ಹೊಸ ವರ್ಷಕ್ಕೆ ಹಾಲು, ಮೊಸರು ದರ ಏರಿಕೆ: ಸುಳಿವು ನೀಡಿದ ರಾಜ್ಯ ಸರ್ಕಾರ

Belagavi: ನಂದಿನಿ ಬ್ರಾಂಡ್ನ (Nandini Brand) ಹಾಲು ಮತ್ತು ಮೊಸರಿನ ದರ ಏರಿಕೆ ಮಾಡುವ (Milk Price Hike – Kar Govt) ಸುಳಿವನ್ನು ರಾಜ್ಯ ಸರ್ಕಾರ ನೀಡಿದೆ. ಕೆಲ ತಿಂಗಳ ಹಿಂದಷ್ಟೇ

ದರ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ದರ ಏರಿಕೆ ಮಾಡುವ ನಿರ್ಧಾರಕ್ಕೆ (Milk Price Hike – Kar Govt) ರಾಜ್ಯ ಸರ್ಕಾರ ಬಂದಿದೆ ಎನ್ನಲಾಗಿದೆ.

ಈ ಸಂಬಂಧ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ರಾಜ್ಯ

ಸರ್ಕಾರ ಹೇಳಿದೆ. ಮಾಲೂರು ಶಾಸಕ ಕೆ ವೈ ನಂಜೇಗೌಡ (K Y Nanjegowda) ಅವರು ದರ ಏರಿಕೆ ಮಾಡುವ ಕುರಿತು ಪ್ರಶ್ನೆಯೊಂದನ್ನು ಕೇಳಿದಾದ, ಇದಕ್ಕೆ ಉತ್ತರಿಸಿದ ಪಶು ಸಂಗೋಪನೆ

ಖಾತೆ ಸಚಿವ ಕೆ ವೆಂಕಟೇಶ್ (K Venkatesh) ಅವರು, ರಾಜ್ಯದಲ್ಲಿರುವ ಇತರೇ ಖಾಸಗಿ ಬ್ರ್ಯಾಂಡ್ಗಳ ದರಕ್ಕಿಂತ ನಮ್ಮ ನಂದಿನಿ ಬ್ರ್ಯಾಂಡ್ಗಳ ದರ 10-12 ರೂಪಾಯಿ ಕಡಿಮೆ ಇದೆ.

ಈ ಕಾರಣದಿಂದಲೇ ಕಳೆದ ಅನೇಕ ತಿಂಗಳಿಂದ ಹಾಲು ಉತ್ಪಾದಕರು, ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ಹೀಗಾಗಿ ಗ್ರಾಹಕರಿಗೆ ಹೊರೆಯಾಗದಂತೆ ಹಾಲು ಮತ್ತು ಮೊಸರಿನ ದರ ಹೆಚ್ಚಿಸುವುದಾಗಿ

ಉತ್ತರ ನೀಡಿದ್ದಾರೆ. ರಾಜ್ಯ ಸರ್ಕಾರ ಅಂತಿಮ ಒಪ್ಪಿಗೆ ನೀಡಿದರೆ, ಹೊಸವರ್ಷಕ್ಕೆ ಹಾಲು ಮತ್ತು ಮೊಸರಿನ ದರ ಏರಿಕೆಯಾಗಲಿದೆ.

ಇನ್ನು ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (Karnataka Milk Federation Ltd.,) ಈಗಾಗಲೇ ಚಿಂತನೆ ನಡೆಸಿದೆ. KMF ಅಧಿಕಾರಿಗಳ ಮಟ್ಟದಲ್ಲಿ ದರ

ಏರಿಕೆ ಬಗ್ಗೆ ಚರ್ಚೆ ನಡೆಸಿದ್ದು, ರಾಜ್ಯ ಸರ್ಕಾರ ದರ ಏರಿಕೆಯ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.

ಇನ್ನು ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಕಳೆದ ಅಕ್ಟೋಬರ್ನಲ್ಲಿ 3 ರೂಪಾಯಿ ದರ ಏರಿಕೆ ಮಾಡಿತ್ತು. ಈಗ ರಾಜ್ಯದಲ್ಲಿರುವ 14 ಹಾಲು ಒಕ್ಕೂಟಗಳಿಂದ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು KMF

ತಯಾರಿ ನಡೆಸುತ್ತಿದೆ. ಹಾಲು ಒಕ್ಕೂಟಗಳಿಗೆ ಉಂಟಾಗುತ್ತಿರುವ ನಷ್ಟವನ್ನು ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನಲಾಗುತ್ತಿದೆ.

ಇದನ್ನು ಓದಿ: ಬೆಳಗಾವಿ ಅಧಿವೇಶನ: ಕೊನೆಯ ದಿನದಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ, ಜೆಡಿಎಸ್ ತಯಾರಿ

Exit mobile version