ಮೆಸ್ಸಿ ನಿವೃತ್ತಿ ಘೋಷಣೆ ; FIFA ವಿಶ್ವಕಪ್ 2022 ಫೈನಲ್ ಪಂದ್ಯವೇ ಅಂತ್ಯ!

Qatar : ಪುಟ್ಬಾಲ್(Football) ದಿಗ್ಗಜ ಲಿಯೋನೆಲ್ ಮೆಸ್ಸಿ(Messi Speaks About Retirement) ಇದೇ ಡಿಸೆಂಬರ್ 18 ರಂದು ನಡೆಯುವ ಫಿಫಾ ವಿಶ್ವಕಪ್ 2022ರ ಫೈನಲ್‌ ಪಂದ್ಯದ ಬಳಿಕ ನಿವೃತ್ತಿ ಪಡೆಯುವುದರ ಬಗ್ಗೆ ಇದೀಗ ಖಚಿತಪಡಿಸಿದ್ದಾರೆ.

ಪೆನಾಲ್ಟಿಯಿಂದ ಗೋಲು ಗಳಿಸಿದ ಅರ್ಜೆಂಟೀನಾ(Messi Speaks About Retirement) ಕ್ಯಾಪ್ಟನ್ ಮೆಸ್ಸಿ, ಕ್ರೊಯೇಷಿಯಾ ವಿರುದ್ಧ ಜೂಲಿಯನ್ ಅಲ್ವಾರೆಜ್ ಗಳಿಸಿದ ಇತರ ಎರಡು ಗೋಲುಗಳಲ್ಲಿ ತನ್ನ ದೇಶವನ್ನು ಫೈನಲ್‌ಗೆ ಕೊಂಡೊಯ್ಯಲು ಅದ್ಭುತ ಪ್ರದರ್ಶನ ನೀಡುವಲ್ಲಿ ಹೆಚ್ಚು ಶ್ರಮಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಮೆಸ್ಸಿ, “ಅರ್ಜೆಂಟೀನಾ ಪರ ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸಲು ಭಾರಿ ಸಂತಸವಿದೆ ಹಾಗೂ ಈ ಮೂಲಕ ಸಾಧಿಸಲು ನನಗೆ ತುಂಬಾ ಸಂತೋಷವಿದೆ” ಎಂದು ಅರ್ಜೆಂಟೀನಾದ ಮಾಧ್ಯಮ ಮಿತ್ರ ಔಟ್‌ಲೆಟ್ ಡಿಯಾರಿಯೊ ಡಿಪೋರ್ಟಿವೊ ಓಲೆಗೆ ಹೇಳಿದರು.

ಇದನ್ನೂ ಓದಿ : https://vijayatimes.com/elephant-attack-gopalaiah-statement/

“ಮುಂದಿನ ವರ್ಷಗಳಲ್ಲಿ ಸಾಧನೆ ಮಾಡಲು ನನ್ನಿಂದ ಆಗಲಿದೆಯಾ ಎಂಬುದರ ಬಗ್ಗೆ ನನಗೆ ಖಚಿತವಿಲ್ಲ.

ಆದ್ರೆ, ಈ ರೀತಿ ಮುಗಿಸಿಕೊಳ್ಳುವುದು ನನಗೆ ಅತ್ಯುತ್ತಮ ಎಂದು ಅನಿಸುತ್ತಿದೆ” ಎಂದು ಹೇಳುವ ಮುಖೇನ ಮೆಸ್ಸಿ ಮನಬಿಚ್ಚಿ ಮಾತನಾಡಿದ್ದಾರೆ. 35 ವರ್ಷ ವಯಸ್ಸಿನವರಾದ ಲಿಯೋನೆಲ್ ಮೆಸ್ಸಿ, ಇದೀಗ ತಮ್ಮ ಐದನೇ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.

ಡಿಯಾಗೋ ಮರಡೋನಾ ಮತ್ತು ಜೇವಿಯರ್ ಮಸ್ಚೆರಾನೊ ಅವರ ನಾಲ್ಕು ದಾಖಲೆಗಳನ್ನು ಲಿಯೋನೆಲ್ ಮೆಸ್ಸಿ ಹಿಂದಿಕ್ಕಿದ್ದಾರೆ ಎಂಬುದು ಗಮನಾರ್ಹ.

PSG ಫಾರ್ವರ್ಡ್ ಕತಾರ್‌ನ(Qatar) ಲುಸೈಲ್ ಸ್ಟೇಡಿಯಂನಲ್ಲಿ ಸಾಮರ್ಥ್ಯ ಮಟ್ಟದಲ್ಲಿ ಹಾಜರಾಗಿದ್ದ ಪ್ರೇಕ್ಷಕರಿಗೆ ಮೆಸ್ಸಿ ಅವರ ಪ್ರದರ್ಶನ ಮನ ಮುಟ್ಟಿದೆ.

ಇದನ್ನೂ ಓದಿ : https://vijayatimes.com/aap-mla-bhupat-bhayani/

ಈ ಗೆಲುವು, ಆಟದ ವೈಖರಿ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮವೆಂದು ಅನೇಕ ಅಭಿಮಾನಿಗಳು, ಪುಟ್ಬಾಲ್ ವೀಕ್ಷಕರು ಬಣ್ಣಿಸಿದ್ದಾರೆ.

ಮೆಸ್ಸಿ ಅವರು ನಿವೃತ್ತಿ ಘೋಷಿಸಿರುವ ಕಾರಣ, ಈ ವಿಶ್ವಕಪ್ ಗೆಲ್ಲಲು ಇದು ಅವರಿಗೆ ಕೊನೆಯ ಅವಕಾಶವಾಗಿದೆ. 2014 ರಲ್ಲಿ ಬ್ರೆಜಿಲ್‌ನಲ್ಲಿ ಜರ್ಮನಿ ವಿರುದ್ಧ ಸೋತ ನಂತರ ಅವರು ರನ್ನರ್ ಅಪ್ ಆಗಿದ್ದರು.

“ನಮ್ಮ ದಾಖಲೆಗಳು ಉತ್ತಮವಾಗಿದೆ, ಆದರೆ ಪ್ರಮುಖ ವಿಷಯವೆಂದರೆ ಗುಂಪಿನ ಉದ್ದೇಶವನ್ನು ಸಾಧಿಸುವುದು ಅತೀ ಮುಖ್ಯ ಹಾಗೂ ಇದು ಎಲ್ಲಕ್ಕಿಂತ ಸುಂದರವಾದ ವಿಷಯವಾಗಿದೆ.

ಕಠಿಣ ಹೋರಾಟದ ನಂತರ ನಾವು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದೇವೆ ಅಷ್ಟೇ ಮತ್ತು ಈ ಸಮಯದಲ್ಲಿ ನಮ್ಮ ಗುರಿಯನ್ನು ಸಾಧಿಸುವ ಪ್ರಯತ್ನದಲ್ಲಿದ್ದೇವೆ” ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ.

https://fb.watch/hp6iKmtvTf/ ‘ಮೆಜೆಸ್ಟಿಕ್ ಗೆ ಮೋದಿ ಬಂದ್ರೆ ರೋಡಿಗೆ ಮುಕ್ತಿ ಸಿಗುತ್ತಾ?’

ಮಂಗಳವಾರ ಒಲಿದ ಗೆಲುವು ಅರ್ಜೆಂಟೀನಾ ತಂಡವನ್ನು ಆರನೇ ಬಾರಿಗೆ ವಿಶ್ವಕಪ್ ಫೈನಲ್ ಪಂದ್ಯವನ್ನು ಪ್ರವೇಶಿಸಲು ಅನುಮತಿ ನೀಡಿತು.

ಈ ಗೆಲುವನ್ನು ಸಂಭ್ರಮಿಸಲು ಸಹಸ್ರಾರು ಸಂಖ್ಯೆಯಲ್ಲಿ ಅರ್ಜೆಂಟೀನಾ ಅಭಿಮಾನಿಗಳು(Argentina Fans) ಬೀದಿಗಿಳಿದು ಸಂಭ್ರಮಿಸಿದರು. ಅರ್ಜೆಂಟೀನಾ ಫೈನಲ್‌ನಲ್ಲಿ 2018ರ ಚಾಂಪಿಯನ್ ಫ್ರಾನ್ಸ್ (ಗುಂಪು ಡಿ ವಿಜೇತರು) ಅಥವಾ ಮೊರಾಕೊ (ಗುಂಪು ಎಫ್ ವಿಜೇತರು) ಅನ್ನು ಎದುರಿಸಲಿದೆ.

Exit mobile version