋಪಿಸಿದ್ದಾರೆ.

ಗೋಶಾಲೆಗಳಲ್ಲಿ ಇರುವ ಹಸುಗಳನ್ನು ಕಟುಕರಿಗೆ ನೀಡುವ ಮೂಲಕ ಇಸ್ಕಾನ್ ದೇಶದಲ್ಲಿ ‘ಭಾರಿ ವಂಚನೆ’ ಮಾಡುತ್ತಿದೆ ಎಂದು ಬಿಜೆಪಿ (BJP) ಸಂಸದೆ ಮೇನಕಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಸಿಯಸ್‌ನೆಸ್ (ಇಸ್ಕಾನ್) ಧಾರ್ಮಿಕ ಸಂಘಟನೆ ವಿರುದ್ಧದ ಮೇನಕಾ ಅವರ ಆರೋಪ ತೀವ್ರ ಚರ್ಚೆಗೆ ಒಳಗಾಗಿದೆ.

ಆರೋಪ ನಿರಾಕರಣೆ: ಮೇನಕಾ ಗಾಂಧಿ ಅವರ ಆರೋಪವನ್ನು ಜಗತ್ತಿನಾದ್ಯಂತ ಸಾಕಷ್ಟು ಭಕ್ತರು ಹಾಗೂ ಪ್ರಭಾವ ಹೊಂದಿರುವ ಇಸ್ಕಾನ್ ಆಧಾರರಹಿತ ಹಾಗೂ ಸುಳ್ಳು ಎಂದು ನಿರಾಕರಿಸಿದೆ.

ಕೇಂದ್ರದ ಮಾಜಿ ಸಚಿವೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿಯಾಗಿರುವ ಮೇನಕಾ ಬಹಳ ಹಿಂದಿನಿಂದಲೂ ಪ್ರಾಣಿ ಹಿಂಸೆ ವಿರುದ್ಧ ಧ್ವನಿ ಎತ್ತುವ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ.

ದೇಶದಲ್ಲಿ ಇಸ್ಕಾನ್ ಒಂದು ಅತಿ ದೊಡ್ಡ ವಂಚನೆ ಅದು ಗೋಶಾಲೆಗಳನ್ನು ನಡೆಸುತ್ತದೆ ಮತ್ತು ಅಪಾರ ಜಮೀನು ಸೇರಿದಂತೆ ಸರ್ಕಾರದಿಂದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತದೆ ಎಂದು

ಮೇನಕಾ ಅವರು ಹೇಳಿರುವ ವಿಡಿಯೋವೊಂದು ವೈರಲ್ (Viral) ಆಗಿದೆ.

ಮೇನಕಾ ಅವರು ಆಂಧ್ರ ಪ್ರದೇಶದಲ್ಲಿರುವ (Andhra Pradesh) ಇಸ್ಕಾನ್‌ನ ಅನಂತಪುರ ಗೋಶಾಲೆಗೆ ತಾವು ಭೇಟಿ ನೀಡಿದ್ದ ಸಂದರ್ಭವನ್ನು ನೆನಪಿಸಿಕೊಂಡಿದ್ದು, ಅಲ್ಲಿ ಹಾಲು ಕೊಡುವ ಹಸು ಅಥವಾ

ಕರುಗಳ ಹೊರತಾದ ಬೇರೆ ಯಾವ ಹಸುವನ್ನೂ ಕಂಡಿರಲಿಲ್ಲ. ಇಡೀ ಡೈರಿಯಲ್ಲಿ ಒಂದು ಗೊಡ್ಡು ಹಸು ಸಹ ಇರಲಿಲ್ಲ. ಒಂದೇ ಒಂದು ಕರು ಕೂಡ ಇರಲಿಲ್ಲ. ಇದರ ಅರ್ಥ ಅವೆಲ್ಲವನ್ನೂ ಮಾರಾಟ

ಮಾಡಲಾಗಿತ್ತು” ಎಂದು ಹೇಳಿಕೆ ನೀಡಿದ್ದಾರೆ.

ಇದನ್ನು ಒದಿ: ಇಂಗು ತಿಂದವ ಮಂಗನಲ್ಲ! ಇಂಗು ತಿಂದ್ರೆ ಆರೋಗ್ಯಕ್ಕೆ ಎಷ್ಟೊಂದು ಲಾಭಗಳಿವೆ ಗೊತ್ತಾ?

ಭವ್ಯಶ್ರೀ ಆರ್.ಜೆ

Exit mobile version