ಮಾಂಸದ ಅಂಗಡಿಯು ಧಾರ್ಮಿಕ ಸ್ಥಳಗಳಿಂದ 150 ಮೀಟರ್‌ ಅಂತರವಿರಬೇಕು: ದಿಲ್ಲಿ ಪಾಲಿಕೆ ಹೊಸ ನೀತಿ

New Delhi: ದಿಲ್ಲಿ ಮುನ್ಸಿಪಲ್‌ ಕಾರ್ಪೊರೇಷನ್‌ (Municipal Corporation of Delhi) ಹೊಸ ಮಾಂಸದಂಗಡಿ (Meat Shops Away from Temples) ನೀತಿಯನ್ನು ಅಂಗೀಕರಿಸಿದ್ದು,

ಮಾಂಸದ ಅಂಗಡಿಗಳು ಹಾಗೂ ಧಾರ್ಮಿಕ ಸ್ಥಳಗಳು ಅಥವಾ ಸ್ಮಶಾನಗಳ ನಡುವಿನ ಅಂತರ ಕನಿಷ್ಠ 150 ಮೀಟರ್ ಇರಬೇಕು ಎಂದು ದಿಲ್ಲಿ ನಗರ ಪಾಲಿಕೆ ಹೊಸ ನೀತಿ ರೂಪಿಸಿದೆ.

ಹೊಸದಾಗಿ ಮಾಂಸದ ಅಂಗಡಿಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ಅಥವಾ ಪರವಾನಗಿ ನವೀಕರಿಸುವಾಗ ಈ ನೀತಿಯನ್ನು ಪರಿಗಣಿಸಲಾಗುತ್ತದೆ. ಪರಿಷ್ಕೃತ ನೀತಿಯನ್ನು ವಾಪಸ್‌

ತೆಗೆದುಕೊಳ್ಳದಿದ್ದರೆ ನಾವು ಕೋರ್ಟ್‌ (Meat Shops Away from Temples) ಮೊರೆ ಹೋಗುತ್ತೇವೆ ಎಂದು ಮಾಂಸದ ಅಂಗಡಿ ವ್ಯಾಪಾರಿಗಳು ಎಚ್ಚರಿಸಿದ್ದಾರೆ.

ನೂತನ ನೀತಿಯ ಪ್ರಕಾರ, ಮಾಂಸದ ಅಂಗಡಿಯು (Mutton Shop) ಧಾರ್ಮಿಕ ಸ್ಥಳ ಅಥವಾ ಸ್ಮಶಾನಕ್ಕಿಂತಲೂ ಕನಿಷ್ಠ 150 ಮೀಟರ್‌ ದೂರ ಇರಬೇಕು. ದಿಲ್ಲಿಯ ಪಶು ವೈದ್ಯಕೀಯ ಇಲಾಖೆಯು

ಇಂಥ ಪ್ರಸ್ತಾಪವನ್ನು ಹಿಂದೆಯೇ ಸರಕಾರಕ್ಕೆ ಸಲ್ಲಿಸಿತ್ತು ಎನ್ನುವುದು ಗಮನಾರ್ಹ.

ನೀತಿಯಲ್ಲಿನ ಮತ್ತೊಂದು ಅಂಶವೆಂದರೆ ಮಾಂಸದಂಗಡಿಗಳಿಗೆ ಪರವಾನಗಿ ನೀಡಲು ಮತ್ತು ನವೀಕರಿಸಲು ಉತ್ತರ, ದಕ್ಷಿಣ, ಪೂರ್ವದ ಪಾಲಿಕೆಗಳು 18 ಸಾವಿರ ಹಾಗೂ ಮಾಂಸದ ಸಂಸ್ಕರಣಾ ಘಟಕಗಳಿಗೆ

1.5 ಲಕ್ಷ ರೂ.ಗೆ ನಿಗದಿಪಡಿಸಿವೆ.

ಪ್ರತಿ ಮೂರು ಹಣಕಾಸು ವರ್ಷಗಳ ನಂತರ ಪರವಾನಗಿ ನೀಡಿದ ದಿನಾಂಕದಿಂದ ಶುಲ್ಕ ಮತ್ತು ದಂಡವನ್ನು ಶೇ. 15 ರಷ್ಟು ಹೆಚ್ಚಿಸಲಾಗುವುದು ಎಂದು ನೀತಿಯಲ್ಲಿ ತಿಳಿಸಲಾಗಿದ್ದು, ಈ ನೀತಿ ಭ್ರಷ್ಟಾಚಾರಕ್ಕೆ

ಅವಕಾಶ ಕಲ್ಪಿಸುತ್ತದೆ. ಕೇವಲ 2,700 ರೂ. ಕೂಡ ಪಾವತಿಸಲು ಕಷ್ಟಪಡುತ್ತಿರುವ ಅಂಗಡಿ ಮಾಲೀಕರು ಈಗ ಪರವಾನಗಿ ನವೀಕರಿಸಲು ಹೊಸದಿಲ್ಲಿ ಪಾಲಿಕೆಗೆ 7,000 ರೂ. ಪಾವತಿಸಬೇಕಾಗಿದೆ.

ಇದನ್ನು ಓದಿ: ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನೇರವಾಗಿ ದೂರು!

Exit mobile version