ಮಾನ್ಯತಾ ಟೆಕ್ ಪಾರ್ಕ್‌ಗೆ `ಬೀಗ’ ಜಡಿದ ಬಿಬಿಎಂಪಿ ಅಧಿಕಾರಿಗಳು!

manyatha

ಬೆಂಗಳೂರಿನ ಯಲಹಂಕದ ಥಣಿಸಂದ್ರದಲ್ಲಿರುವ ಮಾನ್ಯತಾ ಟೆಕ್ ಪಾರ್ಕ್‌ ಅನ್ನು ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿಯುವ ಮುಖೇನ ಅಂತ್ಯ ಹಾಡಿದ್ದಾರೆ. ಯಲಹಂಕ ಬಿಬಿಎಂಪಿ ವಲಯಕ್ಕೆ ಸೇರಿಕೊಳ್ಳುವ ಮಾನ್ಯತಾ ಟೆಕ್ ಪಾರ್ಕ್‌ ಮಾಲೀಕರಿಗೆ ಈ ಹಿಂದೆ ಬಿಬಿಎಂಪಿ ಅಧಿಕಾರಿಗಳು ಹಲವು ಬಾರಿ ನೋಟಿಸ್ ಜಾರಿಮಾಡಿದ್ದರೂ ಕೂಡ ಅದನ್ನು ಲೆಕ್ಕಿಸದ ಮಾನ್ಯತಾ ಟೆಕ್ ಮಾಲಿಕರಿಗೆ ಅದನ್ನು ಮುಚ್ಚಿಸುವ ಮೂಲಕ ಡಿಸ್ಟ್ರೆಸ್ ವಾರೆಂಟ್ ಜಾರಿಗೊಳಿಸಿದ್ದಾರೆ.

ಸುಮಾರು 70 ಕೋಟಿ ಆಸ್ತಿ ತೆರಿಗೆಯನ್ನು ಪಾವತಿಸಿದ ಮಾನ್ಯತಾ ಟೆಕ್ ಪಾರ್ಕ್ ಮಾಲೀಕರಿಗೆ ಸಾಕಷ್ಟು ನೋಟಿಸ್ ಗಳನ್ನು ಕಳಿಸಿದ್ದರು, ಅದಕ್ಕೆ ಸರಿಯಾದ ಉತ್ತರವನ್ನು ನೀಡದೆ, ಬಾಕಿ ಮೊತ್ತದ ಹಣವನ್ನು ಕೊಡದೆ ಇದ್ದ ಕಾರಣವನ್ನು ಪ್ರಮುಖವಾಗಿ ಪರಿಗಣಿಸಿದ ಅಧಿಕಾರಿಗಳು ಇಂದು ಮಾನ್ಯತಾ ಟೆಕ್ ಪಾರ್ಕ್‌ಗೆ ಬೀಗ ಜಡಿಯುವ ಮುಖೇನ ತೆರೆ ಎಳೆದಿದ್ದಾರೆ. ಬೆಂಗಳೂರಿನ ಅತಿ ದೊಡ್ಡ ಟೆಕ್ ಪಾರ್ಕ್‌ಗಳಲ್ಲಿ ಮಾನ್ಯತಾ ಟೆಕ್ ಪಾರ್ಕ್‌ ತನ್ನದೇ ಹೆಸರನ್ನು ಅಗ್ರಸ್ಥಾನದಲ್ಲಿ ಉಳಿಸಿಕೊಂಡಿತ್ತು. ಆದರೆ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವ ವಿಷಯ ತೀರ ಅವಮಾನದ ಸಂಗತಿಯಾಗಿದೆ ಎಂದು ಹೇಳಲಾಗಿದೆ.

ಮಾನ್ಯತಾ ಟೆಕ್ ಪಾರ್ಕ್ ಮಾಲೀಕರು ಬಿಬಿಎಂಪಿಗೆ 70 ಕೋಟಿ ರೂಪಾಯಿಯಷ್ಟು ತೆರಿಗೆ ಕಟ್ಟದೆ ತುಂಬ ದಿನಗಳಿಂದ ಬಾಕಿ ಉಳಿಸಿಕೊಂಡಿದ್ದಾರೆ. ಈ ಕುರಿತು ಪಾಲಿಕೆ ಅಧಿಕಾರಿಗಳು ನೋಟಿಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆದರೆ ಯಾವುದೇ ನೋಟಿಸ್ಗೂ ಕ್ಯಾರೇ ಅನ್ನದ ಮಾನ್ಯತಾ ಟೆಕ್ ಮಾಲೀಕರಿಗೆ ಬುದ್ದಿ ಕಲಿಸಲು ಬಿಬಿಎಂಪಿ ಅಧಿಕಾರಿಗಳು ದಿಢೀರ್ ಬಂದು ಬೀಗ ಜಡಿದಿದ್ದಾರೆ.

Exit mobile version