ಹಂತಕರು 7 ಮಂದಿಯ ಲಿಸ್ಟ್‌ ಮಾಡಿ, ಕೊನೆಗೆ ಫಾಝಿಲ್‌ನನ್ನು ಹತ್ಯೆ ಮಾಡಿದರು : ಮಂಗಳೂರು ಪೊಲೀಸ್

Mangaluru

ಮಂಗಳೂರು : ಮಂಗಳೂರಿನ(Mangaluru) ಸುರತ್ಕಲ್ನಲ್ಲಿ(Suratkal) ನಡೆದ ಅಲ್ಪಸಂಖ್ಯಾತ ಸಮುದಾಯದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.

ಹಂತಕರು ಒಟ್ಟು ಏಳು ಮಂದಿಯ ಒಂದು ಪಟ್ಟಿಯನ್ನು ಸಿದ್ದಪಡಿಸಿಕೊಂಡು, ಅಂತಿಮವಾಗಿ ಫಾಝಿಲ್‌ನನ್ನು(Fazil) ಹತ್ಯೆ(Murder) ಮಾಡಿದರು ಎಂದು ಮಂಗಳೂರು ಪೊಲೀಸರು(Mangaluru Police) ತಿಳಿಸಿದ್ದಾರೆ.


ಬೆಳ್ಳಾರೆಯಲ್ಲಿ ಬಿಜೆಪಿ(BJP) ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು(Praveen Nettaru) ಹತ್ಯೆಯಾದ ಬೆನ್ನಲ್ಲೇ ಜುಲೈ 28ರಂದು ನಡೆದ ಈ ಕೊಲೆ ಜಿಲ್ಲೆಯಾದ್ಯಂತ ತಲ್ಲಣ ಮೂಡಿಸಿತ್ತು.

ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಇನ್ನು ಫಾಝಿಲ್‌ ಹತ್ಯೆಯ ಕುರಿತು ವಿವರ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್(N Shahsikumar), ಬಂಧಿತರು ಸುರತ್ಕಲ್ ಮೂಲದವರು.

ಆರೋಪಿಗಳು ಬಳಸುತ್ತಿದ್ದ ಕಾರಿನ ಮಾಲೀಕ ಅಜಿತ್ ಕ್ರಾಸ್ತಾ ಅವರನ್ನು ಮೊದಲು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

ಮಂಗಳವಾರ ಮುಂಜಾನೆ ಉದ್ಯಾವರ ಬಳಿ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲ ಆರು ಆರೋಪಿಗಳು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಹಂತಕರು ಆರಂಭದಲ್ಲಿ ತಮ್ಮ ಗುರಿ ಯಾರಾಗಿರಬೇಕು ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ.

ಏಳು ಜನರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅಂತಿಮವಾಗಿ ಫಾಜಿಲ್ ಅನ್ನು ಹತ್ಯೆ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಹತ್ಯೆಯ ಹಿಂದಿನ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಫಾಝಿಲ್‌ನನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬುದರ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
Exit mobile version