ಹಳ್ಳಿಯ ಜನರ ‘ಮುಲಾಮಿನ ಗಿಡ’ ; ಅಡಿಕೆ ಸೊಪ್ಪಿನ ಗಿಡ ಅಥವಾ ಜಯಂತಿ ಗಿಡದ ಬಗ್ಗೆ ಇಲ್ಲಿದೆ ಮಾಹಿತಿ

Karnataka : ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರಿಗೆ ಅತ್ಯಂತ ಚಿರಪರಿಚಿತವಾದ ಈ ಜಯಂತಿ ಗಿಡ(Medicinal Jayanthi Plant), ಭಾರತದಾದ್ಯಂತ ಕಾಣಸಿಕ್ಕರೂ ಉಷ್ಣ ವಲಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಸುಮಾರು ಒಂದೂವರೆ ಅಡಿ ಎತ್ತರಕ್ಕೆ ಬೆಳೆಯುವ ಈ ಸಸ್ಯದ ಎಲೆಗಳು ಗಾಢ ಹಸಿರು ಬಣ್ಣದಲ್ಲಿ ಇರುತ್ತವೆ.

Jyanthi plant

ಈ ಎಲೆಗಳು ನೋಡುವುದಕ್ಕೆ ಗರಗಸದ ಹಲ್ಲಿನ ಆಕಾರದಲ್ಲಿ ಇರುತ್ತವೆ. ಈ ಗಿಡದ ಇನ್ನೊಂದು ವಿಶೇಷತೆಯೆಂದರೆ(Medicinal Jayanthi Plant), ಇದು ಪ್ರತಿಯೊಂದು ಕಾಂಡದಲ್ಲಿಯೂ ಕೇವಲ ಒಂದೇ ಹೂವನ್ನು ಬಿಡುವುದು.

ಸಾಮಾನ್ಯವಾಗಿ ಈ ಹೂವು ಆರರಿಂದ ಎಂಟು ದಳಗಳನ್ನು ಹೊಂದಿದ್ದು, ಅಸಂಖ್ಯಾತ ಕೇಸರಗಳನ್ನು ಹೊಂದಿರುತ್ತವೆ.

ಈ ಹೂವುಗಳು ಪಕ್ವವಾದ ಬಳಿಕ ಕೂದಲಿನ ಎಳೆಗಳ ರೀತಿಯ ರಚನೆ ಹೊಂದಿ, ಗಾಳಿಯಲ್ಲಿ ಹಾರಿಹೋಗುವ ಮೂಲಕ ಬೀಜಗಳ ಪ್ರಸರಣ ಉಂಟಾಗುತ್ತದೆ.

ಈ ಗಿಡದ ಎಲೆಗಳು ನೆಲದ ಮೇಲೆ ಹರಡಿಕೊಂಡು ಇರುತ್ತವೆ, ಇದರ ಮೃದುವಾದ ಕಾಂಡ ಮಾತ್ರ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಇದರ ತುದಿಯಲ್ಲಿ ಪುಟ್ಟದಾದ ಹೂವು ಬೆಳೆಯುತ್ತದೆ.

ಇದನ್ನೂ ಓದಿ : https://vijayatimes.com/arvind-bellad-letter-to-cm/


ಇನ್ನು, ಸಾಂಪ್ರದಾಯಿಕ ಔಷಧೀಯ ಸಸ್ಯವಾಗಿರುವ ಈ ಜಯಂತಿ ಗಿಡ ಆಂಟಿ ಇನ್ಫ್ಲಾಮೇಟರಿ, ಆಂಟಿ ಫಂಗಲ್ ಮುಂತಾದ ಗುಣಗಳನ್ನು ಹೊಂದಿದ್ದು, ಈ ಸಸ್ಯದ ಎಲೆಗಳು , ಹೂವುಗಳು ಹಾಗೂ ಕಾಂಡವನ್ನೂ ಸಹ ಔಷಧೀಯ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ.

ಜಾಂಡೀಸ್, ಹೊಟ್ಟೆಯುರಿ, ಶ್ವಾಸ ನಾಳದ ಸಮಸ್ಯೆ, ಅತಿಸಾರ, ಫೈಲ್ಸ್ ಮುಂತಾದ ಕಾಯಿಲೆಗಳಿಗೆ ಈ ಸಸ್ಯ ಉಪಯುಕ್ತವಾಗಿದೆ.

ಅದೇ ರೀತಿ, ಆಗಾಗ ಕಾಣಿಸಿಕೊಳ್ಳುವ ಗಂಟಲು ನೋವಿಗೂ ಕೂಡ ಈ ಸಸ್ಯ ಪ್ರಯೋಜನಕಾರಿ. ಇನ್ನು, ಬಿದ್ದು ಗಾಯವಾಗಿ ರಕ್ತ ಸುರಿಯುತ್ತಿದ್ದರೆ, ಜಯಂತಿ ಗಿಡದ ರಸವನ್ನು ಹಾಕುವುದರಿಂದ ತಕ್ಷಣ ರಕ್ತದ ಹರಿವು ನಿಲ್ಲುತ್ತದೆ ಹಾಗೂ ದೇಹದಲ್ಲಿ ಯಾವುದೇ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾದರೆ ಇದು ನಿವಾರಣೆ ಮಾಡುತ್ತದೆ.

ಇದನ್ನೂ ಓದಿ : https://vijayatimes.com/supremecourt-about-hate-speech/

ಹಾಗಾಗಿ, ಜಯಂತಿ ಗಿಡದ ಎಲೆಗಳನ್ನು ಸಾಮಾನ್ಯವಾಗಿ ಆಯುರ್ವೇದ ಔಷಧಿಗಳಲ್ಲಿ(Ayurvedic Medicines) ಬಳಕೆ ಮಾಡಲಾಗುತ್ತದೆ.

ಅದೇ ರೀತಿ, ಗಂಟಲು ನೋವು ಮತ್ತು ಕೂದಲು ಉದುರುವ ಸಮಸ್ಯೆ ಇರುವವರೂ ಸಹ, ಜಯಂತಿ ಗಿಡದ ಎಲೆಗಳ ರಸವನ್ನು ಬಳಸುವುದರಿಂದ ಹಲವಾರು ಲಾಭಗಳಿವೆ.

Jayanthi plant

ರೋಗನಿರೋಧಕ ಶಕ್ತಿ ಇದರಲ್ಲಿರುವ ಕಾರಣ, ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ. ತೀವ್ರವಾದ ಕೂದಲು ಉದುರುವ ಸಮಸ್ಯೆಯಿರುವವರು, ಈ ಮನೆಮದ್ದು(Home Remedies) ಬಳಸುವುದರಿಂದ ಉತ್ತಮ ಫಲ ಕಾಣಬಹುದು.

ಹೀಗೆ, ರೋಗನಿರೋಧಕ ಗುಣವುಳ್ಳ, ಸಾಕಷ್ಟು ರೋಗಗಳನ್ನು ನಿವಾರಣೆ ಮಾಡುವ ಔಷಧೀಯ ಸಸ್ಯಗಳು ನಮ್ಮಲ್ಲಿ ಹಲವಾರಿವೆ.

https://fb.watch/g4QbACGx9l/ ಆರ್.ಟಿಎಂ ಅವರು ಮಾಡುವ ಅಕ್ರಮ ಒಂದೆರೆಡಲ್ಲ!

ಯಾವುದೇ ಅಡ್ಡಪರಿಣಾಮವೂ ಇಲ್ಲದ ಕಾರಣ ಪ್ರತಿಯೊಬ್ಬರು ಇಂತಹ ಔಷಧೀಯ ಸಸ್ಯಗಳ ಲಾಭವನ್ನು ಪಡೆಯಬಹುದು.

ಆದರೆ ಒಂದು ವಿಷಯ ಗಮನದಲ್ಲಿರಲಿ, ಯಾವುದೇ ಆಯುರ್ವೇದ ಅಥವಾ ಮನೆಮದ್ದು ಮಾಡುವ ಮುನ್ನ ಒಮ್ಮೆ ಆಯುರ್ವೇದ ಪಂಡಿತರು ಅಥವಾ ವೈದ್ಯರ ಸಲಹೆ ಮೇರೆಗೆ ಅದನ್ನು ಅನುಸರಿಸುವುದು ಸೂಕ್ತ. ಏಕೆಂದರೆ, ಕೆಲವರ ದೇಹಕ್ಕೆ ಕೆಲವು ಮನೆಮದ್ದು ಅಥವಾ ನಾಟಿ ಔಷಧಿಗಳು ಒಗ್ಗದಿರುವ ಸಾಧ್ಯತೆಗಳೂ ಇವೆ.

Exit mobile version