“ದಲಿತರ ಬಗ್ಗೆ ಈ ರೀತಿ ಯೋಚಿಸುವವನು ದೇಶ ದ್ರೋಹಿ” : ಮನೀಶ್ ಸಿಸೋಡಿಯಾ!

manish sisodia

ದೆಹಲಿಯ(Delhi) ಉಪಮುಖ್ಯಮಂತ್ರಿ(Deputy Chief minister) ಮನೀಶ್ ಸಿಸೋಡಿಯಾ(Manish Sisodia) ಅವರು ಏಪ್ರಿಲ್ 25, ಸೋಮವಾರದಂದು ರಾಜಸ್ಥಾನದ(Rajasthan) ದೇವಾಲಯದಲ್ಲಿ(Temple) ದಲಿತ ದಂಪತಿಯನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ತಡೆದ ಘಟನೆಯನ್ನು ಖಂಡಿಸಿದರು.

ರಾಜಸ್ಥಾನದ ಜಲೋರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ನೀಲಕಂಠ ಮಹಾದೇವ ದೇವಸ್ಥಾನದ ಅರ್ಚಕರು ನವವಿವಾಹಿತ ದಲಿತ ದಂಪತಿಗೆ ಶಿವ ದೇವಾಲಯ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಹೊರಗೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಬೇಕು ಎಂದು ಹೇಳಿದರು. ವರನು ಎಸ್‌.ಪಿ ಹರ್ಷವರ್ಧನ್ ಅಗರ್‌ವಾಲ್‌ಗೆ ದೂರು ದಾಖಲಿಸಿದ್ದು, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಈ ಅರ್ಚಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಭದ್ರಜೂನ್ ಠಾಣೆಯ ಪ್ರಭಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದಂಪತಿಗೆ ದೇವಾಲಯ ಪ್ರವೇಶವನ್ನು ತಡೆಯಲು ಅರ್ಚಕರು ಯತ್ನಿಸುತ್ತಿರುವ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ವಿಷಯ ತಿಳಿದು ಮಾತನಾಡಿದ ಸಿಸೋಡಿಯಾ,” ನನ್ನ ಕನಸಿನ ಭಾರತದಲ್ಲಿ ಇದು ಸ್ವೀಕಾರಾರ್ಹವಲ್ಲ. ದಲಿತರ ಬಗ್ಗೆ ಈ ರೀತಿ ಯೋಚಿಸುವವನು ದೇಶ ದ್ರೋಹಿ” ಎಂದು ಹೇಳುವ ಮೂಲಕ ಅರ್ಚಕರ ವಿರುದ್ಧ ಕಿಡಿಕಾರಿದ್ದಾರೆ.

Exit mobile version