ಗಡ್ಡ ಬಿಡುವುದರಿಂದ ಏನೆಲ್ಲಾ ವೈಜ್ಞಾನಿಕ ಲಾಭಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ

men

ತುಂಬಾ ಜನ ಯುವಕರು ನೋಡಲು ಚೆನ್ನಾಗಿ ಕಾಣಿಸಬೇಕು ಮತ್ತು ಒರಟಾಗಿ ಕಾಣಬೇಕು ಎಂದು ಗಡ್ಡವನ್ನು ಬೆಳೆಸುತ್ತಾರೆ. ಇನ್ನು ಕೆಲವರು ಪ್ರತಿದಿನ ಶೇವ್ ಮಾಡುವುದರಿಂದ ಸಮಯ ವ್ಯರ್ಥವಾಗುತ್ತದೆ ಎಂದು ಗಡ್ಡವನ್ನು(Beard) ಬಿಡುತ್ತಾರೆ. ಕೆಲವು ಅಧ್ಯಯನಗಳ ಮೂಲಕ ಗಡ್ಡ ಬಿಡುವ ವ್ಯಕ್ತಿಯು ಇತರರಿಗಿಂತ ಹೆಚ್ಚು ಆಕರ್ಷಕನಾಗಿ ಕಾಣುತ್ತಾನೆ ಎಂದು ತಿಳಿದು ಬಂದಿದೆ. ಗಡ್ಡ ಬಿಡುವುದು ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಚರ್ಮದ ಕೆಲವು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದು ಹಾನಿಕಾರಕ, ನೆರಳಾತೀತ ಕಿರಣಗಳಿಂದ ನಮ್ಮ ಮುಖವನ್ನು ರಕ್ಷಿಸುತ್ತದೆ. ದೇಹದ ಬಹುತೇಕ ಭಾಗವನ್ನು ನಾವು ಬಟ್ಟೆಯಿಂದ ಮುಚ್ಚಿಕೊಂಡಿರುವುದರಿಂದ ಕೆಲವು ಹಾನಿಕಾರಕ ಕಿರಣಗಳಿಂದ ನಮ್ಮ ಚರ್ಮ ರಕ್ಷಣೆಯಾಗುತ್ತದೆ. ನಮ್ಮ ಮುಖದ ಭಾಗಕ್ಕೆ ಯಾವುದೇ ರೀತಿಯ ರಕ್ಷಣೆ ಇಲ್ಲದೆ ಇರುವುದರಿಂದ ನಮ್ಮ ಮುಖವು ಸೂರ್ಯನ ಕಿರಣದಿಂದ ಹಾನಿಕಾರಕವಾಗುವ ಕಿರಣಗಳಿಂದ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದರಿಂದ ಮೊಡವೆ ಆಗುವುದು, ಗಾಯಗಳಾಗುವುದು, ಇನ್ನಿತರ ಸಮಸ್ಯೆಗಳು ಕಂಡುಬರುತ್ತದೆ. ಕೆಲವು ಅಪರೂಪದ ಪ್ರಕರಣಗಳಲ್ಲಿ ಕ್ಯಾನ್ಸರ್ ನಂತಹ ಸಮಸ್ಯೆಗಳು ಸಹ ಕಂಡುಬಂದಿದೆ. ಗಡ್ಡವು ನಮ್ಮ ಮುಖವನ್ನು ಆವರಿಸುವುದರಿಂದ ಇದು ಸೂರ್ಯನ ಅಪಾಯಕಾರಿ ಕಿರಣಗಳಿಂದ ನಮ್ಮ ಮುಖವನ್ನು ರಕ್ಷಿಸುತ್ತದೆ. ನಮ್ಮ ಗಡ್ಡ ಮತ್ತು ಮೀಸೆಯು ಫಿಲ್ಟರ್ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ನಮ್ಮ ಬಾಯಿಯ ಒಳಗೆ ಹೋಗುವ ಅನೇಕ ಕೀಟಾಣುಗಳ ಮತ್ತು ವೈರಸ್ ಗಳನ್ನು ಇದು ತಡೆಯುತ್ತದೆ ಮತ್ತು ನಮ್ಮ ದೇಹದಲ್ಲಿ ಅಲರ್ಜಿ ಮತ್ತು ಸೋಂಕುಗಳು ಕಡಿಮೆಯಾಗುತ್ತದೆ.

ನಾವು ಗಡ್ಡದ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯ, ಇದರಿಂದ ನಮ್ಮ ಚರ್ಮವು ಮೃದುವಾಗಿ ಇರುತ್ತದೆ. ಗಡ್ಡ ಬೆಳೆಸುವುದರಿಂದ ನಮ್ಮ ಮುಖದ ಚರ್ಮಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಗಡ್ಡವು ನಮ್ಮ ಚರ್ಮಕ್ಕೆ ನೈಸರ್ಗಿಕ ಮೊಯಿಶ್ಚರ್ ಆಗಿ ಕೆಲಸವನ್ನು ಮಾಡುತ್ತದೆ.

Exit mobile version