ಏಷ್ಯನ್ ಗೇಮ್ಸ್‌ನಲ್ಲಿ100 ಪದಕಗಳನ್ನು ಗೆದ್ದು ಸಾಧನೆಗೈದ ಭಾರತ: ಅ.10 ರಂದು ಮೋದಿ ಸಂವಾದ

New Delhi: ಭಾರತವು ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ (modi tweet about asian games) ನೂರು ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಡಾಕೂಟದ 14ನೇ ದಿನದಂದು ಭಾರತದ ಮಹಿಳಾ ಕಬ್ಬಡಿ ತಂಡ ಚಿನ್ನ ಗೆಲ್ಲುವ ಮೂಲಕ ಪದಕಗಳ ಶತಕವನ್ನು ಪೂರೈಸಿತು. ಇನ್ನು ಏಷ್ಯನ್ ಗೇಮ್ಸ್‌ನಲ್ಲಿ (Asian Games) ಪದಕಗಳ ಶತಕ

ಬಾರಿಸಿದ ಭಾರತೀಯ ಸ್ಪರ್ಧಿಗಳ ಸಾಧನೆಯನ್ನು ಮೋದಿಯವರು (modi tweet about asian games) ಶ್ಲಾಘಿಸಿದ್ದಾರೆ.

ಈ 14 ದಿನಗಳಲ್ಲಿ ಏಷ್ಯಾದ ಪ್ರಯಾಣದಲ್ಲಿ ಭಾರತ ಇದುವರೆಗೆ ಒಟ್ಟು 100 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 25 ಚಿನ್ನ, 35 ಬೆಳ್ಳಿ ಹಾಗೂ 40 ಕಂಚಿನ ಪದಕಗಳು ಸೇರಿವೆ. ಆರ್ಚರಿಯಲ್ಲಿ ಚಿನ್ನದ ಪದಕ

ಗೆಲ್ಲುವ ಮೂಲಕ ಭಾರತದ ಜ್ಯೋತಿ ವೆನ್ನಮ್(Jyothi Vennum) ದಿನವನ್ನು ಆರಂಭಿಸಿದರೆ, ಅದಿತಿ ಸ್ವಾಮಿ ಕಾಂಪೌಂಡ್ ಆರ್ಚರಿಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಚೀನಾದಲ್ಲಿ ಭಾರತ ತಂಡವು ಏಷ್ಯನ್ ಗೇಮ್ಸ್ 2023 ರಲ್ಲಿ ಫೈನಲ್ (Final) ತಲುಪಿದೆ. ಪುರುಷರ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನವನ್ನು

ಭಾರತವು ಚಿನ್ನದ ಪದಕಕ್ಕಾಗಿ ಎದುರಿಸಲಿದೆ. ಅಫ್ಘಾನಿಸ್ತಾನ ತಂಡ 2010 ಮತ್ತು 2014ರಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು.

ಪಾಕಿಸ್ತಾನವನ್ನು ಈ ಬಾರಿಯೂ ಸೋಲಿಸಿ ಫೈನಲ್ ತಲುಪಿದ್ದಾರೆ. ಇದಕ್ಕೂ ಮುನ್ನ ಭಾರತ ಮಹಿಳಾ ಕ್ರಿಕೆಟ್‌ನಲ್ಲಿ ಚಿನ್ನದ ಪದಕ ಗೆದ್ದಿತ್ತು. ಈಗ ರುತುರಾಜ್ ಗಾಯಕ್ವಾಡ್ ನೇತೃತ್ವದ ತಂಡ ಕೂಡ

ಇದೇ ರೀತಿಯ ಯಶಸ್ಸನ್ನು ಸಾಧಿಸುವ ನಿರೀಕ್ಷೆಯಿದೆ.

ಹೃತ್ಪೂರ್ವಕ ಧನ್ಯವಾದಗಳು:
ತಮ್ಮ ಟ್ವಿಟರ್ (Twitter) ಖಾತೆಯಲ್ಲಿ ಭಾರತದ ಈ ಸಾಧನೆಯನ್ನು ಶ್ಲಾಘಿಸಿರುವ ಮೋದಿ ಅವರು ‘ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹತ್ವದ ಸಾಧನೆ ಮಾಡಿದ್ದು, ನಾವು 100 ಪದಕಗಳ ಗಮನಾರ್ಹ

ಮೈಲಿಗಲ್ಲನ್ನು ತಲುಪಿರುವುದು ಭಾತೀಯರು ರೋಮಾಂಚನಗೊಳ್ಳುವಂತೆ ಮಾಡಿದೆ. ಭಾರತದ ಈ ಐತಿಹಾಸಿಕ ಮೈಲಿಗಲ್ಲಿಗೆ ಕಾರಣರಾದ ನಮ್ಮ ಅಸಾಧಾರಣ ಕ್ರೀಡಾಪಟುಗಳಿಗೆ ನಾನು ಹೃತ್ಪೂರ್ವಕ

ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಕ್ಟೋಬರ್ 10 ರಂದು ನಮ್ಮ ಏಷ್ಯನ್ ಗೇಮ್ಸ್ ತಂಡ ಮತ್ತು ನಮ್ಮ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದು

ತಮ್ಮ ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ: ಶಕ್ತಿ ಯೋಜನೆಯನ್ನು ಕಷ್ಟದಿಂದಲೇ ಒಪ್ಪಿಕೊಂಡಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್

Exit mobile version