ಬೆಂಗಳೂರಿನ ಟ್ರಾಫಿಕ್ ಜಾಮ್ ನಿವಾರಣೆಗೆ ಬಿಬಿಎಂಪಿ ಮಾಸ್ಟರ್ ಪ್ಲಾನ್.

Bengaluru: ಸಿಲಿಕಾನ್ ಸಿಟಿಯಲ್ಲಿ (Silicon City) ಶಾಪಿಂಗ್ ಮಾಲ್‌ಗಳ ಎದುರು ಜನದಟ್ಟಣೆ ಸಾಮಾನ್ಯ ವಾಗಿಬಿಟ್ಟಿದ್ದು, ಆಟೋ (Auto), ಕ್ಯಾಬ್‌ಗಳಲ್ಲಿ ಬರುವ ಪ್ರಯಾಣಿಕರು ಮಾಲ್ ಎದುರು ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದ್ದಾರೆ. ಇನ್ನು ಸ್ವಂತ ವಾಹನಗಳಲ್ಲಿ ಬರುವವರೂ ಕೂಡಾ ವಾಹನಗಳನ್ನು ಪಾರ್ಕಿಂಗ್ ಮಾಡುವಾಗ ಹಾಗೂ ಪಾರ್ಕಿಂಗ್ ಜಾಗ ಸಿಗದೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಬಿಬಿಎಂಪಿ (BBMP) ಹಲವು ಶಿಸ್ತು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನ ಮಾಡಿದೆ.

ಇನ್ನುಮುಂದೆ ಬೆಂಗಳೂರು (Bengaluru) ನಗರದಲ್ಲಿ ಇರುವ ಎಲ್ಲ ಶಾಪಿಂಗ್ ಮಾಲ್‌ಗಳು ತಮ್ಮಲ್ಲಿಗೆ ಬರುವ ಗ್ರಾಹಕರ ವಾಹನಗಳ ದಟ್ಟಣೆಯನ್ನುಮತ್ತು ಪಿಕ್ ಅಪ್ ಹಾಗೂ ಡ್ರಾಪ್ ಪಾಯಿಂಟ್‌ ಅನ್ನು ನಿರ್ಧರಿಸಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಪ್ರಯಾಣಿಕರನ್ನು ಪಿಕ್ ಅಪ್ ಮಾಡುವುದು ಹಾಗೂ ಡ್ರಾಪ್ ಮಾಡುವ ಪರಿಪಾಠಕ್ಕೆ ಬ್ರೇಕ್ ಹಾಕಲು ಶಾಪಿಂಗ್ ಮಾಲ್ (Shopping Mall) ಆಡಳಿತ ಮಂಡಳಿಗಳು ಕ್ರಮ ಕೈಗೋಳ್ಳಬೇಕಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅವರು ಈ ಟ್ರಾಫಿಕ್ ಜಾಮ್ ಗೆ ಸಂಬಂಧ ಫಟ್ಟಂತೆ ಶಾಪಿಂಗ್ ಮಾಲ್‌ಗಳ ಬಳಿ ವಿಪರೀತ ಟ್ರಾಫಿಕ್ ಜಾಮ್ ಆಗೋದನ್ನ ತಡೆಯಲು ಸೂಕ್ತಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಶಾಪಿಂಗ್ ಮಾಲ್‌ಗಳನ್ನು ತೆರೆಯಲು ಅನುಮತಿ ನೀಡುವ ವೇಳೆಯಲ್ಲೇ ಮಾಲ್ ಆಡಳಿತ ಮಂಡಳಿ ಪಿಕ್ ಅಪ್ ಹಾಗೂ ಡ್ರಾಪ್ ಪಾಯಿಂಟ್‌ಗಳನ್ನು (Drop Point) ನಿರ್ಧರಿಸಬೇಕು. ಒಂದು ವೇಳೆ ಸ್ಥಳಾವಕಾಶ ಇಲ್ಲವಾದರೆ ಸಾರ್ವಜನಿಕರನ್ನು ಮಾಲ್ ಬಳಿ ಇಳಿಸುವ ಹಾಗೂ ಹತ್ತಿಸಿಕೊಳ್ಳುವುದಕ್ಕೆ ಅನುಮತಿ ನಿರಾಕರಿಸಲೂ ನಿರ್ಧರಿಸಲಾಗಿದೆ. ಹೀಗಾಗಿ ಮಾಲ್ ಆಡಳಿತ ಮಂಡಳಿ ಇದೀಗ ಪ್ರಯಾಣಿಕರ ಪಿಕ್ ಅಪ್ ಹಾಗೂ ಡ್ರಾಪ್‌ಗೆ ತೆರೆದ ಪ್ರದೇಶಗಳನ್ನು ಕಾಯ್ದಿರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಶಾಪಿಂಗ್ ಮಾಲ್‌ಗಳು ಕನಿಷ್ಟ 80 ಮೀಟರ್ ಪ್ರದೇಶವನ್ನಾದರೂ ಪಿಕ್ ಅಪ್ ಹಾಗೂ ಡ್ರಾಪ್‌ಗೆ ಮೀಸಲಿಡಬೇಕು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಾಲ್ ಪ್ರವೇಶ ದ್ವಾರದ ಬಳಿಯಲ್ಲೇ ಜನರನ್ನು ಪಿಕ್ ಅಪ್ (Pickup) ಹಾಗೂ ಡ್ರಾಪ್‌ ಮಾಡೋದಕ್ಕೆ ಕಡಿವಾಣ ಹಾಕಬೇಕು ಇನ್ನು ಸ್ವಂತ ವಾಹನಗಳಲ್ಲಿ ಬರುವ ಜನರಿಗೆ ಮಾಲ್‌ಗಳು ಸೂಕ್ತ ಪಾರ್ಕಿಂಗ್ ಸೌಲಭ್ಯವನ್ನೂ ಒದಗಿಸಬೇಕಿದೆ. ವಾರಾಂತ್ಯಗಳಲ್ಲಿ ಹಾಗೂ ಸಾರ್ವಜನಿಕ ರಜಾ ದಿನಗಳಲ್ಲಿ ಮಾಲ್‌ಗಳ ಎದುರು ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮಾಲ್ ಆಡಳಿತ ಮಂಡಳಿ ಟ್ರಾಫಿಕ್ ಪೊಲೀಸರಿಗೆ (Traffic Police) ಸಹಾಯ ಹಸ್ತ ಚಾಚಬೇಕಿದ್ದು, ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಮಾಲ್‌ಗಳ ಎದುರು ಸರ್ವೀಸ್ ರಸ್ತೆ ಇದ್ದರೆ ಇನ್ನೂ ಉತ್ತಮ ಏಕೆಂದರೆ ಮಾಲ್‌ಗಳಿಗೆ ಬರುವ ಬಹುತೇಕರು ಕ್ಯಾಬ್ (Cab) ಹಾಗೂ ಆಟೋಗಳಲ್ಲಿ ಬರುತ್ತಾರೆ. ಇವರೆಲ್ಲರೂ ವಾಪಸ್ ಹೋಗುವಾಗ ಕ್ಯಾಬ್ ಬುಕ್ ಮಾಡಿದ್ದರೂ ಕೂಡಾ ಅದು ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ. ಈ ವೇಳೆ ಬಹುತೇಕರು ರಸ್ತೆಯಲ್ಲಿ ಕಾಯುತ್ತಾ ನಿಲ್ಲುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ ಸರ್ವೀಸ್ ರಸ್ತೆಇದ್ದರೆ ಈ ಸಮಸ್ಯೆ ಇರವುದಿಲ್ಲ ಹಾಗಾಗಿ ಜೊತೆಯಲ್ಲೇ ಸ್ವಂತ ವಾಹನಗಳಲ್ಲಿ ಬರುವವರೂ ಸುಲಭವಾಗಿ ಮಾಲ್ ಒಳಗೆ ಎಂಟ್ರಿಯಾಗಲು ಅಂಡರ್‌ಪಾಸ್ ಕೂಡಾ ನಿರ್ಮಿಸಿಕೊಳ್ಳಲು ಸೂಚಿಸಲಾಗಿದೆ ಈ ರೀತಿಯ ಯೋಜನೆಗಳಿಗೆ ಬಿಬಿಎಂಪಿ ಸಹಕಾರ ನೀಡಲಿದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

ಮೇಘಾ ಮನೋಹರ ಕಂಪು

Exit mobile version