ದೇಶೀಯ ವಿಮಾನ ಯಾನದ ಕನಿಷ್ಠ ಮಿತಿ ಏರಿಕೆ

ನವದೆಹಲಿ, ಮಾ. 20: ದೇಶೀಯ ವಿಮಾನ ಯಾನದ ಪ್ರಯಾಣ ದರಕ್ಕೆ ಇದ್ದ ಕನಿಷ್ಠ ಮಿತಿಯನ್ನು ನಾಗರಿಕ ವಿಮಾನ ಯಾನ ಸಚಿವಾಲಯವು ಶೇಕಡಾ 5ರಷ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿದೆ. ಇದರ ಪರಿಣಾಮವಾಗಿ ಅತ್ಯಂತ ಅಗ್ಗದ ದರಕ್ಕೆ ಸಿಗುತ್ತಿದ್ದ ವಿಮಾನದ ಟಿಕೆಟ್​ಗಳು ದುಬಾರಿ ಆಗಲಿವೆ. ಶುಕ್ರವಾರದಂದು ಈ ಬಗ್ಗೆ ಟ್ವೀಟ್ ಮಾಡಿರುವ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್​ದೀಪ್ ಸಿಂಗ್ ಪುರಿ, ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ದರದಲ್ಲಿ ನಿರಂತರವಾಗಿ ಏರಿಕೆ ಕಂಡಿದ್ದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ದರದ ಮಿತಿಯು ತಾತ್ಕಾಲಿಕ ಮಾತ್ರ. ಒಂದು ಸಲ ವಿಮಾನಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಿದ ಮೇಲೆ ಈ ಮಿತಿಗೆ ತಡೆಯನ್ನು ನಿಲ್ಲಿಸಲಾಗುತ್ತದೆ ಎಂದು ಸಚಿವಾಲಯದಿಂದ ತಿಳಿಸಲಾಗಿದೆ. ವಿಮಾನ ಯಾನ ಸಂಸ್ಥೆಗಳು ಶೇಕಡಾ 80ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ ಮಾಡಲಿದೆ

Exit mobile version