Bihar (Patna): ಇಂಡಿಯಾ ಮೈತ್ರಿಕೂಟ (I.N.D.I.A Alliance) ಆಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್ಗಳ ಮೂಲಕ ಅಕ್ರಮ ಎಸಗಿರುವ ನರೇಂದ್ರ ಮೋದಿ ಅವರನ್ನು ಜೈಲಿಗೆ ಹಾಕುತ್ತೇವೆ ಎಂದು ಬಿಹಾರದ ಪ್ರಾದೇಶಿಕ ಪಕ್ಷ ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್ (Lalu Yadav) ಅವರ ಪುತ್ರಿ ಮಿಸಾ ಭಾರತಿ (Misa Bharti) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನರೇಂದ್ರ ಮೋದಿ (Narendra Modi) ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಅಕ್ರಮ ಎಸಗಿದ್ದಾರೆ. ಕೇಂದ್ರೀಯ ತನಿಖಾ ಏಜನ್ಸಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ಚುನಾವಣಾ ಬಾಂಡ್ಗಳ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದಾರೆ. ಹೀಗಾಗಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೋದಿಯನ್ನು ಜೈಲಿಗೆ (Jail) ಹಾಕುತ್ತೇವೆ ಎಂದಿದ್ದಾರೆ.
ಬಿಹಾರದ (Bihara) ಪಾಟಲಿಪುತ್ರ ಲೋಕಸಭಾ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿಯಾಗಿರುವ ಮಿಸಾ ಭಾರತಿ ಪಾಟ್ನಾದಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರು ಬಿಹಾರಕ್ಕೆ ಬಂದಾಗಲೆಲ್ಲಾ ನಮ್ಮ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಈ ರೀತಿಯ ಆರೋಪವನ್ನು ನಾವು ಸಹಿಸುವುದಿಲ್ಲ. ಬಿಜೆಪಿ (BJP) ಪಕ್ಷಯು ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು, ಚುನಾವಣಾ ಬಾಂಡ್ಗಳ ಮೂಲಕ ಭ್ರಷ್ಟಾಚಾರ ನಡೆಸಿದೆ. ಈ ಬಾರಿ ದೇಶದ ಜನ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟರೆ, ನರೇಂದ್ರ ಮೋದಿಯಿಂದ ಹಿಡಿದು ಎಲ್ಲ ಬಿಜೆಪಿ ನಾಯಕರೂ ಜೈಲು ಪಾಲಾಗುತ್ತಾರೆ ಎಂದು ಹೇಳಿದ್ದಾರೆ.
ಜೆಪಿ ನಡ್ಡಾ ತಿರುಗೇಟು :
ಲಾಲು ಪುತ್ರಿ ಮಿಸಾ ಭಾರತಿ (Misa Bharti) ಹೇಳಿಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (J P Nadda) ಅವರು, ಅನೇಕ ಪ್ರಕಟಣಗಳಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವವರು ಮತ್ತು ಜಾಮೀನಿನ ಮೇಲೆ ಹೊರಗಿರುವವರು ಈ ಲಾಲು ಕುಟುಂಬದವರು. ಮಿಸಾ ಭಾರತಿ ಕೂಡಾ ಅನೇಕ ಹಗರಣದಲ್ಲಿ ಆಪಾದಿತರಾಗಿದ್ದಾರೆ.
ಇಂತವರೆಲ್ಲಾ ಕಳಂಕರಹಿತ ರಾಜಕೀಯ ಜೀವನವನ್ನು ಹೊಂದಿರುವ ನರೇಂದ್ರ ಮೋದಿ ಅವರ ಮೇಲೆ ಯಾವುದೇ ಸಾಕ್ಷ್ಯಾಧಾರ ಇಲ್ಲದೇ, ಆರೋಪ ಮಾಡುವುದು ಖಂಡನಾರ್ಹ. ಇಂತಹವರಿಗೆ ದೇಶದ ಜನ ಲೋಕಸಭಾ ಚುನಾವಣೆಯಲ್ಲಿ (Loksabha Election) ತಕ್ಕ ಪಾಠ ಕಲಿಸಬೇಕು ಎಂದು ಜನತೆಗೆ ಮನವಿ ಮಾಡಿದ್ದಾರೆ.