ಫೆಬ್ರವರಿ 20ರ ನಂತರ ದ್ವಿತೀಯ ಹಂತದ ಮೇಕೆದಾಟು ಪಾದಯಾತ್ರೆ!

ಕೋವಿಡ್ ಹೆಚ್ಚಿದ್ದ ಕಾರಣ ಹಾಗೂ ರಾಜ್ಯ ಸರ್ಕಾರದ ಒತ್ತಡ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಕೈಬಿಟ್ಟಿದ್ದ ಕಾಂಗ್ರೆಸ್‌ ಇದೀಗ ಮತ್ತೆ ಪಾದಯಾತ್ರೆಗೆ ಸಜ್ಜುಗೊಂಡಿದೆ. ಈಗ ಮತ್ತೆ ಫೆಬ್ರವರಿ 20ರ ನಂತರ 2ನೇ ಹಂತದಲ್ಲಿ ರಾಮನಗರದಿಂದ ಮತ್ತೆ ಪುನರಾರಂಭಿಸುವುದಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಸುರೇಶ್, ಫೆಬ್ರವರಿ 20ರ ನಂತರ ಮೇಕೆದಾಟು 2ನೇ ಹಂತದ ಪಾದಯಾತ್ರೆಯನ್ನು ಪುನರಾರಂಭಿಸಲಾಗುತ್ತದೆ. ಎಲ್ಲಿ ಪಾದಯಾತ್ರೆ ನಿಲ್ಲಿಸಿದ್ದೇವೋ ಅಲ್ಲಿಂದಲೇ ಮತ್ತೆ ಪಾದಯಾತ್ರೆ ಪುನರಾರಂಬಿಸುವುದಾಗಿ ತಿಳಿಸಿದರು.

ಸರ್ಕಾರದ ವಿರುದ್ದ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು ಪಾದಯಾತ್ರೆಗೆ ಎಷ್ಟುದಿನ ಅಡ್ಡಿಪಡಿಸುತ್ತಾರೆ, ಅವರು ಎನೇ ಮಾಡಿದರೂ ನಾವು ಪಾದಯಾತ್ರೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. 5 ದಿನಕ್ಕೆ ಮುಕ್ತಾಯಗೊಂಡಿದ್ದ ಮೊದಲ ಹಂತದ ಪಾದಯಾತ್ರೆ ಕೋವಿಡ್ ಹೆಚ್ಚಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ 11 ದಿನಗಳ ಮೇಕೆದಾಟು ಪಾದಯಾತ್ರೆ 5ನೇ ದಿನಕ್ಕೆ ಅಂತ್ಯವಾಗಿದ್ದು.

ಸರ್ಕಾರದ ಆದೇಶ ಮತ್ತು ಹೈಕೋರ್ಟ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಆ ಸಭೆಯಲ್ಲಿ ಪಾದಯಾತ್ರೆಯನ್ನು ಕೊನೆಗೊಳಿಸುವ ಬಗ್ಗೆಯೇ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿಸಿದ್ದರಿಂದ ಪಾದಯಾತ್ರೆ ಕೊನೆಗೊಳಿಸಿದ್ದರು. ಆದರೂ ಪಾದಯಾತ್ರೆಗೆ ಉತ್ತಮ ಬೆಂಬಲ ಕೂಡ ವ್ಯಕ್ತವಾಗಿತ್ತು.

Exit mobile version